ಸ್ಲೋವಾಕಿಯಾದ ವಿಶಿಷ್ಟ ಸ್ವಾಗತ ಸಂಪ್ರದಾಯಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ
ಬ್ರಾಟಿಸ್ಲಾವಾ, 15 ಜೂನ್ (ಹಿ.ಸ.) : ಆ್ಯಂಕರ್ : ಸ್ಲೋವಾಕಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ವಿಶಿಷ್ಟ ಸ್ವಾಗತ ಸಂಪ್ರದಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಸ್ಲೋವಾಕಿಯಾದ ಸಾಂಸ್ಕೃತಿಕ ಪರಂಪರೆ ಮತ್ತು
PM-Modi-Slovakia-Welcome


PM-Modi-Slovakia-Welcome


ಬ್ರಾಟಿಸ್ಲಾವಾ, 15 ಜೂನ್ (ಹಿ.ಸ.) :

ಆ್ಯಂಕರ್ : ಸ್ಲೋವಾಕಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ವಿಶಿಷ್ಟ ಸ್ವಾಗತ ಸಂಪ್ರದಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಸ್ಲೋವಾಕಿಯಾದ ಸಾಂಸ್ಕೃತಿಕ ಪರಂಪರೆ ಮತ್ತು ಸ್ನೇಹದ ಮೌಲ್ಯಗಳನ್ನು ಕೊಂಡಾಡಿದ್ದಾರೆ.

ಸ್ಲೋವಾಕಿಯಾದಲ್ಲಿ ಸ್ವಾಗತದ ವೇಳೆ ಸಾಂಪ್ರದಾಯಿಕವಾಗಿ ಅತಿಥಿಗಳಿಗೆ ಬ್ರೆಡ್ ಮತ್ತು ಉಪ್ಪು ನೀಡುವ ಸಂಪ್ರದಾಯವಿದ್ದು, ಅದನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, “ಈ ದೇಶದಲ್ಲಿ ಸ್ವಾಗತದ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಬ್ರೆಡ್ ಮತ್ತು ಉಪ್ಪು ನೀಡಲಾಯಿತು. ಇದು ಸ್ಲೋವಾಕಿಯಾದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ಸದ್ಭಾವನೆ ಮತ್ತು ಸ್ನೇಹದ ಮೌಲ್ಯಗಳನ್ನು ಪ್ರತಿಬಿಂಬಿಸುವ ಸುಂದರ ಸಂಪ್ರದಾಯವಾಗಿದೆ” ಎಂದು ಹೇಳಿದ್ದಾರೆ.

ಇದೇ ವೇಳೆ ಬ್ರಾಟಿಸ್ಲಾವಾದಲ್ಲಿ ಭಾರತೀಯ ಸಮುದಾಯದಿಂದ ದೊರೆತ ಆತ್ಮೀಯ ಸ್ವಾಗತಕ್ಕೂ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ. “ನಿನ್ನೆ ಸಂಜೆ ಬ್ರಾಟಿಸ್ಲಾವಾದಲ್ಲಿ ದೊರೆತ ಸ್ವಾಗತ ನಿಜಕ್ಕೂ ವಿಶೇಷವಾಗಿತ್ತು. ಭಾರತೀಯ ಸಮುದಾಯದ ಪ್ರೀತಿ, ಆತ್ಮೀಯತೆ ಮತ್ತು ಉತ್ಸಾಹಕ್ಕೆ ನಾನು ಋಣಿ. ಇಂತಹ ಭಾವನೆಗಳು ನಮ್ಮ ಜನರ ನಡುವಿನ ಬಲವಾದ ಬಾಂಧವ್ಯವನ್ನು ಪ್ರತಿಬಿಂಬಿಸುತ್ತವೆ ಹಾಗೂ ಭಾರತ–ಸ್ಲೋವಾಕಿಯಾ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ” ಎಂದು ಅವರು ತಿಳಿಸಿದ್ದಾರೆ.

ಫ್ರಾನ್ಸ್ ಪ್ರವಾಸ ಮುಗಿಸಿದ ನಂತರ ಪ್ರಧಾನಿ ಮೋದಿ ಸ್ಲೋವಾಕಿಯಾಗೆ ಆಗಮಿಸಿದ್ದು, ಅವರ ಭೇಟಿಯು ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಮತ್ತು ಸಾಂಸ್ಕೃತಿಕ ಸಂಬಂಧಗಳಿಗೆ ಹೊಸ ಉತ್ತೇಜನ ನೀಡುವ ನಿರೀಕ್ಷೆ ಇದೆ. ಸ್ಲೋವಾಕಿಯಾದಲ್ಲಿ ಭಾರತೀಯ ಸಮುದಾಯ ನೀಡಿದ ಭವ್ಯ ಸ್ವಾಗತವು ಭಾರತ ಮತ್ತು ಸ್ಲೋವಾಕಿಯಾ ನಡುವಿನ ಸ್ನೇಹಪೂರ್ಣ ಬಾಂಧವ್ಯದ ಪ್ರತೀಕವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande