ಬಾಬಾ ಬಂದಾ ಸಿಂಗ್ ಬಹದ್ದೂರ್ ಅವರಿಗೆ ಅಮಿತ್ ಶಾ ನಮನ
ನವದೆಹಲಿ, 12 ಮೇ (ಹಿ.ಸ.) : ಆ್ಯಂಕರ್ : ಸರ್ಹಿಂದ್ ಫತೇಹ್ ದಿವಸ್ ಅಂಗವಾಗಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ದೇಶದ ಜನತೆಗೆ ಶುಭಾಶಯ ಕೋರಿದ್ದು, ಮಹಾನ್ ಸಿಖ್ ಯೋಧ ಬಾಬಾ ಬಂದಾ ಸಿಂಗ್ ಬಹದ್ದೂರ್ ಅವರ ಸಾಹಸ, ತ್ಯಾಗ ಮತ್ತು ಧರ್ಮರಕ್ಷಣೆಯ ಸೇವೆಯನ್ನು ಸ್ಮರಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್
ಬಾಬಾ


ನವದೆಹಲಿ, 12 ಮೇ (ಹಿ.ಸ.) :

ಆ್ಯಂಕರ್ : ಸರ್ಹಿಂದ್ ಫತೇಹ್ ದಿವಸ್ ಅಂಗವಾಗಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ದೇಶದ ಜನತೆಗೆ ಶುಭಾಶಯ ಕೋರಿದ್ದು, ಮಹಾನ್ ಸಿಖ್ ಯೋಧ ಬಾಬಾ ಬಂದಾ ಸಿಂಗ್ ಬಹದ್ದೂರ್ ಅವರ ಸಾಹಸ, ತ್ಯಾಗ ಮತ್ತು ಧರ್ಮರಕ್ಷಣೆಯ ಸೇವೆಯನ್ನು ಸ್ಮರಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿರುವ ಅಮಿತ್ ಶಾ, “ಬಾಬಾ ಬಂದಾ ಸಿಂಗ್ ಬಹದ್ದೂರ್ ಅವರು ಅಚಲ ನಂಬಿಕೆ, ತಾಯಿನಾಡಿನ ಮೇಲಿನ ಅಪಾರ ಸಮರ್ಪಣೆ ಮತ್ತು ಅನ್ಯಾಯದ ವಿರುದ್ಧದ ಅಸಾಧಾರಣ ಹೋರಾಟದ ಪ್ರತೀಕವಾಗಿದ್ದರು” ಎಂದು ಹೇಳಿದ್ದಾರೆ.

ರೈತರನ್ನು ಸಂಘಟಿಸಿ ಅನ್ಯಾಯದ ವಿರುದ್ಧ ಹೋರಾಟ ನಡೆಸಿದ ಅವರು, ಮೊಘಲರನ್ನು ಸೋಲಿಸಿ ಆತ್ಮಗೌರವ, ಧೈರ್ಯ ಮತ್ತು ಧರ್ಮರಕ್ಷಣೆಯ ಅಮರ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಶಾ ಪ್ರಶಂಸಿಸಿದ್ದಾರೆ.

ಗೃಹ ಸಚಿವರ ಪ್ರಕಾರ, ಬಾಬಾ ಬಂದಾ ಸಿಂಗ್ ಬಹದ್ದೂರ್ ಅವರು ಧೈರ್ಯಶಾಲಿ ತಪಸ್ವಿ ಹಾಗೂ ಧರ್ಮವನ್ನು ಕಾಪಾಡಿದ ಅಜೇಯ ಯೋಧರಾಗಿದ್ದರು. ಅನೇಕ ಚಿತ್ರಹಿಂಸೆಗಳನ್ನು ಅನುಭವಿಸಿದರೂ ಅವರು ಧಾರ್ಮಿಕ ಮತಾಂತರವನ್ನು ಒಪ್ಪಲಿಲ್ಲ. ಅವರ ಜೀವನ ರಾಷ್ಟ್ರಭಕ್ತಿ ಮತ್ತು ಧರ್ಮರಕ್ಷಣೆಗೆ ಶಾಶ್ವತ ಸ್ಫೂರ್ತಿಯಾಗಿದೆ ಎಂದು ತಿಳಿಸಿದ್ದಾರೆ.

ಐತಿಹಾಸಿಕ ಮಾಹಿತಿಯ ಪ್ರಕಾರ, ಬಾಬಾ ಬಂದಾ ಸಿಂಗ್ ಬಹದ್ದೂರ್ ಅವರು ಜಮ್ಮು-ಕಾಶ್ಮೀರದ ರಜೌರಿ ಪ್ರದೇಶದಲ್ಲಿ ಲಕ್ಷ್ಮಣ್ ದೇವ್ ಎಂಬ ಹೆಸರಿನಲ್ಲಿ ಜನಿಸಿದ್ದರು. ಬಳಿಕ ಅವರು ವೈರಾಗ್ಯ ಜೀವನ ಸ್ವೀಕರಿಸಿ ‘ಮಾಧೋ ದಾಸ್ ಬೈರಾಗಿ’ ಎಂದು ಪ್ರಸಿದ್ಧರಾದರು.

1708ರಲ್ಲಿ ನಾಂದೇಡಿನಲ್ಲಿ ಗುರು ಗೋಬಿಂದ್ ಸಿಂಗ್ ಅವರನ್ನು ಭೇಟಿಯಾದ ಬಳಿಕ, ಅವರಿಗೆ ‘ಬಂದಾ ಸಿಂಗ್ ಬಹದ್ದೂರ್’ ಎಂಬ ಹೆಸರನ್ನಿಟ್ಟು ಖಾಲ್ಸಾ ಸೈನ್ಯದ ನೇತೃತ್ವ ವಹಿಸಲಾಯಿತು.

1709ರಲ್ಲಿ ಸಮಾನಾ ಪ್ರದೇಶವನ್ನು ವಶಪಡಿಸಿಕೊಂಡ ಅವರು, 1710ರಲ್ಲಿ ನಡೆದ ಸಿರ್ಹಿಂದ್ ಯುದ್ಧದಲ್ಲಿ ಮೊಘಲ್ ಸುಬೇದಾರ್ ವಜೀರ್ ಖಾನ್ ಅವರನ್ನು ಸೋಲಿಸಿದರು. ನಂತರ ಪಂಜಾಬಿನ ರೈತರಿಗೆ ಭೂಸ್ವಾಮ್ಯ ಹಕ್ಕು ನೀಡುವ ಮೂಲಕ ಜಮೀನ್ದಾರಿ ವ್ಯವಸ್ಥೆಗೆ ತೆರೆ ಎಳೆದು, ಮೊದಲ ಸಿಖ್ ರಾಜ್ಯದ ಸ್ಥಾಪನೆಗೆ ಕಾರಣರಾದರು.

1715ರಲ್ಲಿ ಮೊಘಲರಿಂದ ಬಂಧಿತರಾದ ಬಂದಾ ಸಿಂಗ್ ಬಹದ್ದೂರ್ ಅವರಿಗೆ ದೆಹಲಿಯಲ್ಲಿ ಮರಣದಂಡನೆ ವಿಧಿಸಲಾಯಿತು. ಅವರ ಜೀವನ ಧೈರ್ಯ, ಆತ್ಮಗೌರವ ಮತ್ತು ಧರ್ಮರಕ್ಷಣೆಯ ಅಮರ ಸಂಕೇತವಾಗಿ ಇಂದಿಗೂ ಸ್ಮರಿಸಲಾಗುತ್ತಿದೆ.

ಪ್ರತಿ ವರ್ಷ ಮೇ 12ರಿಂದ 14ರವರೆಗೆ ಆಚರಿಸಲಾಗುವ ಸರ್ಹಿಂದ್ ಫತೇಹ್ ದಿವಸ್, 1710ರಲ್ಲಿ ಸರ್ಹಿಂದ್ ಮೇಲಿನ ವಿಜಯ ಮತ್ತು ಮೊದಲ ಸಿಖ್ ರಾಜ್ಯದ ಸ್ಥಾಪನೆಯ ಐತಿಹಾಸಿಕ ಘಟ್ಟವನ್ನು ಸ್ಮರಿಸುವ ದಿನವಾಗಿದೆ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande