
ಕೋಲಾರ ಮೇ. ೩೦ (ಹಿ.ಸ) ಆಂಕರ್ :
ಆ್ಯಂಕರ್ : ಜನರ ನೋವಿಗೆ ಸ್ಪಂದಿಸುವ ಮನಸ್ಸು ನಮ್ಮದಾಗಬೇಕು. ಕಷ್ಟದಲ್ಲಿರುವವರ ಕಣ್ಣೀರು ಒರೆಸುವ, ರಕ್ಷಣೆಗೆ ಧಾವಿಸುವ ಹೃದಯವಂತ ಯುವಜನರ ನಿರ್ಮಾಣ ಅಗತ್ಯವಾಗಿದೆ. ಇದಕ್ಕಾಗಿ ಜಿಲ್ಲೆಯಾದ್ಯಂತ ಯುವ ರೆಡ್ ಕ್ರಾಸ್ ಘಟಕಗಳು ಸಕ್ರಿಯ ಕಾರ್ಯನಿರ್ವಹಿಸಬೇಕು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಬಿ.ಕೆ.ರವಿ ತಿಳಿಸಿದರು.
ಕೋಲಾರದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ನಗರದ ಸುವರ್ಣ ಕನ್ನಡ ಭವನದಲ್ಲಿ ಏರ್ಪಡಿಸಿದ್ದ, ಯುವ ರೆಡ್ ಕಾರ್ಯಕ್ರಮ ಅಧಿಕಾರಿಗಳ ಒಂದು ದಿನದ ತರಬೇತಿ ಉದ್ಘಾಟಿಸಿ ಮಾತನಾಡಿದರು.
ತ್ಯಾಗ, ಸಹಬಾಳ್ವೆ, ಸಹೋದರತ್ವ ಪದಗಳಿಗೆ ಅರ್ಥ ಮೂಡಿ ಬರಬೇಕಾದರೆ ಯುವ ಪೀಳಿಗೆ ಗ್ರಾಮ ನೈರ್ಮಲ್ಯ, ರಕ್ತದಾನ ಶಿಬಿರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ವಿದ್ಯಾರ್ಥಿ ದೆಸೆಯಿಂದಲೇ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡು ಎನ್ಎಸ್ಎಸ್ ಯುವ ರೆಡ್ ಕ್ರಾಸ್ ಸೇವೆಯನ್ನು ಎಲ್ಲೆಡೆ ವಿಸ್ತಾರ ಗೊಳಿಸುವ ಅಗತ್ಯವಿದೆ ಎಂದರು.
ಇAದಿನ ಮಾಹಿತಿ ತಂತ್ರಜ್ಞಾನದಲ್ಲಿ ಯುವ ಪೀಳಿಗೆ ಜನಸಾಮಾನ್ಯರ ರಕ್ಷಣೆಗೆ ಧಾವಿಸಬೇಕು ಕನ್ನಡ ನಾಡಿನ ತಾಯಿ ಹೃದಯದ ಜನಸಾಮಾನ್ಯರು ಜಾತಿ ಧರ್ಮ ಮತವನ್ನು ಮರೆತು ಜನಸೇವೆಯೇ ಜನಾರ್ದನ ಸೇವೆ ಎಂಬ0ತೆ ಯುವ ಪೀಳಿಗೆಗೆ ದಾರಿದೀವಿಗೆಯಾಗುವ ನಿಟ್ಟಿನಲ್ಲಿ ಚಿಂತಿಸಿ ಬಲಿಷ್ಠ ಯುವಶಕ್ತಿಯನ್ನು ತಯಾರು ಮಾಡಬೇಕಾಗಿದೆ. ಈ ದೆಸೆಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಎಲ್ಲಾ ೧೮೯ ಕಾಲೇಜುಗಳಲ್ಲಿ ಯುವ ರೆಡ್ ಕ್ರಾಸ್ ಘಟಕ ಆರಂಭ ಆಗಬೇಕು ಎಂದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಭಾರತೀಯ ಸಂಸ್ಥೆ ಸಭಾಪತಿ ಬಸ್ಸೂರ್ ರಾಜೀವ್ ಶೆಟ್ಟಿ ಮಾತನಾಡಿ ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ಕಾಲೇಜುಗಳಲ್ಲೂ ಭಾರತೀಯ ರೆಡ್ ಕ್ರಾಸ್ ಯುವ ಘಟಕಗಳನ್ನು ಆರಂಭಿಸಬೇಕೆAದು ವಿದ್ಯಾರ್ಥಿ ಸಮುದಾಯ ಇಂದಿನ ಆಧುನಿಕ ಸಮಾಜದಲ್ಲಿ ತಮ್ಮ ವರ್ತನೆ ಮತ್ತು ಕರ್ತವ್ಯದ ಬಗ್ಗೆ ಅರಿವು ಮೂಡಿಸುವ ಪ್ರಮಾಣಿಕ ಪ್ರಯತ್ನದಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಜಿ.ಶ್ರೀನಿವಾಸ್, ಜಿಲ್ಲಾ ಸಭಾಪತಿ ಡಾ: ಎನ್. ಗೋಪಾಲಕೃಷ್ಣಗೌಡ, ಕಾರ್ಯದರ್ಶಿ ಎಸ್. ನಂದೀಶ್ ಕುಮಾರ್, ಯುವ ರೆಡ್ ಕ್ರಾಸ್ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ವಿ. ಬಾಲಕೃಷ್ಣ, ಎಸ್. ಶಿವರಾಂ, ಹೆಚ್. ಟಿ. ನಾಗೇಶ್, ಡಾ. ಗಣನಾಥ್ ಶೆಟ್ಟಿ ಎಕ್ಕಾರು, ಡಾ. ಪೂರ್ಣಿಮಾ ಜೋಗಿ, ಡಿ. ಜಿ. ಆನಂದ್ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲ ಸಚಿವರಾದ ಪ್ರೊ. ಎಸ್. ಲೋಕನಾಥ್, ನಿದೇಶಕರಾದ ಪ್ರೊ. ಡಿ. ಕುಮುದ. ನೋಡಲ್ ಅಧಿಕಾರಿ ಡಾ. ನಾರಾಯಣ್, ಜಿಲ್ಲಾ ಸಂಸ್ಥೆಯ ಕೋಶಾಧ್ಯಕ್ಷರಾದ ನಾಗೇಂದ್ರ ಪ್ರಸಾದ್, ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್