ಭಾರತ–ಸೈಪ್ರಸ್ ಸಂಬಂಧಗಳಿಗೆ ಕಾರ್ಯತಂತ್ರದ ಪಾಲುದಾರಿಕೆ ಸ್ಥಾನಮಾನ
ನವದೆಹಲಿ, 22 ಮೇ (ಹಿ.ಸ.) : ಆ್ಯಂಕರ್ : ಭಾರತ ಮತ್ತು ಸೈಪ್ರಸ್ ನಡುವಿನ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ಎರಡೂ ರಾಷ್ಟ್ರಗಳು ತೀರ್ಮಾನಿಸಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರೊಂದಿಗೆ ನಡೆದ ದ್ವ
Pm


ನವದೆಹಲಿ, 22 ಮೇ (ಹಿ.ಸ.) :

ಆ್ಯಂಕರ್ : ಭಾರತ ಮತ್ತು ಸೈಪ್ರಸ್ ನಡುವಿನ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ಎರಡೂ ರಾಷ್ಟ್ರಗಳು ತೀರ್ಮಾನಿಸಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರೊಂದಿಗೆ ನಡೆದ ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.

ಭಾರತ ಮತ್ತು ಸೈಪ್ರಸ್ ನಡುವಿನ ಸ್ನೇಹವು ಭವಿಷ್ಯೋನ್ಮುಖವಾಗಿದ್ದು, ಪ್ರಜಾಪ್ರಭುತ್ವ, ಕಾನೂನಿನ ಆಡಳಿತ, ರಾಷ್ಟ್ರಗಳ ಸ್ವಾಯತ್ತತೆ ಹಾಗೂ ಪ್ರಾದೇಶಿಕ ಅಖಂಡತೆಯ ಗೌರವ ಎಂಬ ಸಾಮಾನ್ಯ ಮೌಲ್ಯಗಳು ಎರಡೂ ದೇಶಗಳ ಸಂಬಂಧದ ಬುನಾದಿಯಾಗಿವೆ ಎಂದು ಮೋದಿ ಹೇಳಿದರು. ಈ ಮೌಲ್ಯಗಳಿಗೆ ಭಾರತ ಸದಾ ಬದ್ಧವಾಗಿರುತ್ತದೆ ಎಂದರು.

ಕಳೆದ ಹತ್ತು ವರ್ಷಗಳಲ್ಲಿ ಸೈಪ್ರಸ್ನಿಂದ ಭಾರತಕ್ಕೆ ಬಂದಿರುವ ಹೂಡಿಕೆ ದ್ವಿಗುಣಗೊಂಡಿದ್ದು, ಇದು ಉಭಯ ದೇಶಗಳ ನಡುವಿನ ಪರಸ್ಪರ ವಿಶ್ವಾಸದ ಪ್ರತೀಕವಾಗಿದೆ ಎಂದು ಅವರು ಹೇಳಿದರು. ಭಾರತ–ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದದಿಂದ ಹೊಸ ಆರ್ಥಿಕ ಅವಕಾಶಗಳು ಸೃಷ್ಟಿಯಾಗಿವೆ. ಇದೇ ಅವಕಾಶಗಳನ್ನು ಬಳಸಿಕೊಂಡು ಮುಂದಿನ ಐದು ವರ್ಷಗಳಲ್ಲಿ ಸೈಪ್ರಸ್ನಿಂದ ಭಾರತಕ್ಕೆ ಆಗುವ ಹೂಡಿಕೆಯನ್ನು ಮತ್ತೆ ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಭಾರತ ಮತ್ತು ಸೈಪ್ರಸ್ ನಡುವಿನ ಸಂಬಂಧಗಳು ಕಾಲದ ಪರೀಕ್ಷೆಯಲ್ಲಿ ಸದಾ ಯಶಸ್ವಿಯಾಗಿವೆ. ಈಗ ಈ ಸಂಬಂಧಗಳಿಗೆ ಕಾರ್ಯತಂತ್ರದ ಪಾಲುದಾರಿಕೆ ಸ್ಥಾನಮಾನ ದೊರೆತಿರುವುದರಿಂದ ಹೊಸ ವೇಗ ಮತ್ತು ಹೊಸ ದಿಕ್ಕು ಸಿಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟರು.

ಉಭಯ ದೇಶಗಳು ವಲಸೆ ಮತ್ತು ಸಂಚಾರ ಒಪ್ಪಂದ, ಸಾಮಾಜಿಕ ಭದ್ರತಾ ಒಪ್ಪಂದಗಳ ಬಗ್ಗೆ ಸಹಮತಕ್ಕೆ ಬಂದಿವೆ. ಜೊತೆಗೆ ಉನ್ನತ ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಹಲವು ಒಪ್ಪಂದಗಳು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಭಾರತ ಮತ್ತು ಯುರೋಪ್ ನಡುವಿನ ಸಂಬಂಧಗಳು ಹೊಸ ಸುವರ್ಣಯುಗಕ್ಕೆ ಕಾಲಿಟ್ಟಿವೆ. ಈ ಸಂದರ್ಭದಲ್ಲಿ ಯುರೋಪಿಯನ್ ಒಕ್ಕೂಟ ಪರಿಷತ್ತಿನ ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಸೈಪ್ರಸ್, ಭಾರತ ಮತ್ತು ಯುರೋಪ್ ನಡುವಿನ ಪ್ರಮುಖ ಹೂಡಿಕೆ ಪ್ರವೇಶ ದ್ವಾರವಾಗಿ ಹೊರಹೊಮ್ಮುತ್ತಿದೆ ಎಂದು ಮೋದಿ ಹೇಳಿದರು.

ಜಾಗತಿಕ ವಿಚಾರಗಳ ಕುರಿತು ಮಾತನಾಡಿದ ಅವರು, ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಂತಹ ಸಂಘರ್ಷ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆ ಹಾಗೂ ಸಂಘರ್ಷಗಳ ತ್ವರಿತ ಅಂತ್ಯಕ್ಕೆ ಭಾರತ ಬೆಂಬಲ ನೀಡುತ್ತದೆ ಎಂದು ಹೇಳಿದರು. ಜಾಗತಿಕ ಸವಾಲುಗಳನ್ನು ಎದುರಿಸಲು ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ತ್ವರಿತ ಮತ್ತು ಮಹತ್ವದ ಸುಧಾರಣೆಗಳ ಅಗತ್ಯವಿದೆ ಎಂದೂ ಅವರು ಅಭಿಪ್ರಾಯಪಟ್ಟರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande