ದಿವಂಗತ ಪುತ್ರನ ಜನ್ಮದಿನದ ಸ್ಮರಣಾರ್ಥ ವಿಶೇಷ ಮಕ್ಕಳಿಗೆ ಅನ್ನಸಂತರ್ಪಣೆ ಮಾಡಿದ ರುದ್ರಮುನಿ
ಆಶಿಸಿದೆ
Pca


ಬೆಂಗಳೂರು, 12 ಜೂನ್ (ಹಿ.ಸ.) :

ಆ್ಯಂಕರ್ : ದಿವಂಗತ ಪುತ್ರನ ಜನ್ಮದಿನದ ಸ್ಮರಣಾರ್ಥ ಸಮಾಜಮುಖಿ ಕಾರ್ಯದ ಮೂಲಕ ಮಾನವೀಯತೆ ಮೆರೆದ ರುದ್ರಮುನಿ ಅವರು ವಿಶೇಷ ಮಕ್ಕಳಿಗಾಗಿ ಅನ್ನಸಂತರ್ಪಣೆಯನ್ನು ಪ್ರಾಯೋಜಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಈ ಕಾರ್ಯಕ್ರಮವನ್ನು ಪಿಸಿಎ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದು, ವಿಶೇಷ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಯಿತು. ರುದ್ರಮುನಿ ಅವರ ಈ ಸಾರ್ಥಕ ಕೊಡುಗೆಯಿಂದ ಮಕ್ಕಳ ಮುಖದಲ್ಲಿ ಸಂತೋಷದ ನಗು ಮೂಡಿದ್ದು, ಕಾರ್ಯಕ್ರಮದಲ್ಲಿ ಹರ್ಷದ ವಾತಾವರಣ ಕಂಡು ಬಂತು.

ಈ ಸಂದರ್ಭದಲ್ಲಿ ಪಿಸಿಎ ಟ್ರಸ್ಟ್ ಪದಾಧಿಕಾರಿಗಳು ರುದ್ರಮುನಿ ಅವರ ಉದಾರತೆ ಹಾಗೂ ಸೇವಾ ಮನೋಭಾವವನ್ನು ಶ್ಲಾಘಿಸಿದರು. ದಿವಂಗತ ಪುತ್ರನ ನೆನಪನ್ನು ಸಮಾಜ ಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಿರುವುದು ಇತರರಿಗೂ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸೇವೆ ಮತ್ತು ಕರುಣೆಯ ಮೂಲಕ ಸಮಾಜದಲ್ಲಿ ಪ್ರೀತಿ ಹಂಚುವ ಇಂತಹ ಕಾರ್ಯಗಳು ಮತ್ತಷ್ಟು ಜನರಿಗೆ ಪ್ರೇರಣೆಯಾಗಲಿ ಎಂದು ಟ್ರಸ್ಟ್ ಆಶಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande