ರಸಗೊಬ್ಬರ ಬಿಕ್ಕಟ್ಟಿನಲ್ಲಿ ಕೇಂದ್ರ ಸರ್ಕಾರ ವಿಫಲ : ಕಾಂಗ್ರೆಸ್
ನವದೆಹಲಿ, 12 ಮೇ (ಹಿ.ಸ.) : ಆ್ಯಂಕರ್ : ದೇಶದಲ್ಲಿ ಉಂಟಾಗಿರುವ ರಸಗೊಬ್ಬರ ಬಿಕ್ಕಟ್ಟಿನ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಖಾರಿಫ್ ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರ ಪೂರೈಕೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಪಿಎಂ-
ಪವನ್ ಖೇರಾ


ನವದೆಹಲಿ, 12 ಮೇ (ಹಿ.ಸ.) :

ಆ್ಯಂಕರ್ : ದೇಶದಲ್ಲಿ ಉಂಟಾಗಿರುವ ರಸಗೊಬ್ಬರ ಬಿಕ್ಕಟ್ಟಿನ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಖಾರಿಫ್ ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರ ಪೂರೈಕೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಪಿಎಂ-ಪ್ರಾಣಂ ಯೋಜನೆ ಮೂರು ವರ್ಷ ಕಳೆದರೂ ಯಾವುದೇ ಪರಿಣಾಮ ತೋರಿಸಿಲ್ಲ ಎಂದು ಟೀಕಿಸಿದೆ.

ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಪವನ್ ಖೇರಾ ಮಂಗಳವಾರ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ದೇಶಕ್ಕೆ ಪ್ರಸಕ್ತ ದಾಸ್ತಾನಿನಲ್ಲಿ 390.54 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಅಗತ್ಯವಿದ್ದರೂ, ಕೇಂದ್ರ ಸರ್ಕಾರ ಕೇವಲ ಶೇಕಡಾ 51ರಷ್ಟು ಮಾತ್ರ ಪೂರೈಕೆ ಮಾಡಿದೆ ಎಂದು ಆರೋಪಿಸಿದ್ದಾರೆ.

2023ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ್ದ ಪಿಎಂ-ಪ್ರಾಣಂ ಯೋಜನೆಯಡಿ ಈವರೆಗೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಒಂದು ಪ್ರೋತ್ಸಾಹಕವೂ ನೀಡಲಾಗಿಲ್ಲ ಎಂದು ಅವರು ಹೇಳಿದ್ದಾರೆ. ಇದರ ಪರಿಣಾಮವಾಗಿ ರೈತರು ಇನ್ನೂ ಆಮದು ಮಾಡಿಕೊಂಡ ರಾಸಾಯನಿಕ ರಸಗೊಬ್ಬರಗಳ ಮೇಲೆಯೇ ಅವಲಂಬಿತರಾಗಿದ್ದಾರೆ ಎಂದು ಟೀಕಿಸಿದರು.

ಪ್ರಧಾನಮಂತ್ರಿಯವರು ರೈತರಿಗೆ ರಾಸಾಯನಿಕ ರಸಗೊಬ್ಬರ ಬಳಕೆಯನ್ನು ಶೇಕಡಾ 50ರಷ್ಟು ಕಡಿಮೆ ಮಾಡಲು ಮನವಿ ಮಾಡಿರುವುದನ್ನು ಪ್ರಶ್ನಿಸಿದ ಖೇರಾ, “ರೈತರು ಒಂದೇ ದಿನದಲ್ಲಿ ಕೃಷಿ ಪದ್ಧತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಪರ್ಯಾಯ ವ್ಯವಸ್ಥೆಗಳಿಗೆ ಬದಲಾವಣೆ ಮಾಡಲು ಸರ್ಕಾರದ ಹೂಡಿಕೆ, ವೈಜ್ಞಾನಿಕ ನೆರವು ಹಾಗೂ ಸಂಸ್ಥಾತ್ಮಕ ಬೆಂಬಲ ಅಗತ್ಯ” ಎಂದು ಹೇಳಿದರು.

ಸರ್ಕಾರವು ನೈಜ ಸಮಸ್ಯೆಗಳ ಪರಿಹಾರಕ್ಕಿಂತ ಜಾಹೀರಾತು ಮತ್ತು ಪಿಆರ್ ಅಭಿಯಾನಗಳಲ್ಲೇ ತೊಡಗಿಕೊಂಡಿದೆ ಎಂದು ಆರೋಪಿಸಿದ ಅವರು, ಭಾರತದ ಕಾರ್ಮಿಕ ಶಕ್ತಿಯಲ್ಲಿ ರೈತರ ಪಾಲು ಶೇಕಡಾ 46.1ರಷ್ಟಿದ್ದು, ಕೃಷಿ ಕ್ಷೇತ್ರ ದೇಶದ ಜಿಡಿಪಿಗೆ ಸುಮಾರು ಶೇಕಡಾ 18ರಷ್ಟು ಕೊಡುಗೆ ನೀಡುತ್ತದೆ. ಇಂತಹ ಪ್ರಮುಖ ಕ್ಷೇತ್ರಕ್ಕಾಗಿ ಸರ್ಕಾರ ಗಂಭೀರ ಯೋಜನೆ ರೂಪಿಸದಿದ್ದರೆ ಅದು ಯಾರ ಹಿತಕ್ಕಾಗಿ ಕೆಲಸ ಮಾಡುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande