ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕೊಪ್ಪಳ ಜಿಲ್ಲಾ ಸಮಾವೇಶ
ಕೊಪ್ಪಳ, 11 ಜೂನ್ (ಹಿ.ಸ.) : ಆ್ಯಂಕರ್ : ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕೊಪ್ಪಳ ಜಿಲ್ಲಾ ಘಟಕವು ಜೂನ್ 12ರ ಶುಕ್ರವಾರ ಸಾಯಂಕಾಲ 5:00 ಘಂಟೆಗೆ ಮುಸ್ಲಿಂ ಶಾದಿ ಮಹಲ್ನಲ್ಲಿ ಜಿಲ್ಲಾ ಮಟ್ಟದ ಸಮಾವೇಶವನ್ನು ಹಮ್ಮಿಕೊಂಡಿದೆ. ಈ ಸಮಾವೇಶದ ಅಂಗವಾಗಿ ಹಮ್ಮಿಕೊಂಡಿರುವ ಬೈಕ್ ರ್ಯಾಲಿಯನ್ನು ಗಡಿಯಾರ ಕಂಬದ ವ
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕೊಪ್ಪಳ ಜಿಲ್ಲಾ ಸಮಾವೇಶ


ಕೊಪ್ಪಳ, 11 ಜೂನ್ (ಹಿ.ಸ.) :

ಆ್ಯಂಕರ್ : ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕೊಪ್ಪಳ ಜಿಲ್ಲಾ ಘಟಕವು ಜೂನ್ 12ರ ಶುಕ್ರವಾರ ಸಾಯಂಕಾಲ 5:00 ಘಂಟೆಗೆ ಮುಸ್ಲಿಂ ಶಾದಿ ಮಹಲ್ನಲ್ಲಿ ಜಿಲ್ಲಾ ಮಟ್ಟದ ಸಮಾವೇಶವನ್ನು ಹಮ್ಮಿಕೊಂಡಿದೆ.

ಈ ಸಮಾವೇಶದ ಅಂಗವಾಗಿ ಹಮ್ಮಿಕೊಂಡಿರುವ ಬೈಕ್ ರ್ಯಾಲಿಯನ್ನು ಗಡಿಯಾರ ಕಂಬದ ವೃತ್ತದಲ್ಲಿ ಚಾಲನೆ ನೀಡಿ, ಅಶೋಕ್ ಸರ್ಕಲ್ ಮುಖಾಂತರ ಮುಸ್ಲಿಂ ಶಾದಿ ಮೆಹಲ್ಗೆ ತಲುಪಲಿದೆ.

ಸಮಾವೇಶದಲ್ಲಿ ರಾಜ್ಯಧ್ಯಕ್ಷರಾಗಿರುವ ನ್ಯಾಯವಾದಿ ತಾಹಿರ್ ಹುಸೇನ್, ರಾಜ್ಯ ಉಪಾಧ್ಯಕ್ಷರು ಇಂಜಿನಿಯರ್ ಹಬೀಬುಲ್ಲಾ ಖಾನ್, ರಾಜ್ಯ ಮಹಿಳಾ ಅಧ್ಯಕ್ಷೆ ಸಾಬಿಯಾ ಪಟೇಲ್, ರಾಜ್ಯ ಮಹಿಳಾ ಕಾರ್ಯದರ್ಶಿ ತಲತ್ ಯಾಸ್ಮಿನ್, ವಲಯ ಕಾರ್ಯದರ್ಶಿ ಇರ್ಫಾನ್, ರಾಜ್ಯ ಕಾರ್ಮಿಕರ ಸಂಘ ಸಂಚಾಲಕರು ರಾಜನಾಯಕ್ ಅವರು ಪಾಲ್ಗೊಳ್ಳಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande