ಅಫಘಾನಿಸ್ತಾನಕ್ಕೆ ಭಾರತದ ಮಾನವೀಯ ನೆರವು ಮುಂದುವರಿಕೆ
ನವದೆಹಲಿ, 17 ಜೂನ್ (ಹಿ.ಸ.) : ಆ್ಯಂಕರ್ : ಅಫಘಾನಿಸ್ತಾನದ ಜನರ ಕಲ್ಯಾಣ ಮತ್ತು ಮಾನವೀಯ ಅಗತ್ಯಗಳಿಗೆ ಬೆಂಬಲ ನೀಡುವ ತನ್ನ ಬದ್ಧತೆಯನ್ನು ಭಾರತ ಮತ್ತೊಮ್ಮೆ ಪುನರುಚ್ಚರಿಸಿದೆ. ಈ ನಿಟ್ಟಿನಲ್ಲಿ ಭಾರತವು ಕಾಬೂಲ್ಗೆ ಇನ್ನೂ 5 ಟನ್ ಅಗತ್ಯ ಔಷಧಿಗಳನ್ನು ರವಾನಿಸಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿ
Medical


ನವದೆಹಲಿ, 17 ಜೂನ್ (ಹಿ.ಸ.) :

ಆ್ಯಂಕರ್ : ಅಫಘಾನಿಸ್ತಾನದ ಜನರ ಕಲ್ಯಾಣ ಮತ್ತು ಮಾನವೀಯ ಅಗತ್ಯಗಳಿಗೆ ಬೆಂಬಲ ನೀಡುವ ತನ್ನ ಬದ್ಧತೆಯನ್ನು ಭಾರತ ಮತ್ತೊಮ್ಮೆ ಪುನರುಚ್ಚರಿಸಿದೆ. ಈ ನಿಟ್ಟಿನಲ್ಲಿ ಭಾರತವು ಕಾಬೂಲ್ಗೆ ಇನ್ನೂ 5 ಟನ್ ಅಗತ್ಯ ಔಷಧಿಗಳನ್ನು ರವಾನಿಸಿದೆ.

ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಫಘಾನ್ ಜನರ ಆರೋಗ್ಯ ಮತ್ತು ಮಾನವೀಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಔಷಧಿ ನೆರವು ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಫಘಾನಿಸ್ತಾನದಲ್ಲಿ ಆರೋಗ್ಯ ಸೇವೆಗಳು ಮತ್ತು ಮೂಲಭೂತ ಸೌಲಭ್ಯಗಳ ಮೇಲಿನ ಒತ್ತಡ ಮುಂದುವರಿದಿರುವ ಸಂದರ್ಭದಲ್ಲಿ, ಭಾರತದ ಈ ಕ್ರಮವು ಅಲ್ಲಿನ ಜನರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸಲು ಸಹಕಾರಿಯಾಗಲಿದೆ. ಮಾನವೀಯ ನೆರವು, ಆರೋಗ್ಯ ಸೇವೆ ಮತ್ತು ಅಭಿವೃದ್ಧಿ ಸಹಕಾರದ ಮೂಲಕ ಅಫಘಾನಿಸ್ತಾನದ ಜನರೊಂದಿಗೆ ಭಾರತ ತನ್ನ ಸಾಂಪ್ರದಾಯಿಕ ಸ್ನೇಹ ಮತ್ತು ಸಹಕಾರವನ್ನು ಮುಂದುವರಿಸುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande