ಜೂ. 23 ರಂದು ಡಾಕ್ ಅದಾಲತ್
ಶಿವಮೊಗ್ಗ, 14 ಜೂನ್ (ಹಿ.ಸ.) : ಆ್ಯಂಕರ್ : ಶಿವಮೊಗ್ಗ ಕೋಟೆ ರಸ್ತೆ ಅಂಚೆ ಇಲಾಖೆಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಜೂ. 23 ರಂದು ಬೆಳಗ್ಗೆ 11.00ಕ್ಕೆ ತ್ರೈಮಾಸಿಕ ಡಾಕ್ ಅದಾಲತ್ ಆಯೋಜಿಸಲಾಗಿದೆ. ಸಾರ್ವಜನಿಕರು ಅಂಚೆ ಇಲಾಖೆಯ ಸೇವೆಗಳ ಕುರಿತು ಯಾವುದೇ ಕುಂದುಕೊರತೆಗಳು ಅಥವಾ ಸಲಹೆಗಳಿದ್ದಲ್ಲಿ ಸಂಪೂರ್
ಜೂ. 23 ರಂದು ಡಾಕ್ ಅದಾಲತ್


ಶಿವಮೊಗ್ಗ, 14 ಜೂನ್ (ಹಿ.ಸ.) :

ಆ್ಯಂಕರ್ : ಶಿವಮೊಗ್ಗ ಕೋಟೆ ರಸ್ತೆ ಅಂಚೆ ಇಲಾಖೆಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಜೂ. 23 ರಂದು ಬೆಳಗ್ಗೆ 11.00ಕ್ಕೆ ತ್ರೈಮಾಸಿಕ ಡಾಕ್ ಅದಾಲತ್ ಆಯೋಜಿಸಲಾಗಿದೆ.

ಸಾರ್ವಜನಿಕರು ಅಂಚೆ ಇಲಾಖೆಯ ಸೇವೆಗಳ ಕುರಿತು ಯಾವುದೇ ಕುಂದುಕೊರತೆಗಳು ಅಥವಾ ಸಲಹೆಗಳಿದ್ದಲ್ಲಿ ಸಂಪೂರ್ಣ ವಿವರಗಳೊಂದಿಗೆ ಲಿಖಿತವಾಗಿ ಜೂ. 22 ರೊಳಗಾಗಿ ಸಲ್ಲಿಸುವುದು. ಸ್ವೀಕರಿಸಲಾದ ಕುಂದುಕೊರತೆಗಳು ಹಾಗೂ ಸಲಹೆಗಳನ್ನು ಡಾಕ್ ಅದಾಲತ್ನಲ್ಲಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ಅದಾಲತ್ನಲ್ಲಿ ಭಾಗವಹಿಸುವಂತೆ ಅಂಚೆ ಅಧೀಕ್ಷಕರಾದ ಎಂ. ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande