ಬಿಸಿಲಿನ ತಾಪದಿಂದ ರಕ್ಷಣೆ ; ಬಾಗಲಕೋಟೆ ಪೊಲೀಸ್ ಶ್ವಾನ ದಳಕ್ಕೆ ಕೂಲರ್ ವ್ಯವಸ್ಥೆ
ಬಾಗಲಕೋಟೆ, 01 ಮೇ (ಹಿ.ಸ.) : ಆ್ಯಂಕರ್ : ಬೇಸಿಗೆ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಶ್ವಾನಗಳ ಆರೋಗ್ಯ ಮತ್ತು ಕಾರ್ಯಕ್ಷಮತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬಾಗಲಕೋಟೆ ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಪೊಲೀಸ್ ಶ್ವಾನ ದಳದ ಶ್ವಾನಗಳಿಗೆ ಬಿಸಿಲಿನ ತಾಪ ಕಡಿಮೆ
ಶ್ವಾನ


ಬಾಗಲಕೋಟೆ, 01 ಮೇ (ಹಿ.ಸ.) :

ಆ್ಯಂಕರ್ : ಬೇಸಿಗೆ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಶ್ವಾನಗಳ ಆರೋಗ್ಯ ಮತ್ತು ಕಾರ್ಯಕ್ಷಮತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬಾಗಲಕೋಟೆ ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಪೊಲೀಸ್ ಶ್ವಾನ ದಳದ ಶ್ವಾನಗಳಿಗೆ ಬಿಸಿಲಿನ ತಾಪ ಕಡಿಮೆ ಮಾಡಲು ವಿಶೇಷವಾಗಿ ಕೂಲರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಪೊಲೀಸ್ ಇಲಾಖೆಯ ಶ್ವಾನ ದಳವು ವಿವಿಧ ಅಪರಾಧ ಪ್ರಕರಣಗಳ ತನಿಖೆ, ಸ್ಫೋಟಕ ವಸ್ತುಗಳ ಪತ್ತೆ, ನಾಪತ್ತೆಯಾದವರ ಶೋಧ ಕಾರ್ಯ ಸೇರಿದಂತೆ ಅನೇಕ ಪ್ರಮುಖ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಇಂತಹ ಸಂದರ್ಭಗಳಲ್ಲಿ ಶ್ವಾನಗಳ ಆರೋಗ್ಯ ಅತ್ಯಂತ ಮುಖ್ಯವಾಗಿದ್ದು, ಹೆಚ್ಚಿದ ಉಷ್ಣಾಂಶವು ಅವುಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಬಾಗಲಕೋಟೆ ಜಿಲ್ಲೆಯ ಉಷ್ಣತೆ ಇತ್ತೀಚೆಗೆ ಗರಿಷ್ಠ ಮಟ್ಟ ತಲುಪಿರುವುದರಿಂದ, ಶ್ವಾನಗಳಿಗೆ ಅನುಕೂಲಕರ ವಾತಾವರಣ ಕಲ್ಪಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆ ಶ್ವಾನ ದಳದ ವಾಸಸ್ಥಳಗಳಲ್ಲಿ ಕೂಲರ್ಗಳನ್ನು ಅಳವಡಿಸಿ, ತಂಪಾದ ವಾತಾವರಣವನ್ನು ನಿರ್ಮಿಸಲಾಗಿದೆ. ಜೊತೆಗೆ ಶ್ವಾನಗಳಿಗೆ ಸಮರ್ಪಕ ನೀರು, ಪೌಷ್ಟಿಕ ಆಹಾರ ಹಾಗೂ ನಿಯಮಿತ ವೈದ್ಯಕೀಯ ತಪಾಸಣೆಗಳನ್ನೂ ಒದಗಿಸಲಾಗುತ್ತಿದೆ.

ಈ ಕ್ರಮವು ಪೊಲೀಸ್ ಇಲಾಖೆಯ ಪ್ರಾಣಿಪ್ರೀತಿ ಮತ್ತು ಮಾನವೀಯತೆಯನ್ನು ಪ್ರತಿಬಿಂಬಿಸುವುದಾಗಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಶ್ವಾನಗಳು ಕೇವಲ ಸೇವಾ ಪ್ರಾಣಿಗಳಷ್ಟೇ ಅಲ್ಲ, ಪೊಲೀಸ್ ಇಲಾಖೆಯ ಪ್ರಮುಖ ಸಹೋದ್ಯೋಗಿಗಳಾಗಿದ್ದು, ಅವುಗಳ ಆರೈಕೆ ಅತ್ಯಗತ್ಯ ಎಂಬ ಸಂದೇಶವನ್ನು ಈ ಕಾರ್ಯ ಕ್ರಮವು ಸಾರುತ್ತದೆ.

ಈ ಪ್ರಯತ್ನದಿಂದ ಶ್ವಾನ ದಳದ ಕಾರ್ಯಕ್ಷಮತೆ ಇನ್ನಷ್ಟು ಹೆಚ್ಚಲಿದ್ದು, ಬಿಸಿಲಿನ ತಾಪದಲ್ಲಿಯೂ ಅವುಗಳು ಸುಗಮವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande