ಜಾಗತಿಕ ಷೇರುಪೇಟೆಗಳಲ್ಲಿ ಕುಸಿತ
ಉಂಟಾಗಿದೆ
Global market


ನವದೆಹಲಿ, 10 ಜೂನ್ (ಹಿ.ಸ.) :

ಆ್ಯಂಕರ್ : ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ಮತ್ತೆ ಅನಿಶ್ಚಿತತೆಯ ವಾತಾವರಣ ಉಂಟಾಗಿದೆ. ಈ ಬೆಳವಣಿಗೆಯ ಪರಿಣಾಮವಾಗಿ ಅಮೆರಿಕ, ಯುರೋಪ್ ಹಾಗೂ ಏಷ್ಯಾದ ಪ್ರಮುಖ ಷೇರುಪೇಟೆಗಳಲ್ಲಿ ಹೂಡಿಕೆದಾರರು ಮಾರಾಟದತ್ತ ಮುಖ ಮಾಡಿದ್ದು, ಬಹುತೇಕ ಸೂಚ್ಯಂಕಗಳು ಕುಸಿತ ದಾಖಲಿಸಿವೆ.

ವಾಲ್ಸ್ಟ್ರೀಟ್ನಲ್ಲಿ ಕಳೆದ ವಹಿವಾಟು ಅವಧಿಯಲ್ಲಿ ಒತ್ತಡದ ವಾತಾವರಣ ಕಂಡುಬಂದಿದ್ದು, ಎಸ್&ಪಿ 500 ಸೂಚ್ಯಂಕ ಶೇ.0.26ರಷ್ಟು ಇಳಿಕೆ ಕಂಡು 7,386.65 ಅಂಕಗಳಿಗೆ ತಲುಪಿದೆ. ತಂತ್ರಜ್ಞಾನ ಕ್ಷೇತ್ರದ ಷೇರುಗಳನ್ನು ಪ್ರತಿನಿಧಿಸುವ ನ್ಯಾಸ್ಡಾಕ್ ಸೂಚ್ಯಂಕ 250.84 ಅಂಕಗಳಷ್ಟು ಅಥವಾ ಶೇ.0.97ರಷ್ಟು ಕುಸಿದು 25,678.82 ಅಂಕಗಳಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಡೌ ಜೋನ್ಸ್ ಫ್ಯೂಚರ್ಸ್ ಕೂಡ ಇಂದಿನ ವಹಿವಾಟಿನಲ್ಲಿ ದುರ್ಬಲತೆ ತೋರಿದ್ದು, 106.44 ಅಂಕಗಳಷ್ಟು ಇಳಿಕೆ ಕಂಡು 50,765.67 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ಯುರೋಪಿಯನ್ ಮಾರುಕಟ್ಟೆಗಳಲ್ಲೂ ಮಿಶ್ರ ಚಿತ್ರಣ ಕಂಡುಬಂದಿದೆ. ಬ್ರಿಟನ್ನ ಎಫ್ಟಿಎಸ್ಇ ಸೂಚ್ಯಂಕ 145.87 ಅಂಕಗಳಷ್ಟು ಅಥವಾ ಶೇ.1.43ರಷ್ಟು ಕುಸಿದು 10,227.33 ಅಂಕಗಳಲ್ಲಿ ಮುಚ್ಚಲ್ಪಟ್ಟಿದೆ. ಜರ್ಮನಿಯ ಡಿಎಎಕ್ಸ್ ಸೂಚ್ಯಂಕ 183.16 ಅಂಕಗಳಷ್ಟು ಅಥವಾ ಶೇ.0.75ರಷ್ಟು ಇಳಿಕೆ ಕಂಡು 24,433.06 ಅಂಕಗಳಿಗೆ ತಲುಪಿದೆ. ಆದರೆ ಫ್ರಾನ್ಸ್ನ ಸಿಎಸಿ ಸೂಚ್ಯಂಕ ಶೇ.0.05ರಷ್ಟು ಅಲ್ಪ ಏರಿಕೆಯೊಂದಿಗೆ 8,203.43 ಅಂಕಗಳಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಏಷ್ಯಾದ ಮಾರುಕಟ್ಟೆಗಳಲ್ಲಿಯೂ ಮಾರಾಟದ ಒತ್ತಡ ಮುಂದುವರಿದಿದೆ. ಒಂಬತ್ತು ಪ್ರಮುಖ ಮಾರುಕಟ್ಟೆಗಳಲ್ಲಿ ಏಳು ಸೂಚ್ಯಂಕಗಳು ಕುಸಿತದೊಂದಿಗೆ ವಹಿವಾಟು ನಡೆಸುತ್ತಿವೆ. ಜಪಾನ್ನ ನಿಕ್ಕೇಯಿ ಸೂಚ್ಯಂಕ 886.63 ಅಂಕಗಳಷ್ಟು ಅಥವಾ ಶೇ.1.36ರಷ್ಟು ಕುಸಿದು 64,530 ಅಂಕಗಳಿಗೆ ತಲುಪಿದೆ. ಸಿಂಗಾಪುರದ ಸ್ಟ್ರೇಟ್ಸ್ ಟೈಮ್ಸ್ ಸೂಚ್ಯಂಕ ಶೇ.1.04ರಷ್ಟು ಇಳಿಕೆ ಕಂಡು 4,970.90 ಅಂಕಗಳ ಮಟ್ಟಕ್ಕೆ ಜಾರಿದೆ.

ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕದಲ್ಲಿ ಭಾರೀ ಕುಸಿತ ದಾಖಲಾಗಿದ್ದು, 348.01 ಅಂಕಗಳಷ್ಟು ಅಥವಾ ಶೇ.4.30ರಷ್ಟು ಇಳಿಕೆ ಕಂಡು 7,748.92 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ತೈವಾನ್ ವೆಟೆಡ್ ಸೂಚ್ಯಂಕ 614.16 ಅಂಕಗಳಷ್ಟು ಅಥವಾ ಶೇ.1.37ರಷ್ಟು ಕುಸಿದು 44,090.28 ಅಂಕಗಳಿಗೆ ತಲುಪಿದೆ.

ಇನ್ನೊಂದೆಡೆ, ಹಾಂಗ್ಕಾಂಗ್ನ ಹ್ಯಾಂಗ್ಸೆಂಗ್ ಸೂಚ್ಯಂಕ ಶೇ.1.24ರಷ್ಟು, ಥಾಯ್ಲೆಂಡ್ನ ಎಸ್ಇಟಿ ಕಾಂಪೋಸಿಟ್ ಸೂಚ್ಯಂಕ ಶೇ.0.64ರಷ್ಟು ಹಾಗೂ ಚೀನಾದ ಶಾಂಘೈ ಕಾಂಪೋಸಿಟ್ ಸೂಚ್ಯಂಕ ಶೇ.0.58ರಷ್ಟು ಇಳಿಕೆ ದಾಖಲಿಸಿವೆ.

ಆದರೆ ಕೆಲವು ಮಾರುಕಟ್ಟೆಗಳು ಏರಿಕೆ ಕಂಡಿವೆ. ಗಿಫ್ಟ್ ನಿಫ್ಟಿ 145.50 ಅಂಕಗಳಷ್ಟು ಅಥವಾ ಶೇ.0.63ರಷ್ಟು ಏರಿಕೆ ಕಂಡು 23,330 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಇಂಡೋನೇಷ್ಯಾದ ಜಕಾರ್ತಾ ಕಾಂಪೋಸಿಟ್ ಸೂಚ್ಯಂಕ ಕೂಡ ಶೇ.1.50ರಷ್ಟು ಏರಿಕೆ ಕಂಡು 5,832.77 ಅಂಕಗಳಿಗೆ ತಲುಪಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande