ದಂಡ ಪಾವತಿ : ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ಶಿಕ್ಷಿತರ ಬಿಡುಗಡೆ
ಬಳ್ಳಾರಿ, 11 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರೂ ದಂಡ ಪಾವತಿಸದೇ ಜೈಲಿನಲ್ಲಿಯೇ ಉಳಿದಿದ್ದ ಇಬ್ಬರು ಕೈದಿಗಳನ್ನು ರಾಷ್ಟ್ರೀಯ ಪುರುಷರ ಹಿತ ರಕ್ಷಣಾ ಸಮಿತಿ ಹಾಗೂ ಧ್ವನಿ ಮಹಿಳಾ ಮತ್ತು ಮಕ್ಕಳ ಸಂಸ್ಥೆಯು ಇಬ್ಬರ ಮೊತ್ತ ಏಳು ಸಾವಿರ ರೂಪಾ
ದಂಡ ಪಾವತಿ : ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ಶಿಕ್ಷಿತರ ಬಿಡುಗಡೆ


ದಂಡ ಪಾವತಿ : ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ಶಿಕ್ಷಿತರ ಬಿಡುಗಡೆ


ಬಳ್ಳಾರಿ, 11 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರೂ ದಂಡ ಪಾವತಿಸದೇ ಜೈಲಿನಲ್ಲಿಯೇ ಉಳಿದಿದ್ದ ಇಬ್ಬರು ಕೈದಿಗಳನ್ನು ರಾಷ್ಟ್ರೀಯ ಪುರುಷರ ಹಿತ ರಕ್ಷಣಾ ಸಮಿತಿ ಹಾಗೂ ಧ್ವನಿ ಮಹಿಳಾ ಮತ್ತು ಮಕ್ಕಳ ಸಂಸ್ಥೆಯು ಇಬ್ಬರ ಮೊತ್ತ ಏಳು ಸಾವಿರ ರೂಪಾಯಿ ದಂಡದ ಮೊತ್ತವನ್ನು ಪಾವತಿಸಿ ಅವರ ಬಿಡುಗಡೆಗೆ ನೆರವಾಗಿದೆ.

ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ನ್ಯಾಯಾಧೀಶ ರಾಜೇಶ್ ಹೊಸಮನಿ ಅವರು, ಶಿಕ್ಷೆಯ ಅವಧಿ ಮುಗಿದಿದ್ದರೂ ಅಲ್ಪ ಮೊತ್ತದ ದಂಡವನ್ನು ಪಾವತಿಸಲಾಗದೇ ಪರದಾಡುತ್ತಿದ್ದ ಶಿಕ್ಷಿತರಿಗೆ ಸಂಘ ಸಂಸ್ಥೆಗಳು, ದಾನಿಗಳು ದಂಡವನ್ನು ಪಾವತಿಸಿ ಅವರ ಬಿಡುಗಡೆಗೆ ನೆರವಾಗುತ್ತಿರುವುದು ಸ್ವಾಗತಾರ್ಹ ಎಂದರು.

ರಾಷ್ಟ್ರೀಯ ಪುರುಷರ ಹಿತ ರಕ್ಷಣಾ ಸಮಿತಿ ಹಾಗೂ ಧ್ವನಿ ಮಹಿಳಾ ಮತ್ತು ಮಕ್ಕಳ ಸಂಸ್ಥೆಯ ಖಜಾಂಚಿ ವೇದವಲ್ಲಿ, ಜಿಲ್ಲಾ ಅಧ್ಯಕ್ಷ ರಾಮಕೃಷ್ಣ, ಉಪಾಧ್ಯಕ್ಷೆ ಪಿ. ಉಜ್ವಲ ಶ್ರೀಧರ್ ಹಾಗೂ ಜೈಲಿನ ಸಿಬ್ಬಂದಿಗಳು ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande