
ಧಾರವಾಡ, 28 ಜೂನ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಧಾರವಾಡ ಪ್ರಾದೇಶಿಕ ಕೇಂದ್ರದಲ್ಲಿ 2026-27ನೇ ಸಾಲಿನ ಜುಲೈ ಆವೃತ್ತಿಯ ಪ್ರಥಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ಗಳಾದ ಬಿ.ಎ/ ಬಿ.ಕಾಂ./ ಬಿ.ಎಸ್ಸಿ,/ ಬಿ.ಬಿ.ಎ./ ಬಿ.ಸಿ.ಎ./ ಬಿ.ಲಿಬ್.ಸೈನ್ಸ್./ ಬಿ.ಎಸ್.ಡಬ್ಲ್ಯೂ./ ಎಂ.ಎ./ ಎಂ.ಕಾಂ./ ಎಂ.ಎಸ್ಸಿ./ ಎಂ.ಬಿ.ಎ./ ಎಂ.ಲಿಬ್.ಸೈನ್ಸ್./ ಎಂ.ಎಸ್.ಡಬ್ಲ್ಯೂ./ ಎಂ.ಸಿ.ಎ./ ಪಿ.ಜಿ ಸರ್ಟಿಫಿಕೇಟ್/ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳ ಪ್ರವೇಶಾತಿಗೆ ಆನಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆನ್ಲೈನ್ ಅರ್ಜಿಗಳಿಗಾಗಿ ಅಧಿಕೃತ ಅಂತರ್ಜಾಲ www.ksoumysuru.ac.in ಗೆ ಭೇಟಿ ನೀಡಬಹುದು ಮತ್ತು ಹೆಚ್ಚಿನ ವಿವರಗಳಿಗಾಗಿ ಕ.ರಾ.ಮು.ವಿ., ಪ್ರಾದೇಶಿಕ ಕೇಂದ್ರ, ಧಾರವಾಡ, ಅಮರಗೋಳ 2ನೇ ಹಂತ, ಜಡ್ಜ್ ಕಾಲೋನಿ ಹತ್ತಿರ, ನವನಗರ, ಹುಬ್ಬಳ್ಳಿ., ದೂರವಾಣಿ ಸಂಖ್ಯೆ: 0836-2441199/7019314679 ಗೆ ಸಂಪರ್ಕಿಸಬಹುದೆಂದು ಪ್ರಾದೇಶಿಕ ನಿರ್ದೇಶಕರಾದ ಡಾ.ಲೋಕೇಶ.ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.