ಸತತ 4ನೇ ಬಾರಿ ಇಂಧನ ದರ ಏರಿಕೆ
ನವದೆಹಲಿ, 25 ಮೇ (ಹಿ.ಸ.) : ಆ್ಯಂಕರ್ : ದೇಶದ ಜನತೆಗೆ ಕೇಂದ್ರ ಸರ್ಕಾರ ಮತ್ತೆ ಇಂಧನ ದರ ಏರಿಕೆಯ ಬಿಸಿ ತಟ್ಟಿಸಿದೆ. ಪೆಟ್ರೋಲ್ ದರವನ್ನು ಪ್ರತಿ ಲೀಟರ್ಗೆ ₹2.61 ಹಾಗೂ ಡೀಸೆಲ್ ದರವನ್ನು ₹2.71 ಹೆಚ್ಚಳ ಮಾಡಲಾಗಿದೆ. ಕಳೆದ 10 ದಿನಗಳಲ್ಲಿ ಇದು ನಾಲ್ಕನೇ ಬಾರಿಗೆ ನಡೆದ ದರ ಏರಿಕೆಯಾಗಿದ್ದು, ನಿರಂತರ ಬ
Fuel pump


ನವದೆಹಲಿ, 25 ಮೇ (ಹಿ.ಸ.) :

ಆ್ಯಂಕರ್ : ದೇಶದ ಜನತೆಗೆ ಕೇಂದ್ರ ಸರ್ಕಾರ ಮತ್ತೆ ಇಂಧನ ದರ ಏರಿಕೆಯ ಬಿಸಿ ತಟ್ಟಿಸಿದೆ. ಪೆಟ್ರೋಲ್ ದರವನ್ನು ಪ್ರತಿ ಲೀಟರ್ಗೆ ₹2.61 ಹಾಗೂ ಡೀಸೆಲ್ ದರವನ್ನು ₹2.71 ಹೆಚ್ಚಳ ಮಾಡಲಾಗಿದೆ. ಕಳೆದ 10 ದಿನಗಳಲ್ಲಿ ಇದು ನಾಲ್ಕನೇ ಬಾರಿಗೆ ನಡೆದ ದರ ಏರಿಕೆಯಾಗಿದ್ದು, ನಿರಂತರ ಬೆಲೆ ಪರಿಷ್ಕರಣೆಯಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.

ಇತ್ತೀಚಿನ ದರ ಏರಿಕೆಯ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ₹102.12 ಹಾಗೂ ಡೀಸೆಲ್ ದರ ₹95.20ಕ್ಕೆ ಏರಿಕೆಯಾಗಿದೆ. ಕಳೆದ ಶನಿವಾರವೂ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ 87ರಿಂದ 91 ಪೈಸೆಯವರೆಗೆ ಹೆಚ್ಚಳ ಮಾಡಲಾಗಿತ್ತು.

ತೈಲ ಮಾರುಕಟ್ಟೆ ಕಂಪನಿಗಳ ಮಾಹಿತಿ ಪ್ರಕಾರ, ದೇಶದ ಪ್ರಮುಖ ನಗರಗಳಲ್ಲಿಯೂ ದರ ಏರಿಕೆಯ ಪರಿಣಾಮ ಸ್ಪಷ್ಟವಾಗಿ ಕಂಡುಬಂದಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ ₹113.51ಕ್ಕೆ, ಮುಂಬೈನಲ್ಲಿ ₹111.21ಕ್ಕೆ ಹಾಗೂ ಬೆಂಗಳೂರಿನಲ್ಲಿ ₹110.60ಕ್ಕೆ ತಲುಪಿದೆ. ಭುವನೇಶ್ವರದಲ್ಲಿ ₹108.80, ಜೈಪುರದಲ್ಲಿ ₹113.40 ಹಾಗೂ ಪಟ್ನಾದಲ್ಲಿ ₹113.50 ದರ ದಾಖಲಾಗಿದೆ.

ಡೀಸೆಲ್ ದರದಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದ್ದು, ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ಗೆ ₹99.82 ಹಾಗೂ ಮುಂಬೈನಲ್ಲಿ ₹97.83ಕ್ಕೆ ಏರಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿರಂತರ ಏರಿಕೆಯಾಗುತ್ತಿರುವುದು ಹಾಗೂ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ದರ ಏರಿಕೆಗೆ ಪ್ರಮುಖ ಕಾರಣವೆಂದು ತೈಲ ಕಂಪನಿಗಳು ಸಮರ್ಥಿಸಿವೆ. ಆಮದು ವೆಚ್ಚ ಹೆಚ್ಚಳದಿಂದ ಉಂಟಾಗುತ್ತಿರುವ ನಷ್ಟವನ್ನು ತಗ್ಗಿಸಲು ಬೆಲೆ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ತಿಳಿಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande