ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡಿದರೆ ಕಠಿಣ ಕ್ರಮ : ಬಾರ್, ಹೋಟೆಲ್ ಮಾಲೀಕರಿಗೆ ಪೊಲೀಸ್ ಇಲಾಖೆ ಎಚ್ಚರಿಕೆ
ಬಾಗಲಕೋಟೆ, 14 ಜೂನ್ (ಹಿ.ಸ.) : ಆಂಕರ್ : ಯುವ ಸಮುದಾಯವನ್ನು ದುಶ್ಚಟಗಳಿಂದ ದೂರವಿಡುವ ಉದ್ದೇಶದಿಂದ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದ್ದು, ಯಾವುದೇ ಬಾರ್ ಹಾಗೂ ಹೋಟೆಲ್ಗಳಲ್ಲಿ ಅಪ್ರಾಪ್ತ ಯುವಕರಿಗೆ ಮದ್ಯ ವಿತರಿಸದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧ
Sanhe


ಬಾಗಲಕೋಟೆ, 14 ಜೂನ್ (ಹಿ.ಸ.) :

ಆಂಕರ್ : ಯುವ ಸಮುದಾಯವನ್ನು ದುಶ್ಚಟಗಳಿಂದ ದೂರವಿಡುವ ಉದ್ದೇಶದಿಂದ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದ್ದು, ಯಾವುದೇ ಬಾರ್ ಹಾಗೂ ಹೋಟೆಲ್ಗಳಲ್ಲಿ ಅಪ್ರಾಪ್ತ ಯುವಕರಿಗೆ ಮದ್ಯ ವಿತರಿಸದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಪೊಲೀಸ್ ಠಾಣೆಯಲ್ಲಿ ಬಾರ್ ಹಾಗೂ ಹೋಟೆಲ್ ಮಾಲೀಕರಿಗಾಗಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಡಿಎಐಎಸ್ಪಿ ಸಯ್ಯದ್ ರೋಷನ್ ಜಮೀರ ಅವರು, ಯುವಕರು ಮದ್ಯ ಹಾಗೂ ಮಾದಕ ವ್ಯಸನಗಳಿಗೆ ಬಲಿಯಾಗುವುದನ್ನು ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು

ಮದ್ಯ ಖರೀದಿಸಲು ಬರುವ ಯುವಕರ ವಯಸ್ಸಿನ ಬಗ್ಗೆ ಅನುಮಾನ ಕಂಡುಬಂದಲ್ಲಿ ಕಡ್ಡಾಯವಾಗಿ ಅವರ ಗುರುತಿನ ಚೀಟಿಯನ್ನು ಪರಿಶೀಲಿಸಬೇಕು. ವಯಸ್ಸಿನ ದೃಢೀಕರಣವಿಲ್ಲದೆ ಯಾವುದೇ ಕಾರಣಕ್ಕೂ ಮದ್ಯ ವಿತರಿಸಬಾರದು ಎಂದು ಬಾರ್ ಹಾಗೂ ಹೋಟೆಲ್ ಮಾಲೀಕರಿಗೆ ಸೂಚಿಸಿದರು.

21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರಿಗೆ ಮದ್ಯ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮದ್ಯದ ದುಷ್ಪರಿಣಾಮಗಳಿಂದ ಯುವಜನತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಬೇಕು ಎಂದು ಅವರು ಹೇಳಿದರು.

ಸಭೆಯಲ್ಲಿ ಸಿಪಿಐ ಎ. ನಾಗರಡ್ಡಿ ಸೇರಿದಂತೆ ನಗರದ ವಿವಿಧ ಬಾರ್ ಹಾಗೂ ಹೋಟೆಲ್ ಮಾಲೀಕರು ಉಪಸ್ಥಿತರಿದ್ದರು. ಅಧಿಕಾರಿಗಳು ನಿಯಮ ಪಾಲನೆ, ಗ್ರಾಹಕರ ವಯಸ್ಸಿನ ಪರಿಶೀಲನೆ ಹಾಗೂ ಕಾನೂನು ಬದ್ಧವಾಗಿ ವ್ಯಾಪಾರ ನಡೆಸುವ ಕುರಿತು ಮಾಲೀಕರಿಗೆ ಮಾಹಿತಿ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande