ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಹೆಣ್ಣು ಚಿರತೆ ಬಿಡುಗಡೆ
ಭೋಪಾಲ್, 11 ಮೇ (ಹಿ.ಸ.) : ಆ್ಯಂಕರ್ : ಮಧ್ಯ ಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸೋಮವಾರ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಹೆಣ್ಣು ಚಿರತೆಗಳನ್ನು ಮುಕ್ತ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಿದರು. ಇದರೊಂದಿಗೆ ರಾಜ್ಯದಲ್ಲಿನ ಚಿರತೆಗಳ ಒಟ್ಟು ಸಂಖ್ಯೆ 57ಕ್ಕೆ ಏರಿಕ
Cheta release


ಭೋಪಾಲ್, 11 ಮೇ (ಹಿ.ಸ.) :

ಆ್ಯಂಕರ್ : ಮಧ್ಯ ಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸೋಮವಾರ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಹೆಣ್ಣು ಚಿರತೆಗಳನ್ನು ಮುಕ್ತ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಿದರು. ಇದರೊಂದಿಗೆ ರಾಜ್ಯದಲ್ಲಿನ ಚಿರತೆಗಳ ಒಟ್ಟು ಸಂಖ್ಯೆ 57ಕ್ಕೆ ಏರಿಕೆಯಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಮಧ್ಯಪ್ರದೇಶವು “ಚಿರತೆಗಳ ನಾಡಾಗಿ” ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿದರು. ದೇಶದ ಚಿರತೆ ಮರುಸ್ಥಾಪನೆ ಯೋಜನೆ ಯಶಸ್ವಿಯಾಗಿ ಮುಂದುವರಿಯುತ್ತಿದ್ದು, ಈ ಕಾರ್ಯದಲ್ಲಿ ಮಧ್ಯಪ್ರದೇಶ ಹೊಸ ಸಾಧನೆ ಮಾಡುತ್ತಿದೆ ಎಂದು ತಿಳಿಸಿದರು.

ಮಧ್ಯಪ್ರದೇಶದ ನೆಲ ಚಿರತೆಗಳಿಗೆ ಅನುಕೂಲಕರ ವಾತಾವರಣ ಒದಗಿಸುವ ಮೂಲಕ ಅವುಗಳನ್ನು ತನ್ನ ಕುಟುಂಬದ ಭಾಗವನ್ನಾಗಿಸಿಕೊಂಡಿದೆ ಎಂದು ಹೇಳಿದರು. ಸುಮಾರು ಮೂರೂವರೆ ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆ ಮರುಸ್ಥಾಪನೆ ಯೋಜನೆಗೆ ಚಾಲನೆ ನೀಡಿದ್ದರು. ಈಗ ಈ ಯೋಜನೆ ಯಶಸ್ಸಿನ ಹೊಸ ಹಂತಗಳತ್ತ ಸಾಗುತ್ತಿದೆ ಎಂದರು.

ಮುಖ್ಯಮಂತ್ರಿ ಅವರು ಕುನೋ ನದಿಯ ತೀರದಲ್ಲಿರುವ ಬಿಡುಗಡೆ ಕೇಂದ್ರದಲ್ಲಿ ಗುರುತು ಸಂಖ್ಯೆ 2 ಮತ್ತು ಗುರುತು ಸಂಖ್ಯೆ 3 ಹೊಂದಿರುವ ಎರಡು ಹೆಣ್ಣು ಚಿರತೆಗಳನ್ನು ಕಾಡಿಗೆ ಬಿಡುಗಡೆ ಮಾಡಿದರು.

ಮಧ್ಯಪ್ರದೇಶವು ಧಾರ್ಮಿಕ ಕ್ಷೇತ್ರ, ಹೂಡಿಕೆ ಹಾಗೂ ಜೀವ ವೈವಿಧ್ಯದ ಪ್ರಮುಖ ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ನೈಮಿಬಿಯಾ, ದಕ್ಷಿಣ ಆಫ್ರಿಕಾ ಹಾಗೂ ಬೋಟ್ಸ್ವಾನಾದಿಂದ ಚಿರತೆಗಳನ್ನು ಮರುಪರಿಚಯಿಸುವ ಕಾರ್ಯ ನಿರಂತರ ಯಶಸ್ಸು ಕಾಣುತ್ತಿದೆ ಎಂದರು.

ಈ ಪ್ರಯತ್ನದಿಂದ ಮಧ್ಯಪ್ರದೇಶಕ್ಕೆ ದೇಶದಾದ್ಯಂತ “ಚಿರತೆಗಳ ನಾಡು” ಎಂಬ ಹೆಗ್ಗಳಿಕೆ ದೊರೆತಿದೆ ಎಂದು ಹೇಳಿದರು.

ಪ್ರಸ್ತುತ ರಾಜ್ಯದಲ್ಲಿರುವ 57 ಚಿರತೆಗಳಲ್ಲಿ 54 ಚಿರತೆಗಳು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿದ್ದು, ಉಳಿದ 3 ಚಿರತೆಗಳು ಗಾಂಧಿ ಸಾಗರ ವನ್ಯಜೀವಿ ಅಭಯಾರಣ್ಯದಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ರಾಕೇಶ್ ಶುಕ್ಲಾ, ಮಧ್ಯಪ್ರದೇಶ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮನಿವಾಸ್ ರಾವತ್, ಸಹರಿಯಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಗುಡ್ಡಿಬಾಯಿ ಆದಿವಾಸಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande