
ಬಳ್ಳಾರಿ, 12 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2ರ ವ್ಯಾಪ್ತಿಯ 220/110/11 ಕೆವಿ ಅಲ್ಲೀಪುರ ಉಪ-ಕೇಂದ್ರ ಮತ್ತು 110/11 ಕೆವಿ ಸೋಮಸಮುದ್ರ ಉಪಕೇಂದ್ರಗಳಲ್ಲಿ ನಿರ್ವಹಣೆ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಾಳೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
(110/11 ಕೆವಿ ಸೋಮಸಮುದ್ರ ಉಪ-ಕೇಂದ್ರದ ವ್ಯಾಪ್ತಿಯಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ) ಎಫ್-6: ತಾಳೂರು ರೋಡ್, ಸ್ನೇಹ ಕಾಲೋನಿ, ಶ್ರೀನಗರ, ರೇಣುಕಾ ನಗರ, ಭಗತ್ಸಿಂಗ್ ನಗರ, ಕನ್ನಡ ನಗರ, ಮಹಾನಂದಿ ಕೊಟ್ಟಂ, ಪಾರ್ವತಿ ನಗರ, ಎಸ್.ಪಿ. ಸರ್ಕಲ್, ಶಾಸ್ತ್ರೀ ನಗರ, ಬ್ಯಾಂಕ್ ಕಾಲೋನಿ, ಬಸವನಕುಂಟೆ, ಸಿರುಗುಪ್ಪ ರೋಡ್, ರಾಮ ನಗರ, ಅವಂಭಾವಿ ಹಾಗೂ ಜಿಲ್ಲಾ ಕೋರ್ಟ್ ಸಂಕೀರ್ಣ.
ಎಫ್-8: ಅಶೋಕ ನಗರ, ಅವಂಭಾವಿ, ಟಿ.ಎಂ.ಜಿ ಲೇಔಟ್, ರಾಮ ನಗರ, ಜಯನಗರ, ಗಾಯತ್ರಿ ನಗರ, ಭುವನಗಿರಿ ಕಾಲೋನಿ, ವೀರಣ್ಣಗೌಡ ಕಾಲೋನಿ ಮತ್ತು ಗಣೇಶ ನಗರ.
(220/110/11 ಕೆವಿ ಅಲ್ಲೀಪುರ ಉಪ-ಕೇಂದ್ರದ ವ್ಯಾಪ್ತಿಯಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ) ಎಫ್-33: ಕೆ.ಎಚ್.ಬಿ. ಕಾಲೋನಿ, ನೇತಾಜಿ ನಗರ, ಇನ್ನಾರೆಡ್ಡಿ ಲೇಔಟ್, ಇನ್ ಫ್ಯಾಂಟ್ರಿ ರೋಡ್, ವಾಸವಿ ಸ್ಕೂಲ್, ಕೊಳಗಲ್ ರೋಡ್, ವಿದ್ಯಾನಗರ, ಕಲ್ಯಾಣಿ ಕಾಲೋನಿ, ಭತ್ರಿ ರೋಡ್, ಭತ್ರಿ, ಗುರು ಕಾಲೋನಿ, ಸತ್ಯವಾಣಿ ನಗರ, ಸಿದ್ಧಾರ್ಥ ನಗರ ಹಾಗೂ ವಿಯಾನಿ ಶಾಲೆ.
ಎಫ್-73: ಬಸವನಕುಂಟೆ, ಕೋಟೆ ಪ್ರದೇಶ, 1ನೇ ಗೇಟ್, 2ನೇ ಗೇಟ್, ಸಿದ್ಧಾರ್ಥ ನಗರ, ಸುಧಾಕ್ರಾಸ್ ಮತ್ತು ಒ.ಪಿ.ಡಿ ಪ್ರದೇಶ. ಎಫ್-77: ಒ.ಪಿ.ಡಿ, ಶಾಂತಿ ನಗರ, ಕೊಳಗಲ್ ರೋಡ್ ಹಾಗೂ ಬಿಎಂಸಿಆರ್ಸಿ ಕ್ಯಾಂಪಸ್. ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸಬೇಕು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್