
ನವದೆಹಲಿ, 03 ಮೇ (ಹಿ.ಸ.) :
ಆ್ಯಂಕರ್ : ಹಿಮಾಲಯದ ಮೋಹಕ ದೃಶ್ಯಗಳು ಹಾಗೂ ಭಾರತ ಮತ್ತು ಭೂತಾನ್ ದೇಶಗಳ ಕಾಲಾತೀತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪರಿಚಯಿಸುವ “ಭಾರತ್-ಭೂತಾನ್ ಮಿಸ್ಟಿಕ್ ಮೌಂಟೇನ್ ಟೂರ್” ವಿಶೇಷ ಪ್ರವಾಸವನ್ನು ಭಾರತೀಯ ರೇಲ್ವೆ ಇಲಾಖೆ ಘೋಷಿಸಿದೆ.
ಈ ಯೋಜನೆಯ ಭಾಗವಾಗಿ #ಭಾರತ್ಗೌರವ್ ಡಿಲಕ್ಸ್ ಏಸಿ ಪ್ರವಾಸಿ ರೈಲು 2026ರ ಮೇ 5ರಂದು ದೆಹಲಿಯ ಸಫ್ದರ್ಜಂಗ್ ರೈಲು ನಿಲ್ದಾಣದಿಂದ ತನ್ನ ಮೊದಲ ಪ್ರಯಾಣ ಆರಂಭಿಸಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಪ್ರವಾಸದ ಮೂಲಕ ಪ್ರಯಾಣಿಕರಿಗೆ ಹಿಮಾಲಯದ ನೈಸರ್ಗಿಕ ಸೌಂದರ್ಯ, ಭೂತಾನ್ನ ಶಾಂತ ಆಧ್ಯಾತ್ಮಿಕ ತಾಣಗಳು ಹಾಗೂ ಎರಡು ದೇಶಗಳ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ಪ್ರಯಾಣದಲ್ಲಿ ಅನುಭವಿಸುವ ಅವಕಾಶ ದೊರೆಯಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa