ಅಶೋಕ್ ಸಿಂಘಲ್ ಜನ್ಮ ಶತಮಾನೋತ್ಸವ ಆಚರಣೆಗೆ ವಿಶ್ವ ಹಿಂದೂ ಪರಿಷತ್ ಸಿದ್ಧತೆ
ಲಖನೌ, 14 ಜೂನ್ (ಹಿ.ಸ.): ಆ್ಯಂಕರ್: ವಿಶ್ವ ಹಿಂದೂ ಪರಿಷತ್ ಈ ವರ್ಷದ ಸೆಪ್ಟೆಂಬರ್ನಿಂದ ಒಂದು ವರ್ಷದ ಅವಧಿಯಲ್ಲಿ ದೇಶಾದ್ಯಂತ ಹಿರಿಯ ಹಿಂದೂತ್ವ ನಾಯಕ ಹಾಗೂ ಶ್ರೀರಾಮ ಜನ್ಮಭೂಮಿ ಚಳವಳಿಯ ಪ್ರಮುಖ ಮುಖಂಡರಾಗಿದ್ದ ಅಶೋಕ್ ಸಿಂಘಲ್ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲು ನಿರ್ಧರಿಸಿದೆ. ಈ ಅಂಗವಾಗಿ ವಿವ
ಅಶ ಸಿಂಘಾಲ್


ಲಖನೌ, 14 ಜೂನ್ (ಹಿ.ಸ.):

ಆ್ಯಂಕರ್:

ವಿಶ್ವ ಹಿಂದೂ ಪರಿಷತ್ ಈ ವರ್ಷದ ಸೆಪ್ಟೆಂಬರ್ನಿಂದ ಒಂದು ವರ್ಷದ ಅವಧಿಯಲ್ಲಿ ದೇಶಾದ್ಯಂತ ಹಿರಿಯ ಹಿಂದೂತ್ವ ನಾಯಕ ಹಾಗೂ ಶ್ರೀರಾಮ ಜನ್ಮಭೂಮಿ ಚಳವಳಿಯ ಪ್ರಮುಖ ಮುಖಂಡರಾಗಿದ್ದ ಅಶೋಕ್ ಸಿಂಘಲ್ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲು ನಿರ್ಧರಿಸಿದೆ. ಈ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಅವುಗಳ ನಿರ್ವಹಣೆಗೆ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ವಿಶೇಷ ಸಮಿತಿಗಳನ್ನು ರಚಿಸಲಾಗುತ್ತದೆ.

ವಿಹಿಪ್ ವಕ್ತಾರ ಅಂಬರೀಷ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಜನ್ಮ ಶತಮಾನೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಗಳ ರೂಪುರೇಷೆಯನ್ನು ಅಯೋಧ್ಯೆಯಲ್ಲಿ ಜೂನ್ 27 ಮತ್ತು 28ರಂದು ನಡೆಯುವ ಕೇಂದ್ರ ನಿರ್ವಹಣಾ ಸಮಿತಿ ಸಭೆಯಲ್ಲಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಅಯೋಧ್ಯೆಯ ಶ್ರೀರಾಮ ಸೇವಕಪುರಂನಲ್ಲಿರುವ ತೀರ್ಥಯಾತ್ರಿ ನಿವಾಸದಲ್ಲಿ ಈ ಸಭೆ ನಡೆಯಲಿದ್ದು, ವಿಹಿಪ್ನ ಕೇಂದ್ರ ಸಂಘಟನಾ ಮಹಾಮಂತ್ರಿ ಮಿಲಿಂದ್ ಪರಾಂಡೆ, ಕೇಂದ್ರ ಸಹ ಸಂಘಟನಾ ಸಚಿವ ವಿನಾಯಕರಾವ್ ದೇಶಪಾಂಡೆ, ಅಧ್ಯಕ್ಷ ಆಲೋಕ್ ಕುಮಾರ್, ಕೇಂದ್ರ ಮಹಾಮಂತ್ರಿ ಬಜರಂಗ್ ಲಾಲ್ ಬಾಂಗ್ಡಾ ಸೇರಿದಂತೆ ಪರಿಷತ್ತಿನ ಎಲ್ಲ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಜೊತೆಗೆ ದೇಶದ ವಿವಿಧ ಪ್ರದೇಶಗಳ ಸಂಘಟನಾ ಪದಾಧಿಕಾರಿಗಳು ಹಾಗೂ ರಾಜ್ಯ ಪ್ರತಿನಿಧಿಗಳೂ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.

ಅಂಬರೀಷ್ ಅವರ ಪ್ರಕಾರ, ಅಶೋಕ್ ಸಿಂಘಲ್ ಅವರ ಜನ್ಮ ಶತಮಾನೋತ್ಸವ ಆಚರಣೆಯ ಕಾರ್ಯಯೋಜನೆಗೆ ಇದೇ ಸಭೆಯಲ್ಲಿ ಅಂತಿಮ ಅನುಮೋದನೆ ದೊರೆಯಲಿದೆ. ಹಿಂದೂ ಸಮಾಜದ ಶೌರ್ಯವನ್ನು ಜಾಗೃತಗೊಳಿಸಿದ ನಾಯಕ, ಸಾಮಾಜಿಕ ಸಾಮರಸ್ಯದ ಪ್ರತಿಪಾದಕ ಹಾಗೂ ಶ್ರೀರಾಮ ಜನ್ಮಭೂಮಿ ಚಳವಳಿಯ ಪ್ರಮುಖ ಸೇನಾನಿಯಾಗಿ ಅಶೋಕ್ ಸಿಂಘಲ್ ನೀಡಿದ ಕೊಡುಗೆಯನ್ನು ಶತಮಾನೋತ್ಸವ ವರ್ಷದಲ್ಲಿ ಸಮಾಜಕ್ಕೆ ಪರಿಚಯಿಸಲಾಗುವುದು ಎಂದು ಅವರು ಹೇಳಿದರು.

ಅಶೋಕ್ ಸಿಂಘಲ್ ಅವರು 1926ರ ಸೆಪ್ಟೆಂಬರ್ 27ರಂದು ಮಹಾವೀರ್ ಸಿಂಗ್ ಮತ್ತು ವಿದ್ಯಾವತಿ ದಂಪತಿಯ ಪುತ್ರರಾಗಿ ಜನಿಸಿದರು. ಅವರ ಕುಟುಂಬ ಮೂಲತಃ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಬಿಜೋಲಿ ಗ್ರಾಮದ ನಿವಾಸಿಯಾಗಿತ್ತು.

ಸಭೆಯ ಸಿದ್ಧತೆ ಭರದಿಂದ

ಕೇಂದ್ರ ನಿರ್ವಹಣಾ ಸಮಿತಿ ಸಭೆಯನ್ನು ಯಶಸ್ವಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ಈಗಾಗಲೇ ಪೂರ್ವಸಿದ್ಧತಾ ಸಭೆಗಳು ನಡೆದಿವೆ. ಕೇಂದ್ರ ಸಂಘಟನಾ ಮಹಾಮಂತ್ರಿ ಮಿಲಿಂದ್ ಪರಾಂಡೆ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರ ಸಂಘಟನಾ ಸಚಿವ ಗಜೇಂದ್ರ ಸಿಂಗ್ ಅವರು ವಿವಿಧ ಜವಾಬ್ದಾರಿಗಳನ್ನು ಪದಾಧಿಕಾರಿಗಳಿಗೆ ಹಂಚಿಕೆ ಮಾಡಿದ್ದಾರೆ.

ಅವಧ್ ಪ್ರಾಂತ್ಯದ ಸಂಘಟನಾ ಸಚಿವ ವಿಜಯ ಪ್ರತಾಪ್ ಅವರ ನೇತೃತ್ವದಲ್ಲಿ ಸಭೆಯ ಸಿದ್ಧತೆಗಳು ನಡೆಯುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಆಗಮಿಸುವ ಪ್ರತಿನಿಧಿಗಳ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಅಶೋಕ್ ಸಿಂಘಲ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಮುಂದಿನ ಒಂದು ವರ್ಷ ದೇಶಾದ್ಯಂತ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ವಿಶ್ವ ಹಿಂದೂ ಪರಿಷತ್ ಯೋಜನೆ ರೂಪಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande