
ಕೋಲಾರ, ಮೇ ೨೯ (ಹಿ.ಸ) :
ಆ್ಯಂಕರ್ : ಜಿಲ್ಲಾ ಜಾತಿ ಪರಿಶೀಲನೆ ಸಮಿತಿಯು ನಿಜವಾದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ನಡೆದ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಸಭೆಯಲ್ಲಿ ಮಂಡಿಸಲಾದ ಒಟ್ಟು ೨೪ ಪರಿಶಿಷ್ಟ ಜಾತಿ, ಪಂಗಡಗಳ ಸಿಂಧುತ್ವ ಪ್ರಕರಣಗಳ ಪೈಕಿ ಬಂಗಾರಪೇಟೆಯ ಬಲಮಂದೆ ಗ್ರಾಮದ ೧೦ ಪ್ರಕರಣಗಳಲ್ಲಿ ಪಡೆದಿರುವ ಪರಿಶಿಷ್ಟ ಪಂಗಡ ಪ್ರಮಾಣ ಪತ್ರಗಳನ್ನು ಹಾಗೂ ಕೋಲಾರ ನಗರದ ೧ ಪ್ರಕರಣದಲ್ಲಿ ಪಡೆರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಸಮಿತಿಯು ರದ್ದುಗೊಳಿಸಿದೆ.
ಜಿಲ್ಲಾಧಿಕಾರಿಯೂ ಆಗಿರುವ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಾತಿ ಪ್ರಮಾಣಪತ್ರಗಳ ಸಿಂಧುತ್ವದ ಕುರಿತು ದಾಖಲೆಗಳ ಕೂಲಂಕಷ ವಿಚಾರಣೆ ನಡೆಸಲಾಯಿತು. ಸಮಿತಿಯ ಮುಂದಿದ್ದ ಪ್ರಕರಣಗಳ ಪೈಕಿ ಈ ಸಭೆಯಲ್ಲಿ ಒಟ್ಟು ೨೪ ಪ್ರಕರಣಗಳ ವಿಚಾರಣೆ ನಡೆಸಿದ ಸಮಿತಿಯು ಅರ್ಹರಲ್ಲದಿದ್ದರೂ ಮೀಸಲಾತಿ ಹಾಗೂ ಸೌಲಭ್ಯ ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ ಬಂಗಾರಪೇಟೆ ತಾಲ್ಲೂಕಿನ ಬಲಮಂದೆ ಗ್ರಾಮದ ಈ.ಶ್ರೀರಾಮ ಬಲಮಂದೆ ಗ್ರಾಮದ ಬಿ.ಆರ್.ಮಲ್ಲಪ್ಪ, ಬಲಮಂದೆ ಗ್ರಾಮದ ಪ್ರಭಾಕರ ಬಲಮಂದೆ ಗ್ರಾಮದ ಲೋಕೇಶ್, ಬಲಮಂದೆ ಗ್ರಾಮದ ಡಿ.ಮಲ್ಲೇಶ್, ಬಲಮಂದೆ ಗ್ರಾಮದ ಕಿಟ್ಟಪ್ಪ, ಬಲಮಂದೆ ಗ್ರಾಮದ ಶಿವಶಂಕರ್, ಬಲಮಂದೆ ಗ್ರಾಮದ ಬಿ.ವಿ.ರಮೇಶ್ ಕುಮಾರ್, ಬಲಮಂದೆ ಗ್ರಾಮದ ವೆಂಕಟಸ್ವಾಮಿ ಬಲಮಂದೆ ಗ್ರಾಮದ ಬಿ.ಆರ್.ಮಂಜುನಾಥ್ ರವರು ಪಡೆದ ಪರಿಶಿಷ್ಟ ಪಂಗಡ ಪ್ರಮಾಣಪತ್ರಗಳನ್ನು ರದ್ದುಗೊಳಿಸಲಾಗಿದೆ.
ಕೋಲಾರ ಟೌನ್, ವೀರಾಂಜನೇಯನಗರದ ಕೃಷ್ಣಪ್ಪರವರ ಪ್ರಕರಣದಲ್ಲಿ ಪಡೆದ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಲಾಗಿದೆ.
ಇನ್ನು ವಿಚಾರಣಾ ಹಂತದಲ್ಲಿರುವ ಉಳಿದ ಪ್ರಕರಣಗಳನ್ನು ತ್ವರಿತವಾಗಿ ಪರಿಶೀಲಿಸಿ ಮುಂದಿನ ಸಭೆಯಲ್ಲಿ ಸಮಿತಿಯ ಮುಂದಿಡಲು ನಾಗರಿಕಹಕ್ಕು ಜಾರಿ ನಿರ್ದೇಶನಾಲಾಯಕ್ಕೆ ಸೂಚಿಸಲಾಗಿದೆ.
ಅರ್ಹರಿಗೆ ಮಾತ್ರ ಸರ್ಕಾರದ ಸೌಲತ್ತುಗಳು ಹಾಗೂ ಉದ್ಯೋಗ ಮೀಸಲಾತಿ ತಲುಪಬೇಕು ಎಂಬ ನಿಟ್ಟಿನಲ್ಲಿ ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆAದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್