ನಾಳೆ ಬಳ್ಳಾರಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ, 12 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ 110/11ಕೆ.ವಿ ದಕ್ಷಿಣ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ತುರ್ತಾಗಿ ಕೈಗೊಳ್ಳುತ್ತಿರುವುದರಿಂದ ನಾಳೆ ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ ವಿವಿಧೆಡೆ ವಿದ್ಯ
ನಾಳೆ ಬಳ್ಳಾರಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ


ಬಳ್ಳಾರಿ, 12 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ 110/11ಕೆ.ವಿ ದಕ್ಷಿಣ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ತುರ್ತಾಗಿ ಕೈಗೊಳ್ಳುತ್ತಿರುವುದರಿಂದ ನಾಳೆ ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:

ಎಫ್43 - ಸಿದ್ದಾಪುರ ರಸ್ತೆ ಕೈಗಾರಿಕಾ ಮಾರ್ಗದ ಟಪಾಲ್ ಸ್ಟೀಲ್, ಸಿದ್ದಾಪುರ ರಸ್ತೆ, ಕೈಗಾರಿಕಾ ಪ್ರದೇಶ. ಎಫ್30- ಗುಗ್ಗರಹಟ್ಟಿ ನಗರ ಮಾರ್ಗದ ಗುಗ್ಗರಹಟ್ಟಿ ಗ್ರಾಮ, ಮುಂಡರಗಿ ಹಳೆ ಬೈಪಾಸ್ ರಸ್ತೆ.

ಎಫ್27- ಆಂಧ್ರಾಳ್ ನಗರ ಮಾರ್ಗದ ಅಂದ್ರಾಳ್, ಪಾತ್ರಬೂದಿಹಾಳ್, ಮಂಗಮ್ಮ ಕ್ಯಾಂಪ್, ಚರಕುಂಟೆ ಗ್ರಾಮ. ಎಫ್-29 ಮಿಂಚೇರಿ ಎನ್.ಜೆ.ವೈ ಮಾರ್ಗದ ಮಿಂಚೇರಿ ಗ್ರಾಮ, ಎಸ್.ಜೆ ಕೋಟೆ ಗ್ರಾಮ, ಮುಂಡರಗಿ ಗ್ರಾಮ. ಎಫ್-26 ಚರಕುಂಟ ಐ.ಪಿ ಫೀಡರ್ ಮಾರ್ಗದ ಮುಂಡರಗಿ, ಚರಕುಂಟೆ, ವೈಬೂದಿಹಾಳ್ ಕೃಷಿ ಪ್ರದೇಶಗಳು.

ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande