ಬಂಗಾರಪೇಟೆ ಪೊಲೀಸರಿಂದ ಸರಗಳ್ಳತನ ಆರೋಪಿ ಬಂಧನ
ಬಂಗಾರಪೇಟೆ ಪೊಲೀಸರಿಂದ ಸರಗಳ್ಳತನ ಆರೋಪಿ ಬಂಧನ
ಸರಗಳ್ಳತನ ಆರೋಪಿ ವಿಘ್ನೇಶ್


ಕೋಲಾರ, ಜೂನ್ ೦೮ (ಹಿ.ಸ) :

ಆ್ಯಂಕರ್ : ಬಂಗಾರಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಸರಗಳ್ಳತನ ಪ್ರಕರದಲ್ಲಿ ಓರ್ವ ಆರೋಪಿಯನ್ನು ಬಂಧಿಸಿ, ಆರೋಪಿಯಿಂದ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿಬೆಲೆ ಬಾಳುವ ೧೦ ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಿಸಿದ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜೂ.೬ ರಂದು ಬಂಗಾರಪೇಟೆ ಪೊಲೀಸ್ ಠಾಣಾ ಸರಹದ್ದು ದೊಡ್ಡಚಿನ್ನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಐಮರಸಪುರ ಗ್ರಾಮದ ವಾಸಿ ತುಳಸಿಬಾಯಿ ರವರು ವಾಕಿಂಗ್ ಮಾಡಿಕೊಂಡು ಹೋಗುತ್ತಿರುವಾಗ ಇಬ್ಬರು ವ್ಯಕ್ತಿಗಳು ಹಲ್ಮೇಟ್ ಮತ್ತು ಮುಖಕ್ಕೆ ಮಾಸ್ಕ್ ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದು ೧೦ ಗ್ರಾಂ ನಷ್ಟು ಬಂಗಾರದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಆರೋಪಿ ಮತ್ತು ಮಾಲನ್ನು ಪತ್ತೆಮಾಡುವ ಸಲುವಾಗಿ ಬಂಗಾರಪೇಟೆ ಪೊಲೀಸ್ ನಿರೀಕ್ಷಕರು ರವಿಕುಮಾರ್. ಸಿ, ರವರ ನೇತೃತ್ವದಲ್ಲಿ ಕಿರಣ್ಕುಮಾರ್ ಬಿ.ವಿ, ಪಿ.ಎಸ್.ಐ, ಕಾಮಸಮುದ್ರಂ ಪೊಲೀಸ್ ಠಾಣೆ ರವರನ್ನು ಒಳಗೊಂಡ0ತೆ ವಿಶೇಷ ಅಪರಾಧ ಪತ್ತೆ ದಳವನ್ನು ರಚಿಸಲಾಗಿತ್ತು.

ಕಾರ್ಯಾಚರಣೆ ನಡೆಸಿದ ವಿಶೇಷ ಅಪರಾಧ ಪತ್ತೆ ದಳದ ಪೊಲೀಸರು ಪ್ರಕರಣ ದಾಖಲಾದ ೨೪ ಗಂಟೆಯೊಳಗೆ ಕೆ.ಜಿ.ಎಫ್ ನ ಕೋರಮಂಡಲ್ ವಾಸಿಯಾದ ಆರೋಪಿ ವಿಘ್ನೇಶ್, ೨೯(ವರ್ಷ) ಎಂಬಾತನನ್ನು ದಸ್ತಗಿರಿ ಮಾಡಿ ಸದರಿ ಆರೋಪಿಯಿಂದ ರೂ.೧,೨೦,೫೦೦/- ಬೆಲೆ ಬಾಳುವ ೧೦ ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಿಸಿದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.

ಡಿ.ವೈ.ಎಸ್.ಪಿ ಲಕ್ಷö್ಮಯ್ಯ. ವಿನವರ ಮರ್ಗದರ್ಶನದಲ್ಲಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಬಂಗಾರಪೇಟೆ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರು ರವಿಕುಮಾರ್. ಸಿ ಕಾಮಸಮುದ್ರಂ ಪೊಲೀಸ್ ಠಾಣೆ ಪಿ.ಎಸ್.ಐ ಬಿ.ವಿ.ಕಿರಣ್ಕುಮಾರ್, ಸಿಬ್ಬಂದಿಗಳಾದ ಮಂಜುನಾಥರೆಡ್ಡಿ, ಮುನಾವರ್ಪಾಷ, ರಾಮರಾವ್, ರಾಮಕೃಷ್ಣಾರೆಡ್ಡಿ, ಮಂಜುನಾಥ, ಲಕ್ಷö್ಮಣತೇಲಿ, ಮುರಳಿ, ರಘು, ಮುನೇಂದ್ರ, ಮುನಿರಾಜು, ಸುನೀಲ್ ಹಾಗೂ ಶಿವರಾಜ್ ರವರ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರು ಪ್ರಶಂಶಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande