ಕೊಪ್ಪಳ : ಜೆಡಿಎಸ್ ಅಲ್ಪಸಂಖ್ಯಾತ ವಿಭಾಗಗಳಿಗೆ ನೇಮಕ
ಕೊಪ್ಪಳ, 11 ಜೂನ್ (ಹಿ.ಸ.) : ಆ್ಯಂಕರ್ : ಜೆಡಿಎಸ್ ಪಕ್ಷದ ಕೊಪ್ಪಳ ನಗರ ಅಲ್ಪಸಂಖ್ಯಾತ ವಿಭಾಗದ ಘಟಕದ ಉಪಾಧ್ಯಕ್ಷರಾಗಿ ಮರ್ದಾನಲಿ ದಾದುಸಾಬ್ ಗೂದಿ ಹಾಗೂ ತಾಲೂಕು ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷರಾಗಿ ಮೌಲಾ ಹುಸೇನ್ ಶ್ಯಾಮಿದ ಅಲಿ ಅವರನ್ನು ನೇಮಕ ಮಾಡಲಾಗಿದೆ ಎಂದು ಪಕ್ಷ ತಿಳಿಸಿದೆ. ಪಕ್
ಕೊಪ್ಪಳ : ಜೆಡಿಎಸ್ ಅಲ್ಪಸಂಖ್ಯಾತ ವಿಭಾಗಗಳಿಗೆ ನೇಮಕ


ಕೊಪ್ಪಳ : ಜೆಡಿಎಸ್ ಅಲ್ಪಸಂಖ್ಯಾತ ವಿಭಾಗಗಳಿಗೆ ನೇಮಕ


ಕೊಪ್ಪಳ, 11 ಜೂನ್ (ಹಿ.ಸ.) :

ಆ್ಯಂಕರ್ : ಜೆಡಿಎಸ್ ಪಕ್ಷದ ಕೊಪ್ಪಳ ನಗರ ಅಲ್ಪಸಂಖ್ಯಾತ ವಿಭಾಗದ ಘಟಕದ ಉಪಾಧ್ಯಕ್ಷರಾಗಿ ಮರ್ದಾನಲಿ ದಾದುಸಾಬ್ ಗೂದಿ ಹಾಗೂ ತಾಲೂಕು ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷರಾಗಿ ಮೌಲಾ ಹುಸೇನ್ ಶ್ಯಾಮಿದ ಅಲಿ ಅವರನ್ನು ನೇಮಕ ಮಾಡಲಾಗಿದೆ

ಎಂದು ಪಕ್ಷ ತಿಳಿಸಿದೆ.

ಪಕ್ಷದ ಸಭೆಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಸುರೇಶ್ ಬೂಮರಡ್ಡಿ ಇಬ್ಬರಿಗೂ ನೇಮಕಾತಿ ಆದೇಶ ಪತ್ರವನ್ನು ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ ನಿರ್ದೇಶನ ಪ್ರಕಾರ ನೀಡಿದರು.

ಕೊಪ್ಪಳ ನಗರ ಮತ್ತು ತಾಲೂಕಿನಲ್ಲಿ ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದ ಪರವಾಗಿ ನಿಷ್ಠೆಯಿಂದ ದುಡಿದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಪಕ್ಷದ ಜವಾಬ್ದಾರಿಗಳನ್ನು ನೀಡಲಾಗಿದೆ.

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜೆಡಿಎಸ್ ಪಕ್ಷವನ್ನು ಸೇರುವ ನಿರೀಕ್ಷೆಯಿದ್ದು, ಅಲ್ಪಸಂಖ್ಯಾತ ವಿಭಾಗಗಳನ್ನು ಮತ್ತಷ್ಟು ಸದೃಢಗೊಳಿಸಬೇಕು ಎಂದು ಭೂಮರಡ್ಡಿ ತಿಳಿಸಿದ್ದಾರೆ.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ನಾಯಕರು ಕೊಪ್ಪಳಕ್ಕೆ ಸರಣಿ ಭೇಟಿಗಳನ್ನು ನೀಡಲಿದ್ದಾರೆ. ಚುನಾವಣೆಗಳಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳಲ್ಲಿ ಜಯಿಸಲು ಬೇಕಾಗುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶೀಘ್ರದಲ್ಲಿಯೇ ವಿವಿಧ ಹುದ್ದೆಗಳಿಗೆ ಅರ್ಹರನ್ನು ನೇಮಕ ಮಾಡಲಾಗುವುದು. ಸದಸ್ಯತ್ವ ನೋಂದಣಿ ಅಭಿಯಾನವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಪದಾಧಿಕಾರಿಗಳಿಗೆ ಭೂಮರಡ್ಡಿ ಸೂಚಿಸಿದರು.

ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಸಿರಾಜ್ ಹಮದ್ ಬಿಜಾಪುರ, ನಗರ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಸಿರಾಜ್ ಕೋಲ್ಕಾರ, ಜಿಲ್ಲಾ ಕ್ರೀಡಾ ವಿಭಾಗದ ಅಧ್ಯಕ್ಷರಾದ ಸೈಯದ್ ಮಹೇಮೂದ್ ಹುಸೇನಿ ಹಾಗೂ ನಗರ ಘಟಕದ ಅಧ್ಯಕ್ಷರಾದ ಸೋಮನಗೌಡ ಹೊಗರನಾಳ ಸಭೆಯಲ್ಲಿ ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande