ವಿದೇಶದಿಂದ ಆಮದು ಆಗುವ ಔಷಧಿಗಳ ನಿಯಮಗಳಲ್ಲಿ ಬದಲಾವಣೆಗೆ ಕೇಂದ್ರ ಸರ್ಕಾರದ ಪ್ರಸ್ತಾವ
ನವದೆಹಲಿ, 26 ಜೂನ್ (ಹಿ.ಸ.) : ಆ್ಯಂಕರ್ : ವಿದೇಶಗಳಿಂದ ಆಮದು ಮಾಡಿಕೊಳ್ಳುವ ಔಷಧಿಗಳ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಡ್ರಗ್ಸ್ ರೂಲ್ಸ್–1945ಕ್ಕೆ ತಿದ್ದುಪಡಿ ಮಾಡುವ ಕರಡು ಅಧಿಸೂಚನೆಯನ್ನು ಪ್ರಕಟಿಸಿದ್ದು, ಈ ಕುರಿತು
ಸಾಂಕೇತಿಕ


ನವದೆಹಲಿ, 26 ಜೂನ್ (ಹಿ.ಸ.) :

ಆ್ಯಂಕರ್ : ವಿದೇಶಗಳಿಂದ ಆಮದು ಮಾಡಿಕೊಳ್ಳುವ ಔಷಧಿಗಳ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಡ್ರಗ್ಸ್ ರೂಲ್ಸ್–1945ಕ್ಕೆ ತಿದ್ದುಪಡಿ ಮಾಡುವ ಕರಡು ಅಧಿಸೂಚನೆಯನ್ನು ಪ್ರಕಟಿಸಿದ್ದು, ಈ ಕುರಿತು ಸಾರ್ವಜನಿಕರು ಹಾಗೂ ಸಂಬಂಧಿತ ವಲಯಗಳಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

ಪ್ರಸ್ತಾವಿತ ತಿದ್ದುಪಡಿಯ ಪ್ರಕಾರ, ದೇಶಕ್ಕೆ ಆಮದು ಆಗುವ ಹೆಚ್ಚಿನ ಔಷಧಿಗಳು ಭಾರತಕ್ಕೆ ಪ್ರವೇಶಿಸುವ ಸಮಯದಲ್ಲಿ ಕನಿಷ್ಠ 12 ತಿಂಗಳ ಶೆಲ್ಫ್ ಲೈಫ್ ಉಳಿದಿದ್ದರೆ ಸಾಕಾಗುತ್ತದೆ. ಪ್ರಸ್ತುತ ಜಾರಿಯಲ್ಲಿರುವ ನಿಯಮದಂತೆ, ಔಷಧಿಯ ಒಟ್ಟು ಶೆಲ್ಫ್ ಲೈಫ್ನ 60 ಪ್ರತಿಶತಕ್ಕಿಂತ ಹೆಚ್ಚು ಅವಧಿ ಉಳಿದಿರಬೇಕು ಎಂಬ ಕಡ್ಡಾಯ ನಿಯಮವಿದೆ.

ಆದರೆ, ಜೈವಿಕ (ಬಯಾಲಾಜಿಕಲ್) ಔಷಧಿಗಳು ಹಾಗೂ ರೇಡಿಯೋಫಾರ್ಮಾಸ್ಯುಟಿಕಲ್ಸ್ಗಳಿಗೆ ಈಗಿರುವ 60 ಪ್ರತಿಶತ ಶೆಲ್ಫ್ ಲೈಫ್ ನಿಯಮವೇ ಮುಂದುವರಿಯಲಿದ್ದು, ಈ ವರ್ಗದ ಔಷಧಿಗಳಿಗೆ ಯಾವುದೇ ಬದಲಾವಣೆ ಅನ್ವಯವಾಗುವುದಿಲ್ಲ.

ಆರೋಗ್ಯ ಸಚಿವಾಲಯದ ಪ್ರಕಟಣೆಯ ಪ್ರಕಾರ, ಈ ತಿದ್ದುಪಡಿಯಿಂದ ಔಷಧಿಗಳ ಪೂರೈಕೆ ಸರಪಳಿ (ಸಪ್ಲೈ ಚೈನ್) ಇನ್ನಷ್ಟು ಪರಿಣಾಮಕಾರಿಯಾಗಲಿದೆ. ಔಷಧಿಗಳ ಅನಗತ್ಯ ವ್ಯರ್ಥತೆ ಕಡಿಮೆಯಾಗಲಿದ್ದು, ಔಷಧ ಕಂಪನಿಗಳು ತಮ್ಮ ಸಂಗ್ರಹವನ್ನು (ಸ್ಟಾಕ್) ಹೆಚ್ಚು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಇದರಿಂದ ವೆಚ್ಚ ಕಡಿಮೆಯಾಗುವ ಜೊತೆಗೆ ಅಗತ್ಯ ಔಷಧಿಗಳ ಲಭ್ಯತೆಯೂ ಸುಧಾರಿಸುವ ನಿರೀಕ್ಷೆಯಿದೆ.

ಸಚಿವಾಲಯವು ಸ್ಪಷ್ಟಪಡಿಸಿರುವಂತೆ, ಈ ತಿದ್ದುಪಡಿ ಕೇವಲ ಆಮದು ಸಂದರ್ಭದಲ್ಲಿ ಔಷಧಿಗಳ ಉಳಿದಿರುವ ಶೆಲ್ಫ್ ಲೈಫ್ಗೆ ಮಾತ್ರ ಸಂಬಂಧಿಸಿದೆ. ಔಷಧಿಗಳ ಗುಣಮಟ್ಟ, ಸುರಕ್ಷತೆ ಹಾಗೂ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದ ಎಲ್ಲಾ ಮಾನದಂಡಗಳು ಮತ್ತು ನಿಯಮಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande