ಬಳ್ಳಾರಿ : ಮೈಕ್ರೋ ಕಂಟ್ರೋಲರ್ ಮಿನಿ ಪ್ರಾಜೆಕ್ಟ್ ಪ್ರದರ್ಶನ
ಬಳ್ಳಾರಿ, 11 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ ಮತ್ತು ಎಂಜಿನಿಯರಿಂಗ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳು `ಮೈಕ್ರೋ ಕಂಟ್ರೋಲರ್'' ಆಧಾರಿತ ಮಿನಿ ಪ್ರಾಜೆಕ್ಟ್ಗಳ ಪ್ರದರ್ಶನ ಕಾರ್ಯಾಗಾರ ನಡೆಯಿತು. ವಿ
ಬಳ್ಳಾರಿ : ಮೈಕ್ರೋ ಕಂಟ್ರೋಲರ್ ಮಿನಿ ಪ್ರಾಜೆಕ್ಟ್ ಪ್ರದರ್ಶನ


ಬಳ್ಳಾರಿ : ಮೈಕ್ರೋ ಕಂಟ್ರೋಲರ್ ಮಿನಿ ಪ್ರಾಜೆಕ್ಟ್ ಪ್ರದರ್ಶನ


ಬಳ್ಳಾರಿ, 11 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ ಮತ್ತು ಎಂಜಿನಿಯರಿಂಗ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳು `ಮೈಕ್ರೋ ಕಂಟ್ರೋಲರ್' ಆಧಾರಿತ ಮಿನಿ ಪ್ರಾಜೆಕ್ಟ್ಗಳ ಪ್ರದರ್ಶನ ಕಾರ್ಯಾಗಾರ ನಡೆಯಿತು.

ವಿದ್ಯಾರ್ಥಿಗಳು ಮೈಕ್ರೋ ಕಂಟ್ರೋಲರ್ ತಂತ್ರಜ್ಞಾನವನ್ನು ಬಳಸಿ ವಿನೂತನ ಹಾಗೂ ಪ್ರಾಯೋಗಿಕ ಪ್ರಾಜೆಕ್ಟ್ಗಳನ್ನು ಪ್ರದರ್ಶನ ಮಾಡಿದರು.

ಪ್ರಾಜೆಕ್ಟ್ಗಳ ತೀರ್ಪುಗಾರರಾಗಿ ಎಂ.ಟೆಕ್. ಸಂಯೋಜಕರಾದ ಡಾ. ಸ್ವಪ್ನ ಕುಲಕರ್ಣಿ ಹಾಗೂ ಡಾ. ಪಂಪಾಪತಿ ಅವರು ಭಾಗವಹಿಸಿ, ವಿದ್ಯಾರ್ಥಿಗಳ ಪ್ರಾಜೆಕ್ಟ್ಗಳನ್ನು ಮೌಲ್ಯಮಾಪನ ಮಾಡಿ, ಪ್ರಾಜೆಕ್ಟ್ಗಳಲ್ಲಿನ ಹೊಸತನ ಮತ್ತು ತಾಂತ್ರಿಕ ಅಂಶಗಳನ್ನು ಪ್ರಶಂಸಿಸಿ ಅನೇಕ ಮಾರ್ಗದರ್ಶಗಳನ್ನು ನೀಡಿದರು.

ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹಾಬಲೇಶ್ವರಪ್ಪ ಅವರು ನೇತೃತ್ವವಹಿಸಿದ್ದರು. ವಿಭಾಗದ ಮುಖ್ಯಸ್ಥರಾದ ಡಾ. ಗಿರೀಶ ಎಚ್. ಅವರು ವಿದ್ಯಾರ್ಥಿಗಳ ಶ್ರಮವನ್ನು ಶ್ಲಾಘಿಸಿ, ತಂತ್ರಜ್ಞಾನ ಕಲಿಕೆಯಲ್ಲಿ ನಿರಂತರ ಕಲಿಕೆ ಮತ್ತು ನವೀನತೆಯ ಮಹತ್ವವನ್ನು ವಿವರಿಸಿದರು.

ಸಂಚಾಲಕಿ ಶ್ರೀಮತಿ ಸುನಿತಾ ಎಸ್. ಅವರು ಶಿಬಿರವನ್ನು ಯಶಸ್ವಿಯಾಗಿ ಸಂಘಟಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande