ಮಣಿಪುರದಲ್ಲಿ ಏಳು ಉಗ್ರರ ಬಂಧನ ; ಶಸ್ತ್ರಾಸ್ತ್ರ, ಮಾದಕ ವಸ್ತು ವಶ
ಇಂಫಾಲ್, 21 ಮೇ (ಹಿ.ಸ.) : ಆ್ಯಂಕರ್ : ಮಣಿಪುರ ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಭದ್ರತಾ ಪಡೆಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ಸಾಮಗ್ರಿ ಹಾಗೂ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮ
Arrest


ಇಂಫಾಲ್, 21 ಮೇ (ಹಿ.ಸ.) :

ಆ್ಯಂಕರ್ : ಮಣಿಪುರ ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಭದ್ರತಾ ಪಡೆಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ಸಾಮಗ್ರಿ ಹಾಗೂ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಣಿಪುರ ಪೊಲೀಸ್ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಇಂಫಾಲ್ ಪಶ್ಚಿಮ ಜಿಲ್ಲೆಯ ಲಾಮ್ಡೆಂಗ್ ಪ್ರದೇಶದಲ್ಲಿ ನಿಷೇಧಿತ ಉಗ್ರ ಸಂಘಟನೆ ಯುಎನ್ಎಲ್ಎಫ್ (ಪಿ)ಗೆ ಸೇರಿದ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಬಂಧಿತರನ್ನು ಆರಾಂಬಂ ಟೊಮ್ಟೊಮ್ (29) ಮತ್ತು ಹೇಿಸ್ನಾಮ್ ಥಾಮಸ್ ಎಂದು ಗುರುತಿಸಲಾಗಿದೆ. ಇವರ ಬಳಿಯಿಂದ ಒಂದು ಇನ್ಸಾಸ್ ಲಘು ಯಂತ್ರಗನ್, ಮೂರು ಮ್ಯಾಗಜಿನ್ಗಳು ಹಾಗೂ 14 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚುರಾಚಾಂದ್ಪುರ ಜಿಲ್ಲೆಯ ಸಿಂಗಂಗಾಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ-102ಬಿ ಸಮೀಪ ಮತ್ತಿಬ್ಬರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಒಬ್ಬ ಮ್ಯಾನ್ಮಾರ್ ದೇಶದ ಪ್ರಜೆಯಾಗಿದ್ದು, ಖುಪ್ಸಿಯಾನ್ಖೈ ವುವಾಲ್ನಾಮ್ (31) ಮತ್ತು ದೌಖಾನ್ಲಾಲ್ ಥಾಂಗ್ಸಿಂಗ್ (34) ಎಂದು ಗುರುತಿಸಲಾಗಿದೆ. ಇವರ ಬಳಿಯಿಂದ ಸುಮಾರು 2.127 ಕಿಲೋಗ್ರಾಂ ತೂಕದ ಬ್ರೌನ್ ಶುಗರ್ ಅಡಗಿಸಿದ್ದ 55 ಸಾಬೂನು ಡಬ್ಬಿಗಳನ್ನು ಹಾಗೂ ಒಂದು ಕೆನ್ಬೋ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದೇ ವೇಳೆ, ಇಂಫಾಲ್ ಪೂರ್ವ ಜಿಲ್ಲೆಯ ಇರಿಲ್ಬುಂಗ್ ಪೊಲೀಸ್ ಠಾಣೆಯ ಚೆಕ್ಗೇಟ್ನಲ್ಲಿ ತಪಾಸಣೆ ನಡೆಸಿದ ವೇಳೆ ಇಬ್ಬರನ್ನು ಬಂಧಿಸಲಾಗಿದೆ. ಯಾಂಬೆಂ ಸುಧೀರ್ ಸಿಂಗ್ ಅಲಿಯಾಸ್ ಸದಾನಂದ್ (20) ಹಾಗೂ ಥೋಂಗಮ್ ಬಿಶಾಲ್ ಸಿಂಗ್ ಅಲಿಯಾಸ್ ಅಮುಜಾವ್ (26) ಬಂಧಿತರು. ಇವರ ಬಳಿಯಿಂದ ಸುಮಾರು 3.3 ಕಿಲೋಗ್ರಾಂ ಕಚ್ಚಾ ಗಾಂಜಾ, ಒಂದು ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನ, ಮತ್ತೊಂದು ಬೈಕ್ ಹಾಗೂ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ತೇಂಗ್ನೌಪಾಲ್ ಜಿಲ್ಲೆಯ ಮೋರೆಹ್ ಪೊಲೀಸ್ ಠಾಣಾ ವ್ಯಾಪ್ತಿಯ ಅಂತರರಾಷ್ಟ್ರೀಯ ಗಡಿ ಕಂಬ ಸಂಖ್ಯೆ 72 ಮತ್ತು 73ರ ಸಮೀಪ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಒಂದು ಎಸ್ಎಲ್ಆರ್ ರೈಫಲ್, ಒಂದು 9 ಎಂಎಂ ಪಿಸ್ತೂಲ್, ನಾಲ್ಕು ವೈರ್ಲೆಸ್ ರೇಡಿಯೋ ಸೆಟ್ಗಳು, ಒಂದು ರೇಡಿಯೋ ಚಾರ್ಜರ್ ಮತ್ತು ನಾಲ್ಕು ಸುಧಾರಿತ ಸ್ಫೋಟಕ ಸಾಧನಗಳನ್ನು ಪತ್ತೆಹಚ್ಚಲಾಗಿದೆ. ಪತ್ತೆಯಾದ ಸ್ಫೋಟಕಗಳನ್ನು ಸ್ಥಳದಲ್ಲೇ ನಿಷ್ಕ್ರಿಯಗೊಳಿಸಲಾಗಿದೆ.

ಇನ್ನೊಂದೆಡೆ, ನಿಷೇಧಿತ ಪ್ರೀಪಾಕ್ (ವಿಸಿ) ಸಂಘಟನೆಗೆ ಕಾರ್ಯಕರ್ತರನ್ನು ಸೇರ್ಪಡೆ ಮಾಡುತ್ತಿದ್ದ ಲೈಶ್ರಾಮ್ ಸುರಜಿತ್ ಮೈತೈ ಅಲಿಯಾಸ್ ನಾನಾವ್ (29) ಎಂಬಾತನನ್ನು ಇಂಫಾಲ್ ಪೂರ್ವ ಜಿಲ್ಲೆಯ ಸಚಿವಪುಖ್ರಿ ಪ್ರದೇಶದಲ್ಲಿ ಬಂಧಿಸಲಾಗಿದೆ. ಆತನ ಬಳಿಯಿಂದ ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಮಹಿಳೆಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಫ್ (26) ಎಂಬಾತನನ್ನು ಇಂಫಾಲ್ ಪೂರ್ವ ಜಿಲ್ಲೆಯ ಚೆಕಾನ್ ಆಟೋ ಪಾರ್ಕಿಂಗ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande