ಭಾರತ–ಮೊನಾಕೊ ಸಹಕಾರ ವಿಸ್ತರಣೆಗೆ ಒತ್ತು
ನೈಸ್ (ಫ್ರಾನ್ಸ್), 17 ಜೂನ್ (ಹಿ.ಸ.) : ಆ್ಯಂಕರ್ : ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಮೊನಾಕೊದ ಆಡಳಿತ ಮುಖ್ಯಸ್ಥ ಪ್ರಿನ್ಸ್ ಆಲ್ಬರ್ಟ್ ದ್ವಿತೀಯರನ್ನು ಭೇಟಿ ಮಾಡಿ, ಭಾರತ–ಮೊನಾಕೊ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಕುರಿತು ಮಹತ್ವದ ಚರ್ಚೆ ನಡೆ
Meet


ನೈಸ್ (ಫ್ರಾನ್ಸ್), 17 ಜೂನ್ (ಹಿ.ಸ.) :

ಆ್ಯಂಕರ್ : ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಮೊನಾಕೊದ ಆಡಳಿತ ಮುಖ್ಯಸ್ಥ ಪ್ರಿನ್ಸ್ ಆಲ್ಬರ್ಟ್ ದ್ವಿತೀಯರನ್ನು ಭೇಟಿ ಮಾಡಿ, ಭಾರತ–ಮೊನಾಕೊ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಕುರಿತು ಮಹತ್ವದ ಚರ್ಚೆ ನಡೆಸಿದರು.

ಭೇಟಿಯ ವೇಳೆ ಸುಸ್ಥಿರ ಅಭಿವೃದ್ಧಿ, ನೀಲಿ ಆರ್ಥಿಕತೆ, ನಾವೀನ್ಯತೆ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳಂತಹ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವ ಸಾಧ್ಯತೆಗಳ ಕುರಿತು ಸಮಾಲೋಚನೆ ನಡೆಯಿತು.

ಈ ಸಂದರ್ಭದಲ್ಲಿ ಫ್ರಾನ್ಸ್ನ ನೈಸ್ ನಗರದಲ್ಲಿ ನಡೆಯುತ್ತಿರುವ ‘ಭಾರತ್ ಇನೋವೇಟ್ಸ್ 2026’ ಕಾರ್ಯಕ್ರಮದ ಕುರಿತು ಪಿಯೂಷ್ ಗೋಯಲ್ ಅವರು ಪ್ರಿನ್ಸ್ ಆಲ್ಬರ್ಟ್ ಅವರಿಗೆ ಮಾಹಿತಿ ನೀಡಿದರು. ಭಾರತದ ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಜೊತೆಗೆ, ಅಂತರರಾಷ್ಟ್ರೀಯ ಸಹಯೋಗವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

ಭಾರತವು ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಯ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆ, ಮೊನಾಕೊದೊಂದಿಗೆ ಪರಸ್ಪರ ಸಹಕಾರಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದು ಗೋಯಲ್ ಅಭಿಪ್ರಾಯಪಟ್ಟರು.

ಭೇಟಿಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಮುಂಬರುವ ವರ್ಷಗಳಲ್ಲಿ ಭಾರತ–ಮೊನಾಕೊ ಸಂಬಂಧಗಳು ಹೊಸ ಎತ್ತರ ತಲುಪಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉಭಯ ದೇಶಗಳ ನಡುವಿನ ಸಹಕಾರವು ಆರ್ಥಿಕ, ತಾಂತ್ರಿಕ ಹಾಗೂ ಪರಿಸರ ಸ್ನೇಹಿ ಅಭಿವೃದ್ಧಿಗೆ ಹೊಸ ಆಯಾಮ ನೀಡಲಿದೆ ಎಂದು ಅವರು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande