ರಕ್ತದಾನದ ಮೂಲಕ ಮಾನವೀಯತೆ ಬಲಪಡಿಸೋಣ : ಪ್ರಲ್ಹಾದ್ ಜೋಶಿ
ಹುಬ್ಬಳ್ಳಿ, 14 ಜೂನ್ (ಹಿ.ಸ.) : ಆ್ಯಂಕರ್ : ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಾರ್ವಜನಿಕರಿಗೆ ಶುಭಾಶಯಗಳನ್ನು ತಿಳಿಸಿ, ರಕ್ತದಾನದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಈ ಕುರಿತು ಎಕ್ಸನಲ್ಲಿ ಸಂದೇಶ ನೀಡಿರುವ ಅವರು, “ರಕ್ತದಾನವು ಜೀವ ಉಳಿಸುವ ಮಹಾದಾನ. ನಮ್
Joshi post


ಹುಬ್ಬಳ್ಳಿ, 14 ಜೂನ್ (ಹಿ.ಸ.) :

ಆ್ಯಂಕರ್ : ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಾರ್ವಜನಿಕರಿಗೆ ಶುಭಾಶಯಗಳನ್ನು ತಿಳಿಸಿ, ರಕ್ತದಾನದ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ಈ ಕುರಿತು ಎಕ್ಸನಲ್ಲಿ ಸಂದೇಶ ನೀಡಿರುವ ಅವರು, “ರಕ್ತದಾನವು ಜೀವ ಉಳಿಸುವ ಮಹಾದಾನ. ನಮ್ಮ ಒಂದು ಹನಿ ರಕ್ತ ಮತ್ತೊಬ್ಬರ ಬದುಕಿಗೆ ಹೊಸ ಆಶಾಕಿರಣವಾಗಬಹುದು” ಎಂದು ಹೇಳಿದ್ದಾರೆ.

ಸ್ವಯಂ ಪ್ರೇರಿತ ರಕ್ತದಾನದ ಮೂಲಕ ಮಾನವೀಯತೆ, ಸಹಾನುಭೂತಿ ಮತ್ತು ಸೇವಾಭಾವವನ್ನು ಮತ್ತಷ್ಟು ಬಲಪಡಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಕ್ತದಾನವು ಕೇವಲ ವೈದ್ಯಕೀಯ ನೆರವಲ್ಲ, ಅದು ಜೀವ ಉಳಿಸುವ ಸಾಮಾಜಿಕ ಜವಾಬ್ದಾರಿಯೂ ಆಗಿದೆ. ಆರೋಗ್ಯಕರ ಮತ್ತು ಮಾನವೀಯ ಮೌಲ್ಯಗಳನ್ನು ಹೊಂದಿರುವ ಸಮಾಜ ನಿರ್ಮಾಣಕ್ಕೆ ರಕ್ತದಾನದಂತಹ ಸೇವಾ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಜೋಶಿ ಕರೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande