
ಕೋಲಾರ, ೧೧ ಜೂನ್ (ಹಿ.ಸ) :
ಆ್ಯಂಕರ್ : ಜಿಲ್ಲೆಯ ಶ್ರೀನಿವಾಪುರ ತಾಲ್ಲೂಕಿನ ಶೀಗೇಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳಿಗೆ ದಾನಿ ನಾಗರಾಜಶೆಟ್ಟಿ ಅವರು ಪ್ರತಿವರ್ಷದಂತೆ ನೀಡಿದ್ದ ಲೇಖನ ಸಾಮಗ್ರಿಗಳು, ಹೆಣ್ಣು ಮಕ್ಕಳಿಗೆ ಸ್ಟಿಕ್ಕರ್ ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ಅವರ ಅನುಪಸ್ಥಿತಿಯಲ್ಲಿ ಪ್ರೌಢಶಾಲಾ ಶಿಕ್ಷಕರಾದ ಪ್ರಕಾಶ್ಬಾಬು, ಕ್ರಿಷ್ಟಸಿಂಗ್ ವಿತರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ಪ್ರಕಾಶ್ ಬಾಬು ಮಾತನಾಡಿ, ದಾನ ನೀಡುವ ಹೃದಯವಂತಿಕೆ ಹಣವಿರುವ ಎಲ್ಲರಿಗೂ ಬರುವುದಿಲ್ಲ ಆದರೆ ನಾಗರಾಜಶೆಟ್ಟಿ ಅವರು, ಜೂನ್ ತಿಂಗಳಲ್ಲಿ ತಪ್ಪದೇ ಈ ಭಾಗದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಿಸುವ ಮೂಲಕ ನೆರವಾಗುತ್ತಿದ್ದಾರೆ. ಮಕ್ಕಳು ಸಿಕ್ಕ ಸೌಲಭ್ಯಗಳನ್ನು ಸಮಗ್ರವಾಗಿ ಬಳಸಿಕೊಂಡು ಸಾಧಕರಾಗಿ ಹೊರಹೊಮ್ಮಬೇಕು, ಮೊಬೈಲ್ ಗೀಳನ್ನು ಬಿಟ್ಟು, ಚೆನ್ನಾಗಿ ಓದಿ ಉತ್ತಮ ಅಂಕ ಪಡೆದು ಶಾಲೆ ಮತ್ತು ಗ್ರಾಮಕ್ಕೆ ಕೀರ್ತಿ ತನ್ನಿ ಎಂದು ಹೇಳಿದರು.
ಸರ್ಕಾರಿ ಶಾಲೆಯೆಂಬ ಕೀಳಿರಿಮೆ ತೊರೆಯಿರಿ, ಈದೇಶದಲ್ಲಿ ಸಾಧನೆ ಮಾಡಿರುವ ಮಹನೀಯರೆಲ್ಲಾ ಇಲ್ಲೇ ಓದಿರುವುದು ಎಂದ ಅವರು, ಮಕ್ಕಳು ಗೈರಾಗದೇ ಶಾಲೆಗೆ ಬಂದರೆ ಸಾಧನೆಗೆ ಅಡ್ಡಿಯಾಗದು ಎಂದ ಅವರು, ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಕಲ್ಪನಾ, ಮುಖಂಡರಾದ ನಂಜಾರೆಡ್ಡಿ, ಮಹಾಲಕ್ಷಿö್ಮ ರವಿಚಂದ್ರನ್, ರಾಜೇಶ್ವರಿ ಮತ್ತಿತರರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್