ರೈತರ ಜಮೀನುಗಳಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ಅರಣ್ಯ ಇಲಾಖೆಯಿಂದ ಸಸಿ ವಿತರಣೆ
ವಿಜಯಪುರ, 12 ಜೂನ್ (ಹಿ.ಸ.) : ಆಂಕರ್ : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅರಣ್ಯ ಇಲಾಖೆಯ ವತಿಯಿಂದ ರೈತರಿಗೆ ವಿವಿಧ ಜಾತಿಯ ಸಸಿಗಳನ್ನು ವಿತರಿಸುವ ಕಾರ್ಯ ನಡೆಯಿತು. ಪ್ರಾದೇಶಿಕ ವಲಯ ಹಾಗೂ ಸಾಮಾಜಿಕ ವಲಯ ಅರಣ್ಯ ವಿಭಾಗಗಳ ಮೂಲಕ ರೈತರಿಗೆ ಉಚಿತವಾಗಿ ಹಾಗೂ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡಲಾಗಿದ್
Sasi ವಿತರಣೆ


ವಿಜಯಪುರ, 12 ಜೂನ್ (ಹಿ.ಸ.) :

ಆಂಕರ್ : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅರಣ್ಯ ಇಲಾಖೆಯ ವತಿಯಿಂದ ರೈತರಿಗೆ ವಿವಿಧ ಜಾತಿಯ ಸಸಿಗಳನ್ನು ವಿತರಿಸುವ ಕಾರ್ಯ ನಡೆಯಿತು. ಪ್ರಾದೇಶಿಕ ವಲಯ ಹಾಗೂ ಸಾಮಾಜಿಕ ವಲಯ ಅರಣ್ಯ ವಿಭಾಗಗಳ ಮೂಲಕ ರೈತರಿಗೆ ಉಚಿತವಾಗಿ ಹಾಗೂ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡಲಾಗಿದ್ದು, ಪರಿಸರ ಸಂರಕ್ಷಣೆ ಮತ್ತು ಅರಣ್ಯ ವಿಸ್ತರಣೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ.

ಒಬ್ಬ ರೈತನಿಗೆ ಒಂದು ಎಕರೆ ಜಮೀನಿಗೆ 160 ಸಸಿಗಳಂತೆ ವಿತರಣೆ ಮಾಡಲಾಗಿದ್ದು, ರೈತರ ಆಧಾರ್ ಕಾರ್ಡ್ ಹಾಗೂ ಜಮೀನಿನ ಉತಾರೆ ದಾಖಲೆಗಳನ್ನು ಪರಿಶೀಲಿಸಿ ಸಸಿಗಳನ್ನು ನೀಡಲಾಯಿತು. ರೈತರು ತಮ್ಮ ಜಮೀನಿನ ಬದಿಗಳಲ್ಲಿ, ಬಯಲು ಪ್ರದೇಶಗಳಲ್ಲಿ ಹಾಗೂ ಕೃಷಿ ಜಮೀನಿನಲ್ಲಿ ಅರಣ್ಯೀಕರಣಕ್ಕೆ ಸಹಕಾರ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದರು.

ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಿಂದ 8×12 ಅಳತೆಯ ಮಹಾಗನಿ, ಹೆಬ್ಬೇವು, ಸೀತಾಫಲ, ಶ್ರೀಗಂಧ, ರಕ್ತಚಂದನ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ಪ್ರತಿ ಸಸಿಗೆ ರೂ.6ರ ದರದಲ್ಲಿ ವಿತರಿಸಲಾಯಿತು. ಅಲ್ಲದೆ 6×9 ಅಳತೆಯ ನಿಂಬೆ, ನುಗ್ಗೆ, ಸೀತಾಫಲ, ಬಾರೆ ಹಾಗೂ ಸಾಗವಾನಿ ಸಸಿಗಳನ್ನು ಪ್ರತಿ ಸಸಿಗೆ ರೂ.3ರ ದರದಲ್ಲಿ ನೀಡಲಾಯಿತು.

ಸಾಮಾಜಿಕ ವಲಯ ಅರಣ್ಯ ವಿಭಾಗದಿಂದಲೂ 8×12 ಅಳತೆಯ ನಿಂಬೆ, ನುಗ್ಗೆ, ಸೀತಾಫಲ, ಬಾರೆ, ಶ್ರೀಗಂಧ ಹಾಗೂ ರಕ್ತಚಂದನ ಸಸಿಗಳನ್ನು ರೂ.6ರ ದರದಲ್ಲಿ ಮತ್ತು 6×9 ಅಳತೆಯ ವಿವಿಧ ಜಾತಿಯ ಸಸಿಗಳನ್ನು ರೂ.3ರ ದರದಲ್ಲಿ ರೈತರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಎಸ್.ಜಿ. ಸಂಗಾಲಕ ಹಾಗೂ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಮಂಜುನಾಥ ಧುಳೆ ಅವರ ಮಾರ್ಗದರ್ಶನದಲ್ಲಿ ಡಿಆರ್ಎಫ್ಓ ಎಚ್.ಎಂ. ಮಲ್ಲಿ, ಹಣಮಂತ ಲೋಣಿ, ಪ್ರವೀಣ ಹಚ್ಯಾಳಕರ, ವಿಕಾಸ ವಿಭೂತಿ, ಅನೀಲ ಭಟ್, ಗಜಾನನ ತಳವಾರ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದು ಸಸಿ ವಿತರಣಾ ಕಾರ್ಯದಲ್ಲಿ ಭಾಗವಹಿಸಿದರು.

ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಕರೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande