ಕ್ರಿಬ್ಕೋ ಸಂಸ್ಥೆಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಬ್ಯಾಗ್ ವಿತರಣೆ
ಕ್ರಿಬ್ಕೋ ಸಂಸ್ಥೆಯಿ0ದ ಸರ್ಕಾರಿ ಶಾಲೆ ಮಕ್ಕಳಿಗೆ ಬ್ಯಾಗ್ ವಿತರಣೆ
ಕೋಲಾರ ತಾಲ್ಲೂಕಿನ ಗರುಡನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಕ್ರಿಬ್ಕೋ ಸಂಸ್ಥೆಯಿAದ ಬ್ಯಾಗ್ ವಿತರಿಸಲಾಯಿತು.


ಕೋಲಾರ, ೧೩ ಜೂನ್ (ಹಿ.ಸ) :

ಆ್ಯಂಕರ್ : ರೈತರಿಗೆ ಗುಣಮಟ್ಟದ ಗೊಬ್ಬರ ಉತ್ಪಾದಿಸಿ ವಿತರಿಸುತ್ತಿರುವ ಕ್ರಿಬ್ಕೋ ಸಂಸ್ಥೆ ಇದೀಗ ಸಾಮಾಜಿಕ ಕಾರ್ಯಗಳಿಗೂ ಮುಂದಾಗಿದ್ದು, ಶಾಲೆಗಳ ಬಲವರ್ಧನೆಗೆ ಸಹಾಯಹಸ್ತ ಚಾಚುತ್ತಿದೆ ಎಂದು ಸಂಸ್ಥೆಯ ರಾಜ್ಯ ಮಾರಾಟ ವ್ಯವಸ್ಥಾಪಕ ಎಂ.ಶ್ರೀನಿವಾಸಬಾಬು ತಿಳಿಸಿದರು.

ಭಾರತಿ ಕೋಆಪರೇಟಿವ್ ಲಿಮಿಟೆಡ್ನಿಂದ ತಾಲ್ಲೂಕಿನ ಗರುಡನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಬ್ಯಾಗ್, ಅಕ್ಷರದಾಸೋಹ ಅಡುಗೆ ಮನೆಗೆ ಕುಕ್ಕರ್ ಮತ್ತಿತರ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳು ಉಳಿಯಬೇಕು ಆಗ ಮಾತ್ರ ಸಾಮಾಜಿಕ ನ್ಯಾಯಕ್ಕೆ ಅರ್ಥ ಬರುತ್ತದೆ ಎಂದ ಅವರು, ವಿವಿಧ ಕಂಪನಿಗಳು, ಉಳ್ಳವರು ಸರ್ಕಾರಿ ಶಾಲೆಗಳನ್ನು ಉಳಿಸುವತ್ತ ಚಿಂತನೆ ಮಾಡಬೇಕು, ಮತ್ತಷ್ಟು ನೆರವು ಹರಿಸಬೇಕು. ಮಕ್ಕಳು ಮೊಬೈಲ್ಗೆ ಬಲಿಯಾಗದಿರಿ ಎಂದು ಕಿವಿಮಾತು ಹೇಳಿದ ಅವರು,ಶಾಲೆಗೆ ಗೈರಾಗದೇ ಬನ್ನಿ, ಇಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ನೀವು ಸಮಾಜದಲ್ಲಿ ಸಾಧಕರಾಗಿ ಹೊರಹೊಮ್ಮಿ ಎಂದು ತಿಳಿಸಿ, ನೀವು ಉನ್ನತ ಸ್ಥಾನಕ್ಕೆ ಹೋದ ನಂತರ ನೀವು ಕಲಿತ ಶಾಲೆಗೆ ನೆರವು ನೀಡಿ. ಶಾಲೆಯ ಮಕ್ಕಳ ಶಿಸ್ತು, ಸಂಯಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಶಿಕ್ಷಣದ ಜತೆಯಲ್ಲಿ ಸಂಸ್ಕಾರ ಕಲಿಯುವುದು ಅತಿ ಮುಖ್ಯವಾಗಿದೆ, ಈ ನಿಟ್ಟಿನಲ್ಲಿ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇನೆಂಬ ಕೀಳಿರಿಮೆ ತೊರೆದು ಸಾಧಕರಾಗಿ ಹೊರಹೊಮ್ಮಿ ಎಂದರು.

ಭಾರತಿ ಕೋ ಆಪರೇಟಿವ್ ಲಿಮಿಟೆಡ್ ೧೯೮೦ ರಲ್ಲಿ ಸ್ಥಾಪಿತವಾದ ಪ್ರಮುಖ ಭಾರತೀಯ ರಾಷ್ಟಿçÃಯ ಸಹಕಾರಿ ಸಂಸ್ಥೆಯಾಗಿದೆ. ಗುಣಮಟ್ಟದ ರಸಗೊಬ್ಬರಗಳ (ಪ್ರಮುಖವಾಗಿ ಯೂರಿಯಾ) ಉತ್ಪಾದನೆ ಮತ್ತು ವಿತರಣೆಯ ಮೂಲಕ ರೈತರನ್ನು ಸಬಲೀಕರಣಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಗುಜರಾತ್ನ ಹಜಿರಾದಲ್ಲಿ ಮುಖ್ಯ ಉತ್ಪಾದನಾ ಘಟಕವನ್ನು ಹೊಂದಿರುವ ಸಹಕಾರ ತತ್ವಗಳಡಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಜೈವಿಕ ಗೊಬ್ಬರಗಳು, ಬಿಟಿ ಹತ್ತಿ ಹೈಬ್ರಿಡ್ ಬೀಜಗಳು, ಮತ್ತು ಇತ್ತೀಚೆಗೆ ಕೃಷಿ ಸರಕುಗಳ ಆಮದು-ರಫ್ತಿಗಾಗಿ ಕ್ರಿಬ್ಕೋ ಅಗ್ರಿ ಬಿಸಿನೆಸ್ ಲಿಮಿಟೆಡ್ ಸ್ಥಾಪಿಸಿದೆ. ದೇಶದಾದ್ಯಂತ ೯೪೭೮ ಕ್ಕೂ ಹೆಚ್ಚು ಸಹಕಾರಿ ಸಂಘಗಳು ಇದರ ಷೇರು ಬಂಡವಾಳದಲ್ಲಿ ಪಾಲು ಹೊಂದಿವೆ ಎಂದು ತಿಳಿಸಿದರು.

ಸಂಸ್ಥೆಯ ಸಿಎಸ್ಆರ್ ನಿಧಿಯಿಂದ ರಾಜ್ಯಾದ್ಯಂತ ಗ್ರಾಮೀಣ ಶಾಲೆಗಳಿಗೆ ನೆರವು ಒದಗಿಸುವ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವನ್ನು ಈ ಶಾಲೆಗೆ ನೀಡುವುದಾಗಿ ಅವರು ಭರವಸೆ ನೀಡಿದರು.

ಮುಖ್ಯಶಿಕ್ಷಕ ಗಂಗಾಧರಪ್ಪ ಮಾತನಾಡಿ, ಸರ್ಕಾರಿ ಶಾಲೆಗೆ ನೆರವು ನೀಡುವ ಉದ್ದೇಶದಿಂದ ಬೆಂಗಳೂರಿನಿAದ ಬಂದು ಸಹಾಯಹಸ್ತ ಚಾಚಿದ್ದಾರೆ, ಅವರಿಗೆ ಶಾಲೆಯ ಪರವಾಗಿ ಧನ್ಯವಾದ ತಿಳಿಸುವುದಾಗಿ ತಿಳಿಸಿದ ಅವರು, ಮಕ್ಕಳು ಅವರು ನೀಡಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕ್ರಿಬ್ಕೋ ಕ್ಷೇತ್ರಾಧಿಕಾರಿ ಹರೀಶ್ ಮಾತನಾಡಿ ಕ್ರಿಬ್ಕೋ ಸಂಸ್ಥೆಯ ಸಾಮಾಜಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ, ಇತ್ತೀಚೆಗೆ ಅರಾಭಿಕೊತ್ತನೂರು ಶಾಲೆಗೆ ವಾಟರ್ ಫಿಲ್ಟರ್ ಒದಗಿಸಲಾಗಿದೆ. ಮಕ್ಕಳ ಕಣ್ಣಿನ ಆರೋಗ್ಯಕ್ಕೂ ಒತ್ತು ನೀಡಿ ಶಿಬಿರ ಆಯೋಜಿಸಲಾಗಿತ್ತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು. ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande