ಇರಾನ್ ಪರಮಾಣು ಕಾರ್ಯಕ್ರಮ ಕುರಿತು ಶಾಂತಿ ಒಪ್ಪಂದದ ಪ್ರಗತಿ
ವಾಷಿಂಗ್ಟನ್, 25 ಮೇ (ಹಿ.ಸ.) : ಆ್ಯಂಕರ್ : ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದ ಭಾಗವಾಗಿ ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ಸಿದ್ಧವಾಗಿದೆ ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಧ್ಯವರ್ತಿ ರಾಷ್ಟ್ರಗಳು ಹಾಗೂ ಮಾತುಕತೆಯ ಮೂಲಕ ನಡೆದ ಚರ
File


ವಾಷಿಂಗ್ಟನ್, 25 ಮೇ (ಹಿ.ಸ.) :

ಆ್ಯಂಕರ್ : ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದ ಭಾಗವಾಗಿ ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ಸಿದ್ಧವಾಗಿದೆ ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಧ್ಯವರ್ತಿ ರಾಷ್ಟ್ರಗಳು ಹಾಗೂ ಮಾತುಕತೆಯ ಮೂಲಕ ನಡೆದ ಚರ್ಚೆಗಳ ಬಳಿಕ ಇರಾನ್ ಮೂಲತಃ ಈ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಅವರು ಹೇಳಿದ್ದಾರೆ. ಒಪ್ಪಂದದಲ್ಲಿ ಅತ್ಯಂತ ಶುದ್ಧೀಕರಿಸಲಾದ ಯುರೇನಿಯಂ ಸಂಗ್ರಹವನ್ನು ನಿರ್ವಹಿಸುವ (ವಿಲೇವಾರಿ) ಪ್ರಾವಧಾನವೂ ಸೇರಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಅಮೆರಿಕದ ಪ್ರಮುಖ ಮಾಧ್ಯಮ ಸಂಸ್ಥೆಗಳಾದ ಸಿಬಿಎಸ್ ನ್ಯೂಸ್ ಹಾಗೂ ಅಲ್ ಜಜೀರಾ ವರದಿಗಳ ಪ್ರಕಾರ, ಅಮೆರಿಕ ಮತ್ತು ಇರಾನ್ ನಡುವಿನ ಅಂತಿಮ ಒಪ್ಪಂದದ ಕಡೆಗೆ ಮಾತುಕತೆಗಳು ಬಹುತೇಕ ಮುಂದುವರೆದಿವೆ. ಎರಡು ದೇಶಗಳ ನಡುವೆ ಮೂಲಭೂತ ಸಿದ್ಧಾಂತಗಳ ವಿಷಯದಲ್ಲಿಯೂ ವ್ಯಾಪಕ ಒಪ್ಪಿಗೆ ಮೂಡಿರುವುದಾಗಿ ಹೇಳಲಾಗಿದೆ.

ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿ, ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಅಮೆರಿಕದ ಪರವಾಗಿ ಸಮಯ ಅನೂಕೂಲವಾಗಿರುವುದರಿಂದ ತುರ್ತು ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಮಧ್ಯಪ್ರಾಚ್ಯದ ನಾಯಕರೊಂದಿಗೆ ನಡೆದ ಮಾತುಕತೆಗಳ ನಂತರ, ಇರಾನ್ ಜೊತೆ ಶಾಂತಿ ಒಪ್ಪಂದ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಕೆಲ ತಾಂತ್ರಿಕ ಶರತ್ತುಗಳ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಶ್ವೇತಭವನದ ಅಧಿಕಾರಿಗಳ ಪ್ರಕಾರ, ಈ ಒಪ್ಪಂದವನ್ನು ಅಂತಿಮಗೊಳಿಸಲು ಇನ್ನೂ ಕೆಲವು ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande