ಜನರೇ ಸ್ವಯಂ ಖರ್ಚು ಮಾಡಿ ಗೆಲ್ಲಿಸುವ ನಾಯಕ ಜೆ.ಟಿ.ಪಾಟೀಲರಿಗೆ ಸಚಿವ ಸ್ಥಾನ ನೀಡಲಿ : ಎಂ.ಎಲ್.ಕೆಂಪಲಿಂಗಣ್ಣವರ
ಬಾಗಲಕೋಟೆ, 13 ಜೂನ್ (ಹಿ.ಸ.) : ಆಂಕರ್ : ಜೆ.ಟಿ.ಪಾಟೀಲ ಅವರು ಚುನಾವಣೆಗೆ ಸ್ಪರ್ಧಿಸಿದರೆ ಜನರು ತಮ್ಮ ಸ್ವಂತ ಖರ್ಚಿನಲ್ಲಿ ಚುನಾವಣೆಯನ್ನು ನಡೆಸಿ ಅವರನ್ನು ಗೆಲ್ಲಿಸುವಂತಹ ಜನಪ್ರಿಯ ಹಾಗೂ ಕ್ರಿಯಾಶೀಲ ನಾಯಕರು ಎಂದು ಕಾಂಗ್ರೆಸ್ ಮುಖಂಡ ಎಂ.ಎಲ್.ಕೆಂಪಲಿಂಗಣ್ಣವರ ಹೇಳಿದರು. ಬಾಗಲಕೋಟೆ ನಗರದಲ್ಲಿ ಮಾತನ
D3mabd


ಬಾಗಲಕೋಟೆ, 13 ಜೂನ್ (ಹಿ.ಸ.) :

ಆಂಕರ್ : ಜೆ.ಟಿ.ಪಾಟೀಲ ಅವರು ಚುನಾವಣೆಗೆ ಸ್ಪರ್ಧಿಸಿದರೆ ಜನರು ತಮ್ಮ ಸ್ವಂತ ಖರ್ಚಿನಲ್ಲಿ ಚುನಾವಣೆಯನ್ನು ನಡೆಸಿ ಅವರನ್ನು ಗೆಲ್ಲಿಸುವಂತಹ ಜನಪ್ರಿಯ ಹಾಗೂ ಕ್ರಿಯಾಶೀಲ ನಾಯಕರು ಎಂದು ಕಾಂಗ್ರೆಸ್ ಮುಖಂಡ ಎಂ.ಎಲ್.ಕೆಂಪಲಿಂಗಣ್ಣವರ ಹೇಳಿದರು.

ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, ಜೆ.ಟಿ.ಪಾಟೀಲ ಅವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿ, ರೈತರ ಸಮಸ್ಯೆಗಳು, ಜನಸಾಮಾನ್ಯರ ಹಿತಾಸಕ್ತಿ ಸೇರಿದಂತೆ ಹಲವು ವಿಚಾರಗಳಲ್ಲಿ ಅವರು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಜೆ.ಟಿ.ಪಾಟೀಲ ಅವರಂತಹ ಅನುಭವಿ ಮತ್ತು ಜನಪರ ನಾಯಕರ ಸೇವೆಯನ್ನು ರಾಜ್ಯದ ಆಡಳಿತದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಜೆ.ಟಿ.ಪಾಟೀಲ ಅವರಿಗೆ ಯಾವುದೇ ಸ್ಥಾನಮಾನ ನೀಡಿದರೂ ಜನರ ವಿಶ್ವಾಸ ಮತ್ತು ಬೆಂಬಲ ಸದಾ ಅವರೊಂದಿಗೆ ಇರುತ್ತದೆ. ಜನರ ಧ್ವನಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವ ಅವರು ಸರ್ಕಾರದ ಪ್ರಮುಖ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎಂದು ಕೆಂಪಲಿಂಗಣ್ಣವರ ಹೇಳಿದರು.

ಜೆ.ಟಿ.ಪಾಟೀಲ ಅವರ ನಾಯಕತ್ವದಿಂದ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ. ಹೀಗಾಗಿ ಪಕ್ಷದ ವರಿಷ್ಠರು ಅವರ ಅನುಭವ ಮತ್ತು ಜನಪ್ರಿಯತೆಯನ್ನು ಪರಿಗಣಿಸಿ ಸೂಕ್ತ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande