ಹಜರತ್ ಇಮಾಮ್ ಹುಸೇನ್ ತ್ಯಾಗ ಸತ್ಯ ಮತ್ತು ನ್ಯಾಯದ ಹೋರಾಟಕ್ಕೆ ಸ್ಫೂರ್ತಿ : ಪ್ರಧಾನಿ ಮೋದಿ
ನವದೆಹಲಿ, 26 ಜೂನ್ (ಹಿ.ಸ.) : ಆ್ಯಂಕರ್ : ಮೊಹರಂ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಸಂದೇಶ ಪ್ರಕಟಿಸಿದ್ದಾರೆ. ತಮ್ಮ ಸಂದೇಶದಲ್ಲಿ, ಹಜರತ್ ಇಮಾಮ್ ಹುಸೇನ್ (ಎಎಸ್) ಅವರ ತ್ಯಾಗವು ಸತ್ಯ ಮತ್ತು ನ್ಯಾಯದ ಅನ್ವೇಷಣೆಯಲ್ಲಿ ದೃಢವಾಗಿ ನಿಲ್ಲಲು ಇಂದಿಗೂ ಲಕ್ಷಾಂತರ ಜನರಿಗೆ ಸ
PM


ನವದೆಹಲಿ, 26 ಜೂನ್ (ಹಿ.ಸ.) :

ಆ್ಯಂಕರ್ : ಮೊಹರಂ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಸಂದೇಶ ಪ್ರಕಟಿಸಿದ್ದಾರೆ.

ತಮ್ಮ ಸಂದೇಶದಲ್ಲಿ, ಹಜರತ್ ಇಮಾಮ್ ಹುಸೇನ್ (ಎಎಸ್) ಅವರ ತ್ಯಾಗವು ಸತ್ಯ ಮತ್ತು ನ್ಯಾಯದ ಅನ್ವೇಷಣೆಯಲ್ಲಿ ದೃಢವಾಗಿ ನಿಲ್ಲಲು ಇಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.

ಅವರ ತ್ಯಾಗವು ಧೈರ್ಯ ಮತ್ತು ಅಚಲ ನಂಬಿಕೆಯ ಶಾಶ್ವತ ಶಕ್ತಿಯನ್ನು ನೆನಪಿಸುವ ಮಹತ್ವದ ಸಂದೇಶವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಮೊಹರಂ ಸಂದರ್ಭದಲ್ಲಿ ಹಜರತ್ ಇಮಾಮ್ ಹುಸೇನ್ ಅವರ ಆದರ್ಶಗಳು ಸಮಾಜದಲ್ಲಿ ಸತ್ಯ, ನ್ಯಾಯ, ಧೈರ್ಯ ಮತ್ತು ಮಾನವೀಯ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸಲಿ ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ಆಶಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande