ಅರಾಭಿಕೊತ್ತನೂರು ಸಹಕಾರ ಸಂಘದಿ0ದ ರೈತರಿಗೆ ತಲಾ ೫೦ ಸಾವಿರ ರೂ ಸಾಲ ವಿತರಣೆ
ಅರಾಭಿಕೊತ್ತನೂರು ಸಹಕಾರ ಸಂಘದಿ0ದ ರೈತರಿಗೆ ತಲಾ ೫೦ ಸಾವಿರ ರೂ ಸಾಲ ವಿತರಣೆ
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದಿ0ದ ರೈತರಿಗೆ ಸಾಲದ ಚೆಕ್ಕುಗಳನ್ನು ವಿತರಿಸಲಾಯಿತು.


ಕೋಲಾರ, ೧೩ ಜೂನ್ (ಹಿ.ಸ) :

ಆ್ಯಂಕರ್ : ಡಿಸಿಸಿ ಬ್ಯಾಂಕ್ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅರಾಭಿಕೊತ್ತನೂರಿನ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಎ.ಎಸ್. ನಂಜು0ಡೇಗೌಡ ಸಂಘದ ತನ್ನ ಸದಸ್ಯರಿಗೆ ತಲಾ ೫೦ ಸಾವಿರ ಸಾಲ ನೀಡಿ ಸ್ವಾವಲಂಬಿ ಬದುಕಿಗೆ ದಾರಿ ತೋರುತ್ತಿರುವುದು ಮಾತ್ರವಲ್ಲದೇ ಸಂಘ ಆರ್ಥಿಕವಾಗಿ ಸದೃಢವಾಗಿದೆ ಎಂದು ಸಾಕ್ಷೀಕರಿಸಿದ್ದಾರೆ ಎಂದು ಕೋಲಾರ ಹಾಲು ಒಕ್ಕೂಟದ ನಿರ್ದೇಶಕ ಡಿ.ನಾಗರಾಜಪ್ಪ ಅಭಿನಂದಿಸಿದರು.

ಅರಾಭಿಕೊತ್ತನೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದಿ0ದ ಸಂಘದ ನಿರ್ದೇಶಕರೂ ಆಗಿರುವ ಅವರು ೧೦ ಮಂದಿ ಸದಸ್ಯರಿಗೆ ತಲಾ ೫೦ ಸಾವಿರ ರೂಗಳಂತೆ ಸಾಲದ ನೆರವು ವಿತರಿಸಿ ಮಾತನಾಡಿದರು.

ನಂಜುAಡಗೌಡರ ಅಧ್ಯಕ್ಷತೆಯಲ್ಲಿ ಅಸ್ಥಿತ್ವಕ್ಕೆ ಬಂದಿರುವ ಈ ಸೊಸೈಟಿ ಆರ್ಥಿಕವಾಗಿ ಬಲಗೊಳ್ಳುವತ್ತ ಸಾಗುತ್ತಿದೆ, ಯಾವುದೇ ಅವ್ಯವಹಾರಗಳಿಗೆ ಅವಕಾಶ ನೀಡದೇ ಪಾರದರ್ಶಕವಾಗಿ ಸಾಲ ವಿತರಿಸಿ ಗಮನ ಸೆಳೆದಿದೆ. ಸಂಘ ಆರ್ಥಿಕವಾಗಿ ಮತ್ತಷ್ಟು ಬಲವರ್ಧನೆಯಾಗುವ ಮುಂದಿನ ದಿನಗಳಲ್ಲಿ ಸಾವಿರಾರು ಮಂದಿಗೆ ಸಾಲ ವಿತರಿಸುವ ಶಕ್ತಿ ಪಡೆದುಕೊಳ್ಳಲಿ ಎಂದು ಹಾರೈಸಿ, ಸಾಲ ಪಡೆದವರು ಸಮರ್ಪಕ ಮರುಪಾವತಿಯ ಮೂಲಕ ನಂಬಿಕೆ ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಸಂಘದ ಅಧ್ಯಕ್ಷ ಎ.ಎಸ್. ನಂಜು0ಡೇಗೌಡ ಮಾತನಾಡಿ, ಸಂಘ ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿಗೆ ಸಾಲ ವಿತರಿಸುವದರ ಜತೆಗೆ ರೈತರಿಗೆ ರಸಗೊಬ್ಬರ,ಕೀಟನಾಶಕಗಳು ಸೇರಿದಂತೆ ರೈತರ ಅಗತ್ಯತೆಗಳನ್ನು ಪೂರೈಸುವ ಪ್ರಯತ್ನ ಮಾಡಲಿದೆ. ಮುಂದಿನ ದಿನಗಳಲ್ಲಿ ಸಾಲವನ್ನು ಕುರಿ,ಕೋಳಿ,ಹಸು ಸಾಕಾಣಿಕೆ, ಟೈಲರಿಂಗ್, ಬ್ಯೂಟಿ ಪಾರ್ಲರ್ ಮತ್ತಿತರ ಸ್ವಯಂ ಉದ್ಯೋಗ ಸೃಷ್ಟಿಗೆ ನೀಡುವುದಾಗಿ ತಿಳಿಸಿದ ಅವರು, ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸುವ ಮೂಲಕ ನಂಬಿಕೆ ಉಳಿಸಿಕೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಲ ಸೌಲಭ್ಯ ಪಡೆದುಕೊಳ್ಳಿ ಎಂದು ಕರೆ ನೀಡಿದರು.

