ತ್ಯಾಗಗಳ ಸಲಹೆ ಸರ್ಕಾರದ ವೈಫಲ್ಯದ ಸಂಕೇತ : ರಾಹುಲ್ ಗಾಂಧಿ
ಉಂಟಾಗಿದೆ
ರಾಹುಲ್ ಗಾಂಧಿ ಎಕ್ಸ ಹೇಳಿಕೆ


ನವದೆಹಲಿ, 11 ಮೇ (ಹಿ.ಸ.) :

ಆ್ಯಂಕರ್ : ಲೋಕ ಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಾರ್ವಜನಿಕರಿಗೆ ನೀಡಲಾಗುತ್ತಿರುವ ತ್ಯಾಗಗಳ ಸಲಹೆ”ಗಳನ್ನು ಸರ್ಕಾರದ ವೈಫಲ್ಯದ ಪುರಾವೆ ಎಂದು ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ರಾಹುಲ್ ಗಾಂಧಿ, “ನಿನ್ನೆ ಮೋದಿ ಅವರು ಸಾರ್ವಜನಿಕರಿಂದ ತ್ಯಾಗಗಳನ್ನು ಕೇಳಿದರು — ಚಿನ್ನ ಖರೀದಿಸಬೇಡಿ, ವಿದೇಶ ಪ್ರವಾಸಕ್ಕೆ ಹೋಗಬೇಡಿ, ಕಡಿಮೆ ಪೆಟ್ರೋಲ್ ಬಳಸಿ, ಗೊಬ್ಬರ ಹಾಗೂ ಅಡುಗೆ ಎಣ್ಣೆ ಬಳಕೆಯನ್ನು ಕಡಿಮೆ ಮಾಡಿ, ಮೆಟ್ರೋದಲ್ಲಿ ಪ್ರಯಾಣಿಸಿ, ಮನೆಯಿಂದಲೇ ಕೆಲಸ ಮಾಡಿ ಎಂದು ಸಲಹೆ ನೀಡಿದರು” ಎಂದು ಉಲ್ಲೇಖಿಸಿದ್ದಾರೆ.

“ಇವು ಧರ್ಮೋಪದೇಶಗಳಲ್ಲ, ಇವು ಸರ್ಕಾರದ ವೈಫಲ್ಯದ ಸಂಕೇತಗಳು. ಕಳೆದ 12 ವರ್ಷಗಳಲ್ಲಿ ದೇಶವನ್ನು ಇಂತಹ ಪರಿಸ್ಥಿತಿಗೆ ತಂದು ನಿಲ್ಲಿಸಲಾಗಿದೆ. ಈಗ ಜನರು ಏನು ಖರೀದಿಸಬೇಕು, ಏನು ಖರೀದಿಸಬಾರದು, ಎಲ್ಲಿಗೆ ಹೋಗಬೇಕು, ಎಲ್ಲಿಗೆ ಹೋಗಬಾರದು ಎಂದು ಸರ್ಕಾರವೇ ಹೇಳಬೇಕಾದ ಪರಿಸ್ಥಿತಿ ಉಂಟಾಗಿದೆ” ಎಂದು ಅವರು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ಆಡಳಿತ ಶೈಲಿಯನ್ನು ಟೀಕಿಸಿದ ರಾಹುಲ್ ಗಾಂಧಿ, “ಪ್ರತಿ ಬಾರಿ ಸರ್ಕಾರ ತನ್ನ ಹೊಣೆಗಾರಿಕೆಯನ್ನು ಜನರ ಮೇಲೇ ಹಾಕುತ್ತಿದೆ. ದೇಶವನ್ನು ನಡೆಸುವ ಸಾಮರ್ಥ್ಯ ಈಗ ರಾಜಿ ಮಾಡಿಕೊಂಡ ಪ್ರಧಾನಿಯ ಕೈಯಲ್ಲಿ ಉಳಿದಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande