ಪಂಜಾಬ್ ನಲ್ಲಿ ಜೋಡಿ ಸ್ಫೋಟ ; ತನಿಖೆ ತೀವ್ರ
ಚಂಡೀಗಡ, 06 ಮೇ (ಹಿ.ಸ.) : ಆ್ಯಂಕರ್ : ಪಂಜಾಬ್ ರಾಜ್ಯದ ಜಲಂಧರ್ ಮತ್ತು ಅಮೃತಸರ ನಗರಗಳಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಎರಡು ಪ್ರತ್ಯೇಕ ಸ್ಫೋಟಗಳು ಭದ್ರತಾ ಸಂಸ್ಥೆಗಳಲ್ಲಿ ಆತಂಕ ಮೂಡಿಸಿವೆ. ಜಲಂಧರ್ನಲ್ಲಿ ಬಿಎಸ್ಎಫ್ ಶಿಬಿರದ ಹೊರಗೆ ನಡೆದ ಮೊದಲ ಸ್ಫೋಟದ ಕೆಲವೇ ಗಂಟೆಗಳ ಬಳಿಕ ಅಮೃತಸರದ ಸೇನಾ ಕ್ಯಾ
Blast spot


ಚಂಡೀಗಡ, 06 ಮೇ (ಹಿ.ಸ.) :

ಆ್ಯಂಕರ್ : ಪಂಜಾಬ್ ರಾಜ್ಯದ ಜಲಂಧರ್ ಮತ್ತು ಅಮೃತಸರ ನಗರಗಳಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಎರಡು ಪ್ರತ್ಯೇಕ ಸ್ಫೋಟಗಳು ಭದ್ರತಾ ಸಂಸ್ಥೆಗಳಲ್ಲಿ ಆತಂಕ ಮೂಡಿಸಿವೆ. ಜಲಂಧರ್ನಲ್ಲಿ ಬಿಎಸ್ಎಫ್ ಶಿಬಿರದ ಹೊರಗೆ ನಡೆದ ಮೊದಲ ಸ್ಫೋಟದ ಕೆಲವೇ ಗಂಟೆಗಳ ಬಳಿಕ ಅಮೃತಸರದ ಸೇನಾ ಕ್ಯಾಂಟೋನ್ಮೆಂಟ್ ಪ್ರದೇಶದ ಹೊರಭಾಗದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಎರಡೂ ಪ್ರಕರಣಗಳಲ್ಲಿ ಐಇಡಿ ಬಳಕೆಯ ಶಂಕೆ ವ್ಯಕ್ತವಾಗಿದೆ.

ಮೊದಲ ಘಟನೆ ಜಲಂಧರ್ನ ಪಿಎಪಿ ಚೌಕ್ ಬಳಿ ನಡೆದಿದೆ. ಬಿಎಸ್ಎಫ್ ಶಿಬಿರದ ಹೊರಗೆ ನಿಲ್ಲಿಸಿದ್ದ ಆಕ್ಟಿವಾ ಸ್ಕೂಟರ್ನಲ್ಲಿ ಸ್ಫೋಟ ಸಂಭವಿಸಿದ್ದು, ಅದು ಮಾಜಿ ಬಿಎಸ್ಎಫ್ ಸಿಬ್ಬಂದಿ ಕಾಶ್ಮೀರ ಸಿಂಗ್ ಅವರಿಗೆ ಸೇರಿದ್ದಾಗಿ ತಿಳಿದುಬಂದಿದೆ. ಅವರ ಪುತ್ರ ಗುರುಪ್ರೀತ್ ಸಿಂಗ್ ಕೂರಿಯರ್ ಸೇವೆಯಲ್ಲಿ ಕೆಲಸ ಮಾಡುತ್ತಿದ್ದು, ಪಾರ್ಸೆಲ್ ಸಂಬಂಧವಾಗಿ ಶಿಬಿರದ ಒಳಗೆ ಹೋಗಿದ್ದಾಗ ಈ ಘಟನೆ ನಡೆದಿದೆ.

ಘಟನೆಯ ಬಳಿಕ ಗುರುಪ್ರೀತ್ ಸಿಂಗ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಧನಪ್ರೀತ್ ಕೌರ್ ಅವರ ಪ್ರಕಾರ, ಸ್ಕೂಟರ್ಗೆ ಬೆಂಕಿ ತಗುಲಿದ ಬಳಿಕ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ. ಸ್ಥಳಕ್ಕೆ ಫೊರೆನ್ಸಿಕ್ ತಂಡ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದೆ. ಇಬ್ಬರು ಅನುಮಾನಾಸ್ಪದ ಯುವಕರನ್ನು ಕೂಡ ವಶಕ್ಕೆ ಪಡೆಯಲಾಗಿದೆ.

ಗುರುಪ್ರೀತ್ ವಿಚಾರಣೆಯಲ್ಲಿ, ತಾನು ಪಾರ್ಸೆಲ್ ನೀಡಲು ಅಲ್ಲ, ಪಡೆಯಲು ಬಂದಿದ್ದೆ ಎಂದು ಹೇಳಿದ್ದಾನೆ. ಗೇಟ್ ಬಳಿ ಕಾಯುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬನು ಅಲ್ಲಿಂದ ಹಾದುಹೋಗಿದ್ದನು, ಕೆಲವೇ ಕ್ಷಣಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾನೆ.

ಇದಕ್ಕೂ ಕೆಲ ಗಂಟೆಗಳ ಬಳಿಕ ಅಮೃತಸರದ ಖಾಸಾ ಪ್ರದೇಶದಲ್ಲಿ ಸೇನಾ ಕ್ಯಾಂಟೋನ್ಮೆಂಟ್ ಹೊರಭಾಗದಲ್ಲಿ ಮತ್ತೊಂದು ಸ್ಫೋಟ ನಡೆದಿದೆ. ಪ್ರಾಥಮಿಕ ಮಾಹಿತಿಯಂತೆ, ಅಪರಿಚಿತ ವ್ಯಕ್ತಿಯೊಬ್ಬನು ಸ್ಫೋಟಕ ವಸ್ತುವನ್ನು ಹೊರಗಿನಿಂದ ಒಳಗೆ ಎಸೆದಿದ್ದು, ಅದು ಟಿನ್ ಶೆಡ್ಗೆ ತಾಗಿ ಸ್ಫೋಟಗೊಂಡಿದೆ. ಪರಿಣಾಮವಾಗಿ ಶೆಡ್ಗೆ ಹಾನಿಯಾಗಿದೆ.

ಅಮೃತಸರ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಸುಹೇಲ್ ಮಿರ್ ಅವರು, ಘಟನೆ ಸ್ಥಳದಿಂದ ಫೊರೆನ್ಸಿಕ್ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಸ್ಫೋಟಗಳಲ್ಲಿ ಬಳಸಿದ ವಸ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ತನಿಖೆಯ ನಂತರವೇ ತಿಳಿಯಲಿದೆ.

ಒಟ್ಟಾರೆ, ಈ ಎರಡು ಸ್ಫೋಟಗಳ ಹಿನ್ನೆಲೆ ಪಂಜಾಬ್ನಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದ್ದು, ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಮುಂದುವರೆಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande