
ಕೊಪ್ಪಳ, 11 ಜೂನ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿಗಳು ರಾಜ್ಯ ರೈತ ಸಂಘದ ನಿಯೋಗ ಭೇಟಿ ಮಾಡಿದಾಗ ಯಾವುದೇ ಕೆರೆ ಮಂಜೂರಿ ಮಾಡಲು ಬರುವುದಿಲ್ಲ ಎಂದು ಹೇಳಿದ್ದಾರೆ ಎಂದು ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಡಿ.ಕೆ. ಶಿವಕುಮಾರ ಅವರು ಬಸಾಪುರ ಕೆರೆಯನ್ನು ಕಾನೂನು ಉಲ್ಲಂಘನೆ ಮಾಡಿ ಮಂಜೂರಿಯಾಗಿದ್ದೆಂದು ಗಮನಕ್ಕೆ ತಂದಿದ್ದೀರಿ ತ್ವರಿತವಾಗಿ ಪರಿಶೀಲನೆ ಮಾಡಿಸುವೆ ಎಂದು ಹೇಳಿದ ಮರುದಿನವಾದ ಇಂದು ತಹಸೀಲ್ದಾರ್, ಭೂದಾಖಲೆಗಳ ಸರ್ವೆಯರ್ ಬಸಾಪುರ ಕೆರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.
ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ ಇವರು ಸಯಾಯಕ ನಿರ್ದೇಶಕರು ಭೂದಾಖಲೆಗಳು ಇವರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ ನಾವು ಸ್ಯಾಟಲೈಟ್ ಮೂಲಕ ಸರ್ವೆ ಮಾಡುತ್ತೇವೆ ಎಂದು ಹೇಳಿ ತಪ್ಪಿಸಿಕೊಂಡಿದ್ದಾರೆ. ಕೆರೆ ಮುಚ್ಚಿದ್ದರ, ಜಲಮೂಲದ ಹಳ್ಳದ ದಿಕ್ಕು ಬದಲಾಯಿಸಿದ್ದರ, ಕೆರೆಯ ಮೂಲ ಸ್ವರೂಪ ಬದಲಾಯಿಸಿದ್ದರ ಕುರಿತು ದೂರು ಸಲ್ಲಿಸಿದ ನಮ್ಮನ್ನು ಮತ್ತು ರೈತ ಚಳವಳಿಕಾರರನ್ನು ದೂರವಿಡುವುದು, ಕಣ್ಣು ತಪ್ಪಿಸಿ ಕಂಪನಿ ಹೇಳಿದಂತೆ ಸರ್ವೆ ಮಾಡುವುದು ಮುಂದುವರೆದಿದೆ. ಇದು ಮತ್ತೊಂದು ಸಾರಿ ದಾರಿ ತಪ್ಪಿಸುವ ಕ್ರಮವಾಗಬಾರದು ಎಂದರು.
ನಗರಸಭೆ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ 224ನೇ ದಿನದ ಧರಣಿ ಯಶಸ್ವಿಯಾಯಿತು.
ನಗರಕ್ಕೆ ಹೊಂದಿಕೊಂಡು 54 ಸಾವಿರ ಕೋಟಿ ಹೂಡಿಕೆಯಲ್ಲಿ ಬಲ್ಡೋಟ ಕಂಪನಿ ಇಂಟಿಗ್ರೆಟೆಡ್ ಸ್ಟೀಲ್, ಕಲ್ಲಿದ್ದಲು ಸುಟ್ಟು ವಿದ್ಯುತ್ ಮತ್ತು ಡಾಂಬರು ತಯಾರಿಸುವ ಕಾರ್ಖಾನೆ ಸ್ಥಾಪನೆ ಮಾಡಲು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಿದ್ದಂತೆ, ಈ ಕುರಿತು ಎಚ್ಚೆತ್ತುಕೊಃಡ ಗವಿಶ್ರೀಗಳು ಧರ್ಮಾದೇಶ ಮಾಡಿ, ಈ ಬೃಹತ್ ಹೂಡಿಕೆ ಅವಳಿ ನಗರ ಮತ್ತು ಸುತ್ತಲಿನ ಹಳ್ಳಿಗಳ ಜನರ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ ತಡೆಯಬೇಕಾದರೆ ಈ ಒಡಂಬಡಿಕೆ ರದ್ದುಗೊಳಿಸಿದ ಆದೇಶ ಪತ್ರವನ್ನು ಜನಪ್ರತಿನಿಧಿಗಳು ತರಬೇಕೆಂದು, ನಗರದ ಪೂರ್ವ ಭಾಗದಲ್ಲಿ 2011ರಿಂದ ಬಲ್ಡೋಟ ಮಾಲಿಕತ್ವದ ಎಂಎಸ್ಪಿಎಲ್ ಪೆಲ್ಲೆಟ್ ಘಟಕದ ಕಂದು ಧೂಳು ನಗರದ ಅರ್ಧ ಭಾಗ ಬಾಧಿಸುತ್ತಿದೆ.
ನಗರದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿದ್ದು ಈ ಘಟಕ ಬಂದ್ ಮಾಡಿ ಜನರ ಆರೋಗ್ಯ ಕಾಪಾಡಬೇಕೆಂದು, ಬಲ್ಡೋಟ ಕಂಪನಿಯು ಬಸಾಪುರ ಗ್ರಾಮದ ಸಾರ್ವಜನಿಕ ಕೆರೆಯನ್ನು ಅನಧಿಕೃತವಾಗಿ ವಶಪಡಿಸಿಕೊಂಡಿದ್ದು, ಕೆರೆಯ ಸುತ್ತ ಕಂಪನಿ ಹಾಕಿದ ಕಾಂಪೌಂಡ್ ತೆರವು ಮಾಡಿ ಜಾನುವಾರು ನೀರು ಕುಡಿಯಲು ಅವಕಾಶ ಮಾಡಿಕೊಡಬೇಕೆಂದು, ತುಂಗಭದ್ರಾ ನೀರು ವಿಷಗೊಳಿಸುತ್ತಿರುವ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಮುಚ್ಚಬೇಕು. ಹಿರೇಬಗನಾಳ, ಅಲ್ಲಾನಗರ ಪಕ್ಕದ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಕೇಂದ್ರ ಪರಿಸರ ಇಲಾಖೆ ವರದಿಯ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು, ಸರ್ಕಾರ ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು, ಎ.ಐ.ಐ.ಎಂ.ಎಸ್ ಸಂಸ್ಥೆ ಮತ್ತು ಐ.ಐ.ಎಸ್.ಸಿ ಸಂಸ್ಥೆಯಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿಯ ಸಮೀಕ್ಷೆ ನಡೆಸಬೇಕೆಂದು ಸರ್ಕಾರವನ್ನು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದೆ.
ಧರಣಿಯಲ್ಲಿ ಡಾ. ಬಸವರಾಜ ಪೂಜಾರ, ಮಹಾಂತೇಶ ಮಲ್ಲನಗೌಡರ, ಗಾಯಕ ಸದಾಶಿವ ಪಾಟೀಲ್, ಮಹಿಳಾ ಚಿಂತಕಿ ಸಾವಿತ್ರಿ ಮುಜುಮದಾರ, ರವಿ ಕಾಂತನವರ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ರಾಜಶೇಖರ ಏಳುಬಾವಿ, ರಂಗಕರ್ಮಿ ಲಕ್ಷ್ಮಣ ಪೀರಗಾರ, ಶರಣು ಶೆಟ್ಟರ್, ಮಹಾದೇವಪ್ಪ ಮಾವಿನಮಡು, ಬಸವರಾಜಪ್ಪ ಶೆಟ್ಟರ್, ಶಿವಪ್ಪ ಜಲ್ಲಿ, ಚೆನ್ನವೀರಯ್ಯ ಹಿರೇಮಠ ಕುಣಿಕೇರಿ, ಗವಿಸಿದ್ದರಡ್ಡಿ ರಡ್ಡೇರ ಹಾಲವರ್ತಿ, ವಿಜಯಲಕ್ಷ್ಮೀ ಗುತ್ತೇದಾರ, ಅಭಿಜಿತ್ ಅಂಡಗಿ, ಗವಿಸಿದ್ದಪ್ಪ ಚಿಕ್ಕೇನಕೊಪ್ಪ ಇತರರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್