
ನವದೆಹಲಿ, 22 ಮೇ (ಹಿ.ಸ.) :
ಆ್ಯಂಕರ್ : ಈದ್-ಉಲ್-ಜುಹಾ (ಬಕ್ರೀದ್) ಹಬ್ಬದ ಪ್ರಯುಕ್ತ ದೆಹಲಿ ಮತ್ತು ನವದೆಹಲಿಯಲ್ಲಿರುವ ಎಲ್ಲಾ ಕೇಂದ್ರ ಸರ್ಕಾರಿ ಆಡಳಿತ ಕಚೇರಿಗಳ ರಜೆ ದಿನಾಂಕವನ್ನು ಕೇಂದ್ರ ಸರ್ಕಾರ ಬದಲಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕೇಂದ್ರ ಸರಕಾರ, ಈ ಮೊದಲು ಮೇ 27, 2026ರಂದು ಘೋಷಿಸಲಾಗಿದ್ದ ರಜೆಯನ್ನು ಇದೀಗ ಮೇ 28, 2026ಕ್ಕೆ ವರ್ಗಾಯಿಸಲಾಗಿದೆ. ಅದರಂತೆ ದೆಹಲಿ ಹಾಗೂ ನವದೆಹಲಿಯಲ್ಲಿನ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು ಮೇ 28ರಂದು ಮುಚ್ಚಲ್ಪಡಲಿವೆ ಎಂದು ತಿಳಿಸಿದೆ.
ಹಬ್ಬದ ಚಂದ್ರದರ್ಶನ ಹಾಗೂ ಧಾರ್ಮಿಕ ಆಚರಣೆಗಳ ವೇಳಾಪಟ್ಟಿಯನ್ನು ಪರಿಗಣಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.