ಜಮ್ಮು-ಕಾಶ್ಮೀರ ಎಲ್ಒಸಿ ಸಮೀಪ ಸ್ಫೋಟ ; ಇಬ್ಬರು ಸೇನಾ ಯೋಧರು ಹುತಾತ್ಮ
ಶ್ರೀನಗರ, 10 ಜೂನ್ (ಹಿ.ಸ.) : ಆ್ಯಂಕರ್ : ಜಮ್ಮು-ಕಾಶ್ಮೀರದ ಉರಿ ವಲಯದ ಕಮಲ್ಕೋಟ್ ಪ್ರದೇಶದಲ್ಲಿ ನಿಯಂತ್ರಣ ರೇಖೆ (ಎಲ್ಒಸಿ) ಸಮೀಪ ಮಂಗಳವಾರ ಸಂಜೆ ಸಂಭವಿಸಿದ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಸೇನೆಯ ಇಬ್ಬರು ಯೋಧರು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ. ಹುತಾತ್ಮರಾದ ಯೋಧರ
ಜಮ್ಮು-ಕಾಶ್ಮೀರ ಎಲ್ಒಸಿ ಸಮೀಪ ಸ್ಫೋಟ ; ಇಬ್ಬರು ಸೇನಾ ಯೋಧರು ಹುತಾತ್ಮ


ಶ್ರೀನಗರ, 10 ಜೂನ್ (ಹಿ.ಸ.) :

ಆ್ಯಂಕರ್ : ಜಮ್ಮು-ಕಾಶ್ಮೀರದ ಉರಿ ವಲಯದ ಕಮಲ್ಕೋಟ್ ಪ್ರದೇಶದಲ್ಲಿ ನಿಯಂತ್ರಣ ರೇಖೆ (ಎಲ್ಒಸಿ) ಸಮೀಪ ಮಂಗಳವಾರ ಸಂಜೆ ಸಂಭವಿಸಿದ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಸೇನೆಯ ಇಬ್ಬರು ಯೋಧರು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ.

ಹುತಾತ್ಮರಾದ ಯೋಧರನ್ನು ಮಹಾರಾಷ್ಟ್ರದ ಐರೋಲಿ ನಿವಾಸಿ ವಿಕ್ರಮ್ ಬಾಲಕೃಷ್ಣ ಚವ್ಹಾಣ್ ಹಾಗೂ ಸತಾರಾ ಜಿಲ್ಲೆಯ ಕರಾಡ್ ತಾಲ್ಲೂಕಿನ ಶಾಹಪುರ ಗ್ರಾಮದ ಅರ್ಜುನ್ ರಾಜೇಂದ್ರ ಜಾಧವ್ ಎಂದು ಗುರುತಿಸಲಾಗಿದೆ.

ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಯೋಧರನ್ನು ತಕ್ಷಣ ಶ್ರೀನಗರದ ಬಾದಾಮಿಬಾಗ್ನಲ್ಲಿರುವ 92 ಬೇಸ್ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ತೀವ್ರ ಚಿಕಿತ್ಸೆ ನೀಡಿದರೂ ಅವರು ಗಾಯಗಳ ತೀವ್ರತೆಗೆ ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ಕುರಿತು ಸೇನೆ ಹಾಗೂ ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande