ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಪಿಸಿಎ ಚಾರಿಟೇಬಲ್ ಟ್ರಸ್ಟ್ ಸಕ್ರಿಯ
ಬೆಂಗಳೂರು, 28 ಜೂನ್ (ಹಿ.ಸ.) : ಆ್ಯಂಕರ್ : ಮಕ್ಕಳನ್ನು ಪೋಲಿಯೋ ರೋಗದಿಂದ ಸಂಪೂರ್ಣವಾಗಿ ರಕ್ಷಿಸುವ ಉದ್ದೇಶದಿಂದ ಸರ್ಕಾರ ಹಮ್ಮಿಕೊಂಡಿರುವ 2026ರ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಪಿಸಿಎ ಚಾರಿಟೇಬಲ್ ಟ್ರಸ್ಟ್ 12ನೇ ವರ್ಷವೂ ಸಕ್ರಿಯವಾಗಿ ಕೈಜೋಡಿಸಿದೆ. ಅಭಿಯಾನದ ಅಂಗವಾಗಿ ಟ್ರಸ್ಟ್ನ ಸಂಸ್ಥಾಪಕ ಟ
Pca


ಬೆಂಗಳೂರು, 28 ಜೂನ್ (ಹಿ.ಸ.) :

ಆ್ಯಂಕರ್ : ಮಕ್ಕಳನ್ನು ಪೋಲಿಯೋ ರೋಗದಿಂದ ಸಂಪೂರ್ಣವಾಗಿ ರಕ್ಷಿಸುವ ಉದ್ದೇಶದಿಂದ ಸರ್ಕಾರ ಹಮ್ಮಿಕೊಂಡಿರುವ 2026ರ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಪಿಸಿಎ ಚಾರಿಟೇಬಲ್ ಟ್ರಸ್ಟ್ 12ನೇ ವರ್ಷವೂ ಸಕ್ರಿಯವಾಗಿ ಕೈಜೋಡಿಸಿದೆ.

ಅಭಿಯಾನದ ಅಂಗವಾಗಿ ಟ್ರಸ್ಟ್ನ ಸಂಸ್ಥಾಪಕ ಟ್ರಸ್ಟಿ ಸಿ. ಎಂ. ಸೈಮನ್ ಅವರು ಸ್ವಯಂಸೇವಕರಾಗಿ ದಿನವಿಡೀ ಸೇವೆ ಸಲ್ಲಿಸುವುದರ ಜೊತೆಗೆ, ಲಸಿಕಾ ಸಿಬ್ಬಂದಿಯನ್ನು ವಿವಿಧ ಲಸಿಕಾ ಕೇಂದ್ರಗಳಿಗೆ ತಲುಪಿಸಲು ಅಗತ್ಯ ಸಾರಿಗೆ ವ್ಯವಸ್ಥೆಯನ್ನು ಒದಗಿಸಿದರು. ಇದರಿಂದ ಪ್ರತಿಯೊಬ್ಬ ಅರ್ಹ ಮಗುವಿಗೂ ಜೀವ ರಕ್ಷಕ ಪೋಲಿಯೋ ಲಸಿಕೆ ತಲುಪುವಂತೆ ಸಹಕಾರ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶವನ್ನು ಪೋಲಿಯೋ ಮುಕ್ತವಾಗಿಡಲು ಸರ್ಕಾರದೊಂದಿಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸುವುದು ಅತ್ಯಗತ್ಯ ಎಂದು ತಿಳಿಸಿದರು. ಐದು ವರ್ಷದೊಳಗಿನ ಯಾವುದೇ ಮಗು ಪಲ್ಸ್ ಪೋಲಿಯೋ ಹನಿಯಿಂದ ವಂಚಿತರಾಗಬಾರದು ಎಂದು ಪೋಷಕರಿಗೆ ಮನವಿ ಮಾಡಿದರು.

ಜುಲೈ 1, 2026ರೊಳಗೆ ಪಲ್ಸ್ ಪೋಲಿಯೋ ಲಸಿಕೆ ಪಡೆಯದೆ ಉಳಿದಿರುವ ಐದು ವರ್ಷದೊಳಗಿನ ಮಕ್ಕಳನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ (PHC) ಅಥವಾ ಅಂಗನವಾಡಿ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಪ್ರತಿ ಮಗುವಿಗೆ ನೀಡುವ ಎರಡು ಹನಿ ಲಸಿಕೆ ಆರೋಗ್ಯವಂತ, ಪೋಲಿಯೋ ಮುಕ್ತ ಭಾರತದ ನಿರ್ಮಾಣದತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಯಾವುದೇ ಮಗು ಈ ಅವಕಾಶದಿಂದ ವಂಚಿತರಾಗದಂತೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸೋಣ ಎಂದು ಪಿಸಿಎ ಚಾರಿಟೇಬಲ್ ಟ್ರಸ್ಟ್ ಮನವಿ ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande