ರವೀಂದ್ರನಾಥ ಟ್ಯಾಗೋರ್ ಗೆ ಪ್ರಧಾನಿ ಮೋದಿ ಗೌರವ ನಮನ
ನವದೆಹಲಿ, 09 ಮೇ (ಹಿ.ಸ.) : ಆ್ಯಂಕರ್ : ಪೊಚಿಶೆ ಬೋಯಿಶಾಖ್ ಸಂದರ್ಭದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ನರೇಂದ್ರ ಮೋದಿ ಅವರು ಶನಿವಾರ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ , ರವೀಂದ್ರನಾಥ ಟ್ಯಾಗೋರ್ ಅವರನ್ನು ಸ್
Pm


ನವದೆಹಲಿ, 09 ಮೇ (ಹಿ.ಸ.) :

ಆ್ಯಂಕರ್ : ಪೊಚಿಶೆ ಬೋಯಿಶಾಖ್ ಸಂದರ್ಭದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರಿಗೆ ಗೌರವ ಸಲ್ಲಿಸಿದ್ದಾರೆ.

ನರೇಂದ್ರ ಮೋದಿ ಅವರು ಶನಿವಾರ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ , ರವೀಂದ್ರನಾಥ ಟ್ಯಾಗೋರ್ ಅವರನ್ನು ಸ್ಮರಿಸಿದರು.

ಟ್ಯಾಗೋರ್ ಅವರು ಶ್ರೇಷ್ಠ ಬರಹಗಾರ, ಚಿಂತಕ, ಕವಿ, ಶಿಕ್ಷಣ ತಜ್ಞ ಮತ್ತು ಕಲಾವಿದರಾಗಿದ್ದು, ಭಾರತೀಯ ನಾಗರಿಕತೆಯ ಚೈತನ್ಯವನ್ನು ಪ್ರತಿನಿಧಿಸಿದ ಶಾಶ್ವತ ಧ್ವನಿಯಾಗಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಾನವೀಯತೆಯ ಆಳವಾದ ಭಾವನೆಗಳು ಹಾಗೂ ಭಾರತೀಯ ಸಂಸ್ಕೃತಿಯ ಅತ್ಯುನ್ನತ ಆದರ್ಶಗಳನ್ನು ತಮ್ಮ ಕೃತಿಗಳ ಮೂಲಕ ಅವರು ಅಭಿವ್ಯಕ್ತಿಪಡಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಹೊಸ ಆಲೋಚನೆಗಳು, ಸೃಜನಶೀಲ ಶಕ್ತಿ ಮತ್ತು ಸಾಂಸ್ಕೃತಿಕ ಆತ್ಮವಿಶ್ವಾಸದ ಮೂಲಕ ಸಮಾಜವನ್ನು ಶ್ರೀಮಂತಗೊಳಿಸಿದ ಮಹಾನ್ ವ್ಯಕ್ತಿತ್ವವಾಗಿದ್ದರು ಎಂದು ಮೋದಿ ಹೇಳಿದ್ದಾರೆ. ರಾಷ್ಟ್ರವು ಗುರುದೇವ್ ಟ್ಯಾಗೋರ್ ಅವರನ್ನು ಆಳವಾದ ಗೌರವ ಮತ್ತು ಕೃತಜ್ಞತೆಯೊಂದಿಗೆ ಸದಾ ಸ್ಮರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪೊಚಿಶೆ ಬೋಯಿಶಾಖ್ ಸಂದರ್ಭದಲ್ಲಿ ಈ ಗೌರವ ಸಲ್ಲಿಕೆ ವಿಶೇಷ ಮಹತ್ವ ಪಡೆದಿದ್ದು, ಟ್ಯಾಗೋರ್ ಅವರ ಆಲೋಚನೆಗಳು ಮುಂದಿನ ಪೀಳಿಗೆಗಳಿಗೆ ಸದಾ ಪ್ರೇರಣೆಯಾಗಿರುತ್ತವೆ ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande