ಲಘುಚಿತ್ರ ಕಲಾವಿದರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂವಾದ
ನಾನಾ
MURMU-MET-MINIATURE-ARTIST


ನವದೆಹಲಿ, 15 ಜೂನ್ (ಹಿ.ಸ.) :

ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ರಾಷ್ಟ್ರಪತಿ ಭವನದಲ್ಲಿ ಭಾರತದ ಸಾಂಪ್ರದಾಯಿಕ ಲಘುಚಿತ್ರ (ಮಿನಿಯೇಚರ್) ಕಲಾ ಶೈಲಿಗಳ ಕಲಾವಿದರ ತಂಡವನ್ನು ಭೇಟಿ ಮಾಡಿ, ಅವರ ಕಲಾಕೃತಿಗಳನ್ನು ವೀಕ್ಷಿಸಿದರು.

ರಾಷ್ಟ್ರಪತಿ ಕಾರ್ಯಾಲಯದ ಮಾಹಿತಿ ಪ್ರಕಾರ, ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ ‘ಆರ್ಟಿಸ್ಟ್-ಇನ್-ರೆಸಿಡೆನ್ಸ್’ ಕಾರ್ಯಕ್ರಮದಡಿ ವಾಸ್ತವ್ಯ ಹೂಡಿರುವ 11 ಕಲಾವಿದರು ರಾಜಸ್ಥಾನಿ ಸೇರಿದಂತೆ ನಾನಾ ಸಾಂಪ್ರದಾಯಿಕ ಲಘುಚಿತ್ರ ಕಲಾ ಶೈಲಿಗಳನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು ಕಲಾವಿದರೊಂದಿಗೆ ಸಂವಾದ ನಡೆಸಿ, ಅವರ ಕಲಾ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಮೆಚ್ಚಿದರು.

‘ಆರ್ಟಿಸ್ಟ್-ಇನ್-ರೆಸಿಡೆನ್ಸ್’ ಕಾರ್ಯಕ್ರಮವು ಭಾರತದ ಶ್ರೀಮಂತ ಕಲಾ ಪರಂಪರೆಯನ್ನು ಸಂಭ್ರಮಿಸುವ ಮಹತ್ವದ ವೇದಿಕೆಯಾಗಿದ್ದು, ಸಾಂಸ್ಕೃತಿಕ ಗುರುತನ್ನು ಉಳಿಸಿಕೊಳ್ಳುವಲ್ಲಿ ಜೀವಂತ ಕಲಾ ಸಂಪ್ರದಾಯಗಳ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತದೆ. ಜೊತೆಗೆ, ಮುಂದಿನ ಪೀಳಿಗೆಗೆ ಭಾರತೀಯ ಸಾಂಪ್ರದಾಯಿಕ ಕಲೆಗಳ ಬಗ್ಗೆ ಅರಿವು ಮತ್ತು ಪ್ರೇರಣೆಯನ್ನು ನೀಡುವ ಉದ್ದೇಶವನ್ನೂ ಹೊಂದಿದೆ.

ಈ ಕಾರ್ಯಕ್ರಮದ ಮೂಲಕ ದೇಶದ ನಾನಾ ಭಾಗಗಳ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರೆಯುತ್ತಿದ್ದು, ಭಾರತದ ವೈವಿಧ್ಯಮಯ ಕಲಾ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಕಾರ್ಯಕ್ಕೆ ಹೊಸ ಚೈತನ್ಯ ಸಿಕ್ಕಂತಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande