

ಬಳ್ಳಾರಿ, 10 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗಾಗಿ ಬಳ್ಳಾರಿ ಗ್ರಾಮೀಣ ಶಾಸಕರಾಗಿರುವ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ಮತ್ತು ಜಿಲ್ಲಾ ಉಸ್ತುವಾರಿ ನೀಡಲು ಆಗ್ರಹಿಸಿ `ಬಿ.ನಾಗೇಂದ್ರ ಅಭಿಮಾನಿಗಳ ಬಳಗ'ವು ಬುಧವಾರ ಬೆಳಗ್ಗೆ ಕಾಗೆ ಪಾರ್ಕ್ನಿಂದ ಗಡಿಗೆ ಚೆನ್ನಪ್ಪ ವೃತ್ತದವರೆಗೆ `ಬೃಹತ್ ಒತ್ತಾಯ' ಮೆರವಣಿಗೆಯನ್ನು ನಡೆಸಿತು.
ಬಿ.ನಾಗೇಂದ್ರ ಅಭಿಮಾನಿಗಳ ಬಳಗದ ಸಂಗನಕಲ್ಲು ವಿಜಯಕುಮಾರ್ ಅವರು ಹಾಗೂ ಪಕ್ಷದ ವಿವಿಧ ಮುಖಂಡರು ಪ್ರತಿಭಟನೆಯ ನಾಯಕತ್ವವಹಿಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ರಾಷ್ಟ್ರೀಯ ವರಿಷ್ಠರು ಬಿ. ನಾಗೇಂದ್ರ ಅವರಿಗೆ `ಕೊಟ್ಟ ಮಾತಿನಂತೆ' ನಡೆದುಕೊಂಡು ಅವರನ್ನು ತಕ್ಷಣವೇ ಸಚಿವರನ್ನಾಗಿ ಘೋಷಣೆ ಮಾಡಬೇಕು ಎಂದು ಕೋರಿದರು.
ಈ ಬೃಹತ್ ಒತ್ತಾಯ ಮೆರವಣಿಗೆಯಲ್ಲಿ ಬಳ್ಳಾರಿ ಜಿಲ್ಲೆಯ ಹಾಗೂ ಬಳ್ಳಾರಿ ಗ್ರಾಮಾಂತರದ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಮತ್ತು ಬಿ. ನಾಗೇಂದ್ರ ಅವರ ಅಭಿಮಾನಿಗಳು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್