ಸಹಕಾರ ಸಂಘದಲ್ಲಿ ಉಳಿತಾಯ ಹೆಚ್ಚು ಮಾಡಿದರೆ ಸಂಘದ ಉಳಿತಾಯದ ಹಣದಿಂದ ಕಷ್ಟದಲ್ಲಿರುವ ಸದಸ್ಯರಿಗೆ ಸಾಲ ನೀಡಬಹುದಾಗಿದೆ, ಹಣ ದುರುಪಯೋಗಕ್ಕೆ ಅವಕಾಶ ನೀಡದೇ ಸಂಘ ಬಲಗೊಳಿಸುವ ಭರವಸೆ ನೀಡಿದ ಅವರು, ಸಾಲದ ಕಂತು ಪಾವತಿ ಪಾರದರ್ಶಕವಾಗಿರಬೇಕು. ವಾಣಿಜ್ಯ ಬ್ಯಾಂಕುಗಳು ಬಡವರು,ರೈತರಿಗೆ ಸಾಲ ನೀಡೊಲ್ಲ, ಉಳ್ಳವರಿಗೆ ಮಾತ್ರವೇ ಅಲ್ಲಿ ಸಾಲ ಸಿಗೋದು, ಆದ್ದರಿಂದ ಸಹಕಾರ ಸಂಘವನ್ನು ಗ್ರಾಮದಲ್ಲಿ ಅಸ್ಥಿತ್ವಕ್ಕೆ ತರಲಾಗಿದೆ, ಈ ಸಂಘವನ್ನು ಎಲ್ಲರೂ ಸೇರಿ ಬೆಳೆಸೋಣ, ಮತ್ತಷ್ಟು ಮಂದಿಗೆ ನೆರವಾಗುವ ಶಕ್ತಿ ತುಂಬೋಣ. ಸಾಲ ಪಡೆಯುವುದು ಬದುಕು ಕಟ್ಟಿಕೊಳ್ಳಲು, ಈ ಹಣ ಸದ್ಬಳಕೆಯಾಗಿ ನೀವು ಸ್ವಾವಲಂಬನೆ ಸಾಧಿಸಿದರೆ ಮಾತ್ರ ಸಾರ್ಥಕತೆ ಎಂದ ಅವರು, ಯಾವ ಉದ್ದೇಶಕ್ಕೆ ಸಾಲ ಪಡೆಯುತ್ತೀರೋ ಅದೇ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಿ ಸಾಲದ ಹಣ ದುರ್ಬಳಕೆ ಮಾಡಿಕೊಂಡರೆ ಅದು ನಿಮ್ಮ ಪ್ರಗತಿಗೆ ಮುಳ್ಳಾದೀತು ಎಂದು ಎಚ್ಚರಿಕೆ ನೀಡಿದರು.

ಸದಸ್ಯರು ಸಹಕಾರ ಸಂಘದಲ್ಲಿ ಉಳಿತಾಯ ಮಾಡುವ ಮೂಲಕ ಸಂಘವನ್ನು ಗಟ್ಟಿಗೊಳಿಸಬೇಕು. ಇಲ್ಲಿ ಉಳಿತಾಯ ಮಾಡುವುದರಿಂದ ಮತ್ತಷ್ಟು ಮಂದಿಗೆ ಸಾಲ ವಿತರಿಸುವ ಶಕ್ತಿ ಬರುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ದೇವಿಕಾ, ನಿರ್ದೇಶಕರಾದ ಸಿ.ಪಿ.ಕೃಷ್ಣಪ್ಪ, ಎಂ.ನಾಗೇಶ್, ಸುಬ್ರಮಣಿ, ಜಿ.ತಿಮ್ಮಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ತಿಮ್ಮೇಗೌಡ ಸೇರಿದಂತೆ ಷೇರುದಾರರರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande