ನಂದಿಪುರ ಶ್ರೀಚರಂತಪ್ಪಜ್ಜ ಮಹಾಸ್ವಾಮಿಗಳ ಮೂರು ದಿನಗಳ 22ನೇ ಸ್ಮರಣೋತ್ಸವ ಪ್ರಾರಂಭ
ಬಳ್ಳಾರಿ, 12 ಜೂನ್ (ಹಿ.ಸ.) : ಆ್ಯಂಕರ್ : ನಂದೀಪುರ ಶ್ರೀ ಚರಂತಪ್ಪಜ್ಜ ಮಹಾಸ್ವಾಮಿಗಳ ಮೂರು ದಿನಗಳ 22ನೇ ಪುಣ್ಯ ಸ್ಮರಣೋತ್ಸವವು ಬಸವಭವನದಲ್ಲಿ ವೇದ ಮಂತ್ರ ಘೋಷಗಳ ಮೂಲಕ ಗುರುವಾರ ಸಂಜೆ ಪ್ರಾರಂಭವಾಯಿತು. ನಂದಿಪುರ ಪುಣ್ಯಕ್ಷೇತ್ರದ ಡಾ. ಮಹೇಶ್ವರಸ್ವಾಮಿ ಅವರು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.
The three-day 22nd commemoration of Nandipura Sricharantappajja Mahaswamy begins


ಬಳ್ಳಾರಿ, 12 ಜೂನ್ (ಹಿ.ಸ.) :

ಆ್ಯಂಕರ್ : ನಂದೀಪುರ ಶ್ರೀ ಚರಂತಪ್ಪಜ್ಜ ಮಹಾಸ್ವಾಮಿಗಳ ಮೂರು ದಿನಗಳ 22ನೇ ಪುಣ್ಯ ಸ್ಮರಣೋತ್ಸವವು ಬಸವಭವನದಲ್ಲಿ ವೇದ ಮಂತ್ರ ಘೋಷಗಳ ಮೂಲಕ ಗುರುವಾರ ಸಂಜೆ ಪ್ರಾರಂಭವಾಯಿತು.

ನಂದಿಪುರ ಪುಣ್ಯಕ್ಷೇತ್ರದ ಡಾ. ಮಹೇಶ್ವರಸ್ವಾಮಿ ಅವರು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಕಮ್ಮರಚೇಡು ಮಠದ ಕಲ್ಯಾಣಸ್ವಾಮಿ, ಹರಗಿನಡೋಣಿಯ ಸಿದ್ಧಲಿಂಗ ಶಿವಾಚಾರ್ಯರು, ಶ್ರೀಧರಗಡ್ಡೆ ಮರಿಕೊಟ್ಟೂರು ದೇವರು, ಜಂಗಮರಹೊಸಹಳ್ಳಿ ಅಜಾತ ಶಂಭುಲಿಂಗ ಶಿವಾಚಾರ್ಯ ಅವರು, ನಂದಿಪುರದ ಶ್ರೀಚರಂತಪ್ಪಜ್ಜ ಮಹಾಸ್ವಾಮಿಗಳ ಧಾರ್ಮಿಕ ಹಾಗೂ ಸಮಾಜಮುಖಿ ಸೇವಾ ಕಾರ್ಯಗಳನ್ನು ಸ್ಮರಿಸಿ, ಅವರು ಭಕ್ತರ ಆರಾಧ್ಯ ದೈವವಾಗಿದ್ದಾರೆ. ನಂದಿಪುರ ಮಠವು ಕೃಷಿ ವಲಯದಲ್ಲಿ ಮಾಡುತ್ತಿರುವ ಅಪೂರ್ವ ಸಾಧನೆ ಭವಿಷ್ಯತ್ತಿನಲ್ಲಿ ಸಮಾಜಕ್ಕೆ ದೊಡ್ಡ ಕೊಡುಗೆ ಆಗಲಿದೆ ಎಂದರು.

ಅನೇಕ ಭಕ್ತರು ನಂದಿಪುರಕ್ಕೆ ಬಂದು, ಶ್ರೀಗಳ ದರ್ಶನ ಪಡೆದು ಇಷ್ಟಾರ್ಥಗಳನ್ನು ಈಡೇರಿಸಿಕೊಂಡು, ಶ್ರೀಗಳನ್ನು ಸದಾಕಾಲ ಸ್ಮರಿಸುತ್ತಿದ್ದಾರೆ. ಶ್ರೀಚರಂತಪ್ಪಜ್ಜ ಮಹಾಸ್ವಾಮಿಗಳು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೂ, ಅವರ ಶಕ್ತಿ, ಆಶೀರ್ವಾದ ಮತ್ತು ಅಶರೀರವಾದ ಚೈತನ್ಯವು ನಮ್ಮೆಲ್ಲರ ಜೊತೆಗಿದೆ ಎಂದರು.

ವೀರಶೈವ ಸಮಾಜದ ಹಿರಿಯ ಮಹಿಳಾ ಮುಖಂಡರಾದ ಪಲ್ಲೇದ ಲಲಿತಮ್ಮ ಅವರು ಪುಣ್ಯ ಸ್ಮರಣೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಸ್ಮರಣೋತ್ಸವದ ಮೊದಲ ದಿನ ಮಹಿಳಾ ಸಬಲೀಕರಣ ಹಾಗೂ ಯೋಗಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ ನಡೆಯಿತು.

ನೈಸಗಿರ್ಕ ಚಿಕಿತ್ಸಕರಾದ ಡಾ. ಎನ್.ಎಲ್. ಸುಮಲತಾ ಅವರು `ಮಹಿಳೆಯರು ಒತ್ತಡದ ಬದುಕಿನಲ್ಲಿ ಆರೋಗ್ಯ ಸುಧಾರಣೆಗೆ ಯೋಗ ಹಾಗೂ ಧ್ಯಾನ' ಎಷ್ಟು ಅಗತ್ಯವಾಗಲಿದೆ ಎನ್ನುವ ಕುರಿತು ಉಪನ್ಯಾಸ ನೀಡಿದರು.

ಲೇಖಕ ಎಸ್.ವಿ.ಪಾಟೀಲ್ ಗುಂಡೂರ ಅವರು ಬರೆದಿರುವ ಶ್ರೀಗುರು ದೊಡ್ಡಬಸವೇಶ್ವರ ಸ್ವಾಮಿಯ ಶತನಾಮಾವಳಿ ಕೃತಿಯನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.

ವೀರಶೈವ ಲಿಂಗಾಯತ ಸಮಾಜದ ಮಹಿಳಾ ಮುಖಂಡರಾದ ಡಾ. ರೇಣುಕಾ ಮಂಜುನಾಥ, ಜನತಾ ಬಜಾರ್ ಅಧ್ಯಕ್ಷೆ ಪಲ್ಲೇದ ಮೈತ್ರಿ ಬಸವರಾಜ್, ಮುಖಂಡರಾದ ವಕೀಲೆ ಕೆ.ಎಸ್. ಶಿವಲೀಲ, ಸುಮಾರೆಡ್ಡಿ, ರಾಜಶ್ರೀ ಪಂಚಾಕ್ಷರಪ್ಪ, ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ ಇನ್ನಿತರರು ವೇದಿಕೆಯಲ್ಲಿದ್ದರು.

ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ ಅರು ಪ್ರಾಸ್ತಾವಿಕ ಭಾಷಣ ಮಾಡಿ, ವಿದ್ಯೆಯ ಜೊತೆಯಲ್ಲಿ ಸಂಸ್ಕಾರದ ಅಗತ್ಯವಿದೆ. ಧಾರ್ಮಿಕ ಕಾರ್ಯಕ್ರಮಗಳಿಂದ ಸಂಸ್ಕಾರ ಸಿಗಲಿದೆ ಎಂದರು.

ಲೇಖಕಿ ಡಾ.ಎಚ್.ಎಂ.ಉಮಾ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಾಗಿರುವ ಬಿಚ್ಚುಗಲ್ಲು ಪಂಚಾಕ್ಷರಪ್ಪ ಅವರು ಕಾರ್ಯಕ್ರಮ ನಿರ್ವಹಿಸಿದರು. ದೊಡ್ಡಬಸವ ಗವಾಯಿ

ಡಿ. ಕಗ್ಗಲ್ ಅವರು ವಚನ ಗಾಯನ ಮಾಡಿದರು. ಯೋಗೀಶ್ ಸಂಗನಕಲ್ಲು ತಬಲಾ ಸಾಥ್ ನೀಡಿದರು. ಅಕ್ಕನ ಬಳಗವು ಸಿದ್ಧಾಂತ ಶಿಖಾಮಣಿ, ಲಲಿತ ಸಹಸ್ರನಾಮ ಪಾರಾಯಣ ನೆರವೇರಿಸಿತು.

ಶ್ರೀ ಚರಂತಪ್ಪಜ್ಜ ಮಹಾಸ್ವಾಮಿಗಳ ಮೂರು ದಿನಗಳ ಸ್ಮರಣೋತ್ಸವ ಕಾರ್ಯಕ್ರಮ ಅಂಗವಾಗಿ ನೇತ್ರ ತ ಪಾಸಣೆ, ಚಿಕಿತ್ಸೆ, ರಕ್ತದಾನ ಶಿಬಿರ, ಹೃದಯ ತಪಾಸಣೆ ಶಿಬಿರಗಳು ನೆರವೇರಿದವು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande