
ಹುಬ್ಬಳ್ಳಿ, 14 ಜೂನ್ (ಹಿ.ಸ.) :
ಆ್ಯಂಕರ್ : ಹುಬ್ಬಳ್ಳಿ ರೈಲ್ವೆ ಅಂಚೆ ವಿಭಾಗದ ಅಂಚೆ ಇಲಾಖೆ ಪಿಂಚಣಿದಾರಿಗಾಗಿ ಪಿಂಚಣಿ ಅದಾಲತ್ನ್ನು ಜೂನ್ 22 ರಂದು ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಗಿರಿಣಿ ಚಾಳ ಎದುರಿನ ರೈಲ್ವೆ ಅಂಚೆ ವಿಭಾಗದ ಅಧೀಕ್ಷಕರ ಕಾರ್ಯಾಲಯದಲ್ಲಿ ಆಯೋಜಿಸಲಾಗಿದೆ.
ಸೇವೆಯಿಂದ ನಿವೃತ್ತರಾದ ನೌಕರರ ಪಿಂಚಣಿ ಮತ್ತು ಇತರೆ ನಿವೃತ್ತಿ ಸೌಲಭ್ಯಗಳ ಹಾಗೂ ಕುಟುಂಬ ಪಿಂಚಣಿದಾರರ ಅಹವಾಲುಗಳೇನಾದರೂ ಇದ್ದಲ್ಲಿ ಅವುಗಳನ್ನು ಅದಾಲತ್ನಲ್ಲಿ ಆಲಿಸಲಾಗುತ್ತದೆ. ಗ್ರಾಮೀಣ ಅಂಚೆ ಸೇವಕರು ಮತ್ತಿತರಿಗೆ ಅದಾಲತ್ನಲ್ಲಿ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ. ಅದಾಲತ್ನಲ್ಲಿ ಭಾಗವಹಿಸುವವರಿಗೆ ಯಾವುದೇ ಭತ್ಯೆ ನೀಡಲಾಗುವುದಿಲ್ಲ.
ಅದಾಲತ್ನಲ್ಲಿ ತೀರ್ಮಾನಿಸುವ ಅಹವಾಲುಗಳಿದ್ದಲ್ಲಿ ಅಧೀಕ್ಷಕರು, ರೈಲ್ವೆ ಅಂಚೆ ವಿಭಾಗ, ಹುಬ್ಬಳ್ಳಿ 580029 ಈ ವಿಳಾಸಕ್ಕೆ ಜೂನ್ 18 ರೊಳಗಾಗಿ ಲಿಖಿತ ರೂಪದಲ್ಲಿ ಅಥವಾ rmsdoHB.ka@indiapost.gov.in ಇಮೇಲ್ ಮೂಲಕ ಕಳಿಸಬಹುದು ಎಂದು ಹುಬ್ಬಳ್ಳಿ ರೈಲ್ವೆ ಅಂಚೆ ವಿಭಾಗದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.