ಕೊರಟಗೆರೆಯಲ್ಲಿ ಜಿ.ಪರಮೇಶ್ವರ ಅಭಿನಂದನಾ ಸಮಾರಂಭ
ತುಮಕೂರು, 14 ಜೂನ್ (ಹಿ.ಸ.): ಆ್ಯಂಕರ್:ರಾಜ್ಯದ ಉಪಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಜವಾಬ್ದಾರಿ ವಹಿಸಿಕೊಂಡ ಹಿನ್ನೆಲೆಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಜನತೆ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ
ಪರಮೇಶ್ವರ


ತುಮಕೂರು, 14 ಜೂನ್ (ಹಿ.ಸ.):

ಆ್ಯಂಕರ್:ರಾಜ್ಯದ ಉಪಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಜವಾಬ್ದಾರಿ ವಹಿಸಿಕೊಂಡ ಹಿನ್ನೆಲೆಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಜನತೆ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರಟಗೆರೆಯಲ್ಲಿ ದೊರೆತ ಅದ್ಧೂರಿ ಹಾಗೂ ಅಭೂತಪೂರ್ವ ಸ್ವಾಗತ ತಮ್ಮ ಮನಸ್ಸನ್ನು ಭಾವುಕರನ್ನಾಗಿಸಿದೆ ಎಂದು ಹೇಳಿದರು. ರಾಜಕೀಯ ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದ್ದರೂ ಜನರು ತೋರಿದ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ತಮ್ಮನ್ನು ಮುನ್ನಡೆಸುತ್ತಿರುವ ಶಕ್ತಿಯಾಗಿದೆ ಎಂದು ತಿಳಿಸಿದರು.

ಕೊರಟಗೆರೆಯ ಪ್ರತಿಯೊಂದು ಹಳ್ಳಿ, ಪ್ರತಿಯೊಂದು ರಸ್ತೆ ಹಾಗೂ ಪ್ರತಿಯೊಬ್ಬ ಕಾರ್ಯಕರ್ತನ ಮುಖದಲ್ಲಿ ಕಂಡ ಆತ್ಮೀಯತೆ ಮತ್ತು ಅಭಿಮಾನ ತಮ್ಮ ಮೇಲಿನ ಜನರ ಅಪಾರ ಪ್ರೀತಿಯ ಪ್ರತೀಕವಾಗಿದೆ. ಈ ಗೌರವ ಕೇವಲ ತಮ್ಮ ವೈಯಕ್ತಿಕ ಸಾಧನೆಗೆ ಸೀಮಿತವಾಗಿಲ್ಲ, ಕ್ಷೇತ್ರದ ಪ್ರತಿಯೊಬ್ಬ ನಾಗರಿಕನಿಗೂ ಸಲ್ಲುವ ಗೌರವವಾಗಿದೆ ಎಂದು ಹೇಳಿದರು.

ತಮ್ಮ ರಾಜಕೀಯ ಜೀವನವನ್ನು ಸ್ಮರಿಸಿದ ಅವರು, ಮಧುಗಿರಿ ಕ್ಷೇತ್ರದ ಜನತೆ ರಾಜಕೀಯ ಜನ್ಮ ನೀಡಿದರೆ, ಕೊರಟಗೆರೆ ಕ್ಷೇತ್ರದ ಜನತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಪಕ್ಷ ಸಂಘಟಿಸಲು, ಮೂರು ಬಾರಿ ಗೃಹ ಸಚಿವರಾಗಿ ಹಾಗೂ ಎರಡನೇ ಬಾರಿ ರಾಜ್ಯದ ಉಪಮುಖ್ಯಮಂತ್ರಿಯಾಗಿ ಜನಸೇವೆ ಮಾಡಲು ಅವಕಾಶ ಕಲ್ಪಿಸಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.

ಕ್ಷೇತ್ರದ ಜನರ ಋಣವನ್ನು ಎಂದಿಗೂ ಮರೆಯುವುದಿಲ್ಲ. ಜನರ ಆಶೀರ್ವಾದ, ಬೆಂಬಲ ಮತ್ತು ವಿಶ್ವಾಸವೇ ತಮ್ಮ ಸಾರ್ವಜನಿಕ ಜೀವನದ ನಿಜವಾದ ಸಂಪತ್ತು ಎಂದು ಅವರು ಹೇಳಿದರು.

ತಮ್ಮ ಬದುಕಿನ ಪ್ರತಿಯೊಂದು ಸಾಧನೆಯ ಹಿಂದೆಯೂ ಕೊರಟಗೆರೆ ಮತ್ತು ಮಧುಗಿರಿ ಕ್ಷೇತ್ರದ ಜನರ ಆಶೀರ್ವಾದ, ಪ್ರೋತ್ಸಾಹ ಹಾಗೂ ಪ್ರೀತಿಯಿದೆ. ಜನರ ವಿಶ್ವಾಸವೇ ತಮ್ಮ ಶಕ್ತಿ, ಜನರ ನಿರೀಕ್ಷೆಗಳೇ ತಮ್ಮ ಜವಾಬ್ದಾರಿ ಮತ್ತು ಜನರ ಪ್ರೀತಿಯೇ ತಮ್ಮ ಪ್ರೇರಣೆ ಎಂದು ತಿಳಿಸಿದರು.

ತಮ್ಮ ಮೇಲಿಟ್ಟಿರುವ ಅಪಾರ ನಂಬಿಕೆಗೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿ, ರೈತರ ಕಲ್ಯಾಣ, ಯುವಜನರ ಭವಿಷ್ಯ ನಿರ್ಮಾಣ, ಮಹಿಳೆಯರ ಸಬಲೀಕರಣ ಹಾಗೂ ಬಡವರ ಜೀವನಮಟ್ಟ ಸುಧಾರಣೆಗೆ ಇನ್ನಷ್ಟು ಬದ್ಧತೆಯಿಂದ ಕೆಲಸ ಮಾಡುವ ಸಂಕಲ್ಪವನ್ನು ಅವರು ಪುನರುಚ್ಚರಿಸಿದರು.

ಕೊರಟಗೆರೆ ನನ್ನ ಹೆಮ್ಮೆ, ಕೊರಟಗೆರೆಯ ಜನತೆ ನನ್ನ ಶಕ್ತಿ. ನಿಮ್ಮ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಸದಾ ಚಿರಋಣಿ ಎಂದು ಡಾ. ಪರಮೇಶ್ವರ ಭಾವನಾತ್ಮಕವಾಗಿ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande