ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆ
ನವದೆಹಲಿ, 01 ಮೇ (ಹಿ.ಸ.) : ಆ್ಯಂಕರ್ : ದೇಶದ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಭಾರಿ ಏರಿಕೆ ಮಾಡಿದ್ದು, ಹೋಟೆಲ್ ಹಾಗೂ ವ್ಯಾಪಾರ ವಲಯಕ್ಕೆ ದೊಡ್ಡ ಹೊಡೆತ ನೀಡಿದೆ. 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ₹2,078.50ರಿಂದ ಏ
ಸಿಲಿಂಡರ್


ನವದೆಹಲಿ, 01 ಮೇ (ಹಿ.ಸ.) :

ಆ್ಯಂಕರ್ : ದೇಶದ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಭಾರಿ ಏರಿಕೆ ಮಾಡಿದ್ದು, ಹೋಟೆಲ್ ಹಾಗೂ ವ್ಯಾಪಾರ ವಲಯಕ್ಕೆ ದೊಡ್ಡ ಹೊಡೆತ ನೀಡಿದೆ. 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ₹2,078.50ರಿಂದ ಏಕಾಏಕಿ ₹3,071.50ಕ್ಕೆ ಏರಿಕೆಯಾಗಿದೆ.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮಾಹಿತಿ ಪ್ರಕಾರ, ಈ ಬಾರಿ ಸುಮಾರು ₹1,000ರವರೆಗೆ ಏರಿಕೆ ಮಾಡಲಾಗಿದೆ. ಇದೇ ರೀತಿಯಲ್ಲಿ, ಕೋಲ್ಕತ್ತಾದಲ್ಲಿ ₹2,208ರಿಂದ ₹3,202ಕ್ಕೆ, ಮುಂಬೈನಲ್ಲಿ ₹2,031ರಿಂದ ₹3,024ಕ್ಕೆ ಮತ್ತು ಚೆನ್ನೈನಲ್ಲಿ ₹2,246.50ರಿಂದ ₹3,237ಕ್ಕೆ ಬೆಲೆ ಏರಿಕೆಯಾಗಿದೆ.

ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಕಳೆದ ಐದು ತಿಂಗಳಲ್ಲಿ ಆರನೇ ಬಾರಿ ಹೆಚ್ಚಳ ಕಂಡಿದೆ. ಏಪ್ರಿಲ್ 1ರಂದು ₹218 ಏರಿಕೆಯಾಗಿದ್ದರೆ, ಮಾರ್ಚ್ ತಿಂಗಳಲ್ಲಿ ಎರಡು ಹಂತಗಳಲ್ಲಿ ₹28 ಮತ್ತು ₹114.50 ಹೆಚ್ಚಿಸಲಾಗಿತ್ತು. ಫೆಬ್ರವರಿಯಲ್ಲಿ ₹49 ಹಾಗೂ ಜನವರಿಯಲ್ಲಿ ₹111 ಹೆಚ್ಚಳ ಕಂಡಿತ್ತು. ಡಿಸೆಂಬರ್ 2025ರಲ್ಲಿ ಮಾತ್ರ ಬೆಲೆಯಲ್ಲಿ ಕಡಿತ ಮಾಡಲಾಗಿತ್ತು.

ಆದರೆ ಗೃಹ ಬಳಕೆಯ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂಬುದು ಗ್ರಾಹಕರಿಗೆ ಸ್ವಲ್ಪ ಮಟ್ಟಿನ ಸಮಾಧಾನ ನೀಡಿದೆ. ಪ್ರಸ್ತುತ ದೆಹಲಿಯಲ್ಲಿ ಇದರ ಬೆಲೆ ₹913 ಆಗಿದ್ದು, ಮುಂಬೈನಲ್ಲಿ ₹912.50, ಕೋಲ್ಕತ್ತಾದಲ್ಲಿ ₹939 ಹಾಗೂ ಚೆನ್ನೈನಲ್ಲಿ ₹928.50 ಇದೆ.

ಇನ್ನೊಂದೆಡೆ, ಎಲ್ಪಿಜಿ ಸಿಲಿಂಡರ್ಗಳ ಕಾಳಸಂತೆಯನ್ನು ತಡೆಗಟ್ಟಲು ವಿತರಣೆ ವ್ಯವಸ್ಥೆಯನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ಇಂದಿನಿಂದ ಸಿಲಿಂಡರ್ ವಿತರಣೆ ವೇಳೆ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಅನ್ನು ತೋರಿಸಿದಾಗ ಮಾತ್ರ ಸಿಲಿಂಡರ್ ನೀಡಲಾಗುತ್ತದೆ. ಮೊಬೈಲ್ ಸಂಖ್ಯೆ ನೋಂದಣಿ ಆಗಿರದಿದ್ದರೆ, ಗ್ರಾಹಕರು ಗ್ಯಾಸ್ ಏಜೆನ್ಸಿ ಅಥವಾ ಡೆಲಿವರಿ ಅಪ್ಲಿಕೇಶನ್ ಮೂಲಕ ತಕ್ಷಣ ನವೀಕರಿಸಬಹುದು ಎಂದು ತಿಳಿಸಲಾಗಿದೆ.

ಈ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್, ಢಾಬಾ ಮತ್ತು ಸಣ್ಣ ವ್ಯಾಪಾರಿಗಳಿಗೆ ವೆಚ್ಚ ಹೆಚ್ಚಳವಾಗುವ ಸಾಧ್ಯತೆ ಇದೆ. ಅದರ ಪರಿಣಾಮವಾಗಿ ಆಹಾರ ಪದಾರ್ಥಗಳ ಬೆಲೆಯಲ್ಲೂ ಹೆಚ್ಚಳ ಕಂಡು ಬರುವ ಸಾಧ್ಯತೆ ಇದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande