ನಿಸ್ವಾರ್ಥ ಸೇವೆ ಮತ್ತು ಸಮರ್ಪಣೆಯೇ ಮಾನವೀಯತೆಯ ಮಹಾಶಕ್ತಿ: ಪ್ರಧಾನಿ ಮೋದಿ
ನವದೆಹಲಿ, 10 ಜುಲೈ (ಹಿ.ಸ.): ಆ್ಯಂಕರ್:ನಿಸ್ವಾರ್ಥ ಸೇವೆ, ಲೋಕಕಲ್ಯಾಣ ಮತ್ತು ಸಮರ್ಪಣೆಯ ಮಹತ್ವವನ್ನು ಒತ್ತಿಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ''ಎಕ್ಸ್''ನಲ್ಲಿ ಶುಕ್ರವಾರ ಸುಭಾಷಿತವೊಂದನ್ನು ಹಂಚಿಕೊಂಡಿದ್ದಾರೆ. ಹಿತಂ ಯತ್ಸರ್ವಭೂತಾನಾಮಾತ್ಮಾನಶ್ಚ ಸುಖಾವಹಮ್। ತತ್ಕುರ್ಯ
Pm file photo


ನವದೆಹಲಿ, 10 ಜುಲೈ (ಹಿ.ಸ.):

ಆ್ಯಂಕರ್:ನಿಸ್ವಾರ್ಥ ಸೇವೆ, ಲೋಕಕಲ್ಯಾಣ ಮತ್ತು ಸಮರ್ಪಣೆಯ ಮಹತ್ವವನ್ನು ಒತ್ತಿಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಶುಕ್ರವಾರ ಸುಭಾಷಿತವೊಂದನ್ನು ಹಂಚಿಕೊಂಡಿದ್ದಾರೆ.

ಹಿತಂ ಯತ್ಸರ್ವಭೂತಾನಾಮಾತ್ಮಾನಶ್ಚ ಸುಖಾವಹಮ್। ತತ್ಕುರ್ಯಾದೀಶ್ವರೇ ಹ್ಯೇತನ್ಮೂಲಂ ಸರ್ವಾರ್ಥಸಿದ್ಧಯೇ।। ಎಂಬ ಸುಭಾಷಿತವನ್ನು ಉಲ್ಲೇಖಿಸಿದ ಅವರು, ಎಲ್ಲ ಜೀವಿಗಳ ಹಿತಕ್ಕೆ ಹಾಗೂ ಆತ್ಮಕ್ಕೆ ಸುಖ-ಶಾಂತಿ ನೀಡುವ ಕಾರ್ಯವನ್ನೇ ಮನುಷ್ಯನು ಮಾಡಬೇಕು. ಅದುವೇ ದೇವರಿಗೆ ನಿಜವಾದ ಸಮರ್ಪಣೆ ಹಾಗೂ ಎಲ್ಲಾ ರೀತಿಯ ಯಶಸ್ಸು ಮತ್ತು ಆಧ್ಯಾತ್ಮಿಕ ಸಾಧನೆಯ ಮೂಲಾಧಾರ ಎಂದು ಹೇಳಿದ್ದಾರೆ.

ನಿಸ್ವಾರ್ಥ ಭಾವದಿಂದ ಮಾಡಿದ ಕಾರ್ಯವೇ ಮಾನವೀಯತೆಯ ಅತ್ಯಂತ ದೊಡ್ಡ ಶಕ್ತಿ. ಇದೇ ಸೇವೆ ಮತ್ತು ಸಮರ್ಪಣೆಯ ಮನೋಭಾವದೊಂದಿಗೆ ಪ್ರತಿಯೊಬ್ಬ ನಾಗರಿಕರ ಜೀವನವನ್ನು ಉತ್ತಮಗೊಳಿಸುವ ಸಂಕಲ್ಪದೊಂದಿಗೆ ದೇಶ ಮುನ್ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande