
ನವದೆಹಲಿ, 22 ಜೂನ್ (ಹಿ.ಸ.) :
ಆ್ಯಂಕರ್ : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಭಾರಿ ಯಶಸ್ಸು, ಯೋಗವು ವಿಶ್ವದಾದ್ಯಂತ ಕೋಟ್ಯಂತರ ಜನರನ್ನು ದೈಹಿಕವಾಗಿ ಆರೋಗ್ಯವಂತರನ್ನಾಗಿಸುವುದರ ಜೊತೆಗೆ ಆತ್ಮವಿಶ್ವಾಸದಿಂದ ಸಕಾರಾತ್ಮಕ ಜೀವನ ನಡೆಸಲು ಪ್ರೇರೇಪಿಸುತ್ತಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಯೋಗದ ಮಹತ್ವವನ್ನು ಒತ್ತಿ ಹೇಳುವ ಸಂಸ್ಕೃತ ಶ್ಲೋಕವೊಂದನ್ನು ಉಲ್ಲೇಖಿಸಿದ್ದಾರೆ.
“ಚಿತ್ತಪ್ರಶಮನೋಪಾಯೋ ಯೋಗ ಇತ್ಯಭಿಧೀಯತೇ।
ಪ್ರಾಣಸ್ಪಂದನನಿರೋಧೋ ವಾ ದ್ವೇಧಾ ಯೋಗಸ್ಯ ಧಾರಣಾ॥”
ಅಂದರೆ, ಮನಸ್ಸನ್ನು ಶಾಂತಗೊಳಿಸುವ ಸಾಧನವೇ ಯೋಗ. ಹಾಗೆಯೇ ಉಸಿರಾಟದ ಚಲನೆಯನ್ನು ನಿಯಂತ್ರಿಸುವುದು ಯೋಗದ ಮತ್ತೊಂದು ಪ್ರಮುಖ ಅಂಶವಾಗಿದೆ ಎಂಬ ಅರ್ಥವನ್ನು ಈ ಶ್ಲೋಕ ಒಳಗೊಂಡಿದೆ.
ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ; ಅದು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನ ಸಾಧಿಸುವ ಜೀವನಶೈಲಿಯಾಗಿದೆ. ಜಗತ್ತಿನ ವಿವಿಧ ದೇಶಗಳಲ್ಲಿ ಯೋಗದ ಬಗ್ಗೆ ಹೆಚ್ಚುತ್ತಿರುವ ಆಸಕ್ತಿ ಭಾರತದ ಪ್ರಾಚೀನ ಜ್ಞಾನ ಪರಂಪರೆಯ ಮಹತ್ವವನ್ನು ಮತ್ತೊಮ್ಮೆ ಜಗತ್ತಿಗೆ ಪರಿಚಯಿಸಿದೆ ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